ರಿಪ್ಪನ್ಪೇಟೆ: ಬಾವಿಯಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರತೆಗೆದು ಖಾಲಿ ಮಾಡಲು ಮೋಟಾರ್ ಆನ್ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಹೊಸನಗರ ತಾಲೂಕಿನ ಹರತಾಳು ಗ್ರಾಮದ ದೊಣಂದೂರಿನಲ್ಲಿ ನಡೆದಿದೆ.
ಇದನ್ನೂ ಓದಿ > ಎರಡು ಕಾರುಗಳ ನಡುವೆ ಭೀಕರ ಅಪಘಾತ, ವಾಹನಗಳು ಜಖಂ!
ದೊಣಂದೂರು ನಿವಾಸಿ ಕೃಷ್ಣಪ್ಪ (59) ಮೃತರು. ಇವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಘಟನೆಯ ವಿವರ:
ಭಾನುವಾರ ಬೆಳಗ್ಗೆ ಮನೆಯ ಹಿಂಭಾಗದಲ್ಲಿ ಬಾವಿ ತೋಡುವ ಕಾಮಗಾರಿ ನಡೆಯುತ್ತಿತ್ತು. ಬಾವಿಯಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರತೆಗೆದು ಖಾಲಿ ಮಾಡಲು ಮೋಟಾರ್ ಆನ್ ಮಾಡುವ ಉದ್ದೇಶದಿಂದ ಕೃಷ್ಣಪ್ಪ ಅವರು ಮೋಟಾರ್ ವೈರನ್ನು ಮನೆಯ ಅಡುಗೆಮನೆಯ ಸ್ವಿಚ್ಗೆ ಸಂಪರ್ಕಿಸಲು ಮುಂದಾಗಿದ್ದರು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಅವರ ಬಲಗೈಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಪತ್ನಿ ಹಾಗೂ ಸ್ಥಳದಲ್ಲಿದ್ದ ಕಾರ್ಮಿಕರ ಸಹಾಯದಿಂದ ಅವರನ್ನು ತಕ್ಷಣ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ > ಮನೆಯಲ್ಲಿ ಮಲಗಿರುವಾಗಲೇ ಕಳ್ಳತನಕ್ಕೆ ಯತ್ನ!
ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ > ಎಸ್ಸಿ, ಎಸ್ಟಿ, ಬಿಪಿಎಲ್ ಫಲಾನುಭವಿಗಳು ಆತಂಕಕ್ಕೆ, ಕಲ್ಲೂರು ಮೇಘರಾಜ್ ಅವರ ಆಗ್ರಹವೇನು?













