ಶಿವಮೊಗ್ಗ: ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ಮನೆಯಲ್ಲಿಯೇ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಸುತ್ತುಕೋಟೆ ಗ್ರಾಮದ ನಿವಾಸಿ ಪ್ರವೀಣ್ (29) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ > ಮಹಿಷಿ ಮಠದಲ್ಲಿ ಕಳ್ಳತನ, 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ
ಪ್ರವೀಣ್ ಟ್ರಾಕ್ಟರ್ ಬಾಡಿಗೆ ಹಾಗೂ ಇತರೆ ಕೆಲಸಗಳನ್ನು ಮಾಡಿಕೊಂಡಿದ್ದ ಎನ್ನಲಾಗಿದೆ. ಎಂದಿನಂತೆ ನಿನ್ನೆ ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದ ವೇಳೆ ಈ ಕೃತ್ಯ ನಡೆದಿದೆ. ತಲೆ ಭಾಗದಲ್ಲಿ ಮಾರಕಾಸ್ತ್ರದಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕೆಲಸವೊಂದಕ್ಕೆ ಬರುವಂತೆ ಪ್ರವೀಣ್ ಕೆಲವು ಯುವಕರಿಗೆ ತಿಳಿಸಿದ್ದನು. ಅದರಂತೆ ಇಂದು ಬೆಳಗ್ಗೆ ಯುವಕರು ಪ್ರವೀಣ್‌ಗೆ ಕರೆ ಮಾಡಿದ್ದರು. ಆದರೆ ಆತ ಫೋನ್ ಕರೆ ಸ್ವೀಕರಿಸದಿದ್ದಾಗ ಸಂಶಯಗೊಂಡು ಮನೆಯೊಳಗೆ ಪರಿಶೀಲಿಸಿದ್ದಾರೆ. ಈ ವೇಳೆ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ > ತೀರ್ಥಹಳ್ಳಿ, ಮೋಟಾರ್ ಕೇಬಲ್ ವೈರ್ ಕಳ್ಳತನ, ಶಿವಮೊಗ್ಗದ ವ್ಯಕ್ತಿ ಬಂಧನ
ವ್ಯವಹಾರಿಕ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.













