ಶಿವಮೊಗ್ಗ: ನಗರದ ಗಾಂಧಿ ಬಜಾರ್ 1ನೇ ಕ್ರಾಸ್ ಸಮೀಪದ ಲಷ್ಕರ್ ಮೊಹಲ್ಲಾ ಪ್ರದೇಶದಲ್ಲಿ ರೌಡಿಶೀಟರ್ ನರಸಿಂಹ (39) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಇದನ್ನೂ ಓದಿ > ಹೊಸನಗರ, ಟ್ರ್ಯಾಕ್ಟರ್-ಕಾರು ನಡುವೆ ಡಿಕ್ಕಿ
ಗೋವಿಂದಪುರ ಆಶ್ರಯ ಬಡಾವಣೆ ನಿವಾಸಿಯಾಗಿದ್ದ ನರಸಿಂಹನ ಮೇಲೆ, ವಾಹನದಲ್ಲಿ ಬಂದ ನಾಲ್ಕೈದು ಜನರಿದ್ದ ದುಷ್ಕರ್ಮಿಗಳ ತಂಡ ದಾಳಿ ನಡೆಸಿದರೆಂದು ತಿಳಿದುಬಂದಿದೆ. ಮನೆಯೊಂದರ ಒಳಗೆ ನುಗ್ಗಿದ ಆರೋಪಿಗಳು, ಮನಸೋಯಿಚ್ಛೆ ದಾಳಿ ನಡೆಸಿ ತಲೆ ಹಾಗೂ ಕೈ ಭಾಗಗಳಿಗೆ ಗಂಭೀರವಾಗಿ ಗಾಯಗೊಳಿಸಿದ್ದಾರೆ. ದಾಳಿಯ ಭೀಕರತೆಗೆ ನರಸಿಂಹನ ಕೈಗಳು ತುಂಡಾಗಿದ್ದು, ಮುಖ ಗುರುತು ಸಿಗದಂತಾಗಿದೆ. ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ > ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ, ಎಲ್ಲಿಯವರೆಗೂ, ಪರ್ಯಾಯ ಮಾರ್ಗ ಯಾವುದು?
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಕಾರಿಯಪ್ಪ ಹಾಗೂ ಕೋಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ > ಮನೆ ಕಳ್ಳತನದ ಆರೋಪಿ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ













