ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಾಹನಗಳ ಸ್ಟೆಪ್ನಿ ಟೈರ್ ಹಾಗೂ ರಿಮ್‌ಗಳ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗದ ಟಿಪ್ಪು ನಗರದ ಸೋನು (27 ವರ್ಷ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ > ತ್ಯಾಗರ್ತಿ ಬಂದ್ ಯಶಸ್ವಿ, ಮಳೆಯ ನಡುವೆಯೂ ಮೆರವಣಿಗೆ, ಅಧಿಕಾರಿಗಳಿಗೆ ದಿಗ್ಭಂದನ!
ಈ ಸಂಬಂಧ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರವೀಣ್ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್, ಉಮೇಶ್ ಅವರನ್ನೊಳಗೊಂಡ ತಂಡವು ಕಳ್ಳತನ ಕೃತ್ಯದಲ್ಲಿ ತೊಡಗಿದ್ದ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿ, ಕಳವು ಮಾಡಲಾಗಿದ್ದ 45,000/- ರೂ ಮೌಲ್ಯದ 03 ಸ್ಟೆಪ್ನಿ ಟೈರ್ ಮತ್ತು ರಿಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ > ಚಾಕು ತೋರಿಸಿ ದರೋಡೆ, ಯುವಕನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
ಕಳೆದ ಫೆಬ್ರವರಿ 6, 2026 ರಂದು ರಾತ್ರಿ ವೇಳೆಯಲ್ಲಿ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆಚಾಪುರ ಗ್ರಾಮದ ’ಶಿವ ಶ್ರೇಯ ಎಂಟರ್ ಪ್ರೈಸಸ್’ ಮಳಿಗೆಯ ಮುಂದಿನ ಆವರಣದಲ್ಲಿ ನಿಲ್ಲಿಸಲಾಗಿದ್ದ ಮೂರು ಟಾಟಾ ಇಂಟ್ರಾ ವಾಹನಗಳ ಸ್ಟೆಪ್ನಿ ಟೈರ್ ಹಾಗೂ ರಿಮ್‌ಗಳನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಮಳಿಗೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.















