ಶಿವಮೊಗ್ಗ: ಕುಂಸಿ ಠಾಣಾ ವ್ಯಾಪ್ತಿಯ ಸುತ್ತುಕೋಟೆ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಪ್ರವೀಣ್ ಎಂಬ ಯುವಕನ ಕೊಲೆ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ತಿಳಿಸಿದರು.
ಇದನ್ನೂ ಓದಿ > ಎರಡು ಕಾರುಗಳ ನಡುವೆ ಭೀಕರ ಅಪಘಾತ, ವಾಹನಗಳು ಜಖಂ!
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಲಾಗಿತ್ತು. ಆರೋಪಿ ಪತ್ತೆಗೆ ಈಗಾಗಲೇ ಎರಡು ತಂಡ ರಚನೆ ಮಾಡಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ > ಶಿವಮೊಗ್ಗ, ಸುತ್ತುಕೋಟೆ ಗ್ರಾಮದ ಮನೆಯಲ್ಲಿಯೇ ಯುವಕನ ಭೀಕರ ಕೊಲೆ!
ಕೊಲೆಯ ಹಿಂದಿನ ಕಾರಣವನ್ನು ವಿವಿಧ ಆಂಗಲ್‌ಗಳಲ್ಲಿ ಪರಿಶೀಲನೆ ಮಾಡಿ ತನಿಖೆ ಮುಂದುವರಿಸಿದ್ದೇವೆ ಎಂದರು.














