• About Us
  • Advertise
  • Privacy & Policy
  • Contact Us
Sunday, July 5, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ ಸಾಗರ

ತ್ಯಾಗರ್ತಿ ಬಂದ್ ಯಶಸ್ವಿ, ಮಳೆಯ ನಡುವೆಯೂ ಮೆರವಣಿಗೆ, ಅಧಿಕಾರಿಗಳಿಗೆ ದಿಗ್ಭಂದನ!

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
July 3, 2026
in ಸಾಗರ
ತ್ಯಾಗರ್ತಿ ಬಂದ್ ಯಶಸ್ವಿ, ಮಳೆಯ ನಡುವೆಯೂ ಮೆರವಣಿಗೆ, ಅಧಿಕಾರಿಗಳಿಗೆ ದಿಗ್ಭಂದನ!
Share on FacebookShare on TwitterShare on WhatsApp

ಸಾಗರ : ತಾಲ್ಲೂಕಿನ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಗ್ರಿಡ್ ಕಾಮಗಾರಿ ತಕ್ಷಣ ಮುಗಿಸುವಂತೆ ಒತ್ತಾಯಿಸಿ ಗುರುವಾರ ವಿದ್ಯುತ್ ಗ್ರಿಡ್ ಹೋರಾಟ ಸಮಿತಿ ವತಿಯಿಂದ ಕರೆ ಕೊಡಲಾಗಿದ್ದ ತ್ಯಾಗರ್ತಿ ಬಂದ್ ಯಶಸ್ವಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ಗ್ರಾಮದ ಯಾವುದೇ ಅಂಗಡಿ ಮುಂಗಟ್ಟುಗಳು ಬಾಗಿಲು ತೆಗೆಯದೆ ಬಂದ್‌ಗೆ ಸಹಕಾರ ನೀಡಿದರು. ಸುರಿವ ಮಳೆಯ ನಡುವೆಯೂ ಸಮಿತಿಯು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸೋಮಶೇಖರ ಲ್ಯಾವಿಗೆರೆ, ಕಾಮಗಾರಿ ಪ್ರಾರಂಭವಾಗಿ ನಾಲ್ಕೈದು ವರ್ಷ ಕಳೆದಿದ್ದರೂ ಬೇರೆಬೇರೆ ಕಾರಣಗಳಿಂದ ಅದನ್ನು ವಿಳಂಬ ಮಾಡಲಾಗುತ್ತಿದೆ. ಈಚೆಗೆ ಶಾಸಕರ ಎದುರಿನಲ್ಲಿ ಮೂರು ತಿಂಗಳಿನೊಳಗೆ ಕಾಮಗಾರಿ ಮುಗಿಸುತ್ತೇವೆ ಎಂದು ಅಧಿಕಾರಿಗಳು ನೀಡಿದ ಭರವಸೆ ಹುಸಿಯಾಗಿದೆ. ಶಾಸಕರು, ಸಂಸದರ ಮಾತಿಗೆ ಅಧಿಕಾರಿಗಳು ಮಂಕುಬೂದಿ ಎರಚುತ್ತಿದ್ದಾರೆ. ರೈತರು ಬೀದಿಗೆ ಇಳಿಯುವ ಕೆಲಸವನ್ನು ಮಾಡುತ್ತಿದ್ದೀರಿ. ತಕ್ಷಣ ವಿದ್ಯುತ್ ಗ್ರಿಡ್ ಕಾಮಗಾರಿ ಮುಗಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಅಧಿಕಾರಿಗಳಿಗೆ ದಿಗ್ಭಂದನ :

ಮನವಿ ಸ್ವೀಕರಿಸಲು ಬಂದ ಮೆಸ್ಕಾಂ ಅಧಿಕಾರಿ ಹಾಗೂ ಉಪ ತಹಶೀಲ್ದಾರ್ ಅವರನ್ನು ಪ್ರತಿಭಟನಾರಾರರು ದಿಗ್ಬಂಧನ ಹಾಕಿ ಬೇಡಿಕೆ ಈಡೇರಿಸಿ ಹೋಗಿ ಎಂದು ಪಟ್ಟು ಹಿಡಿಯುವ ಜೊತೆಗೆ ಮನವಿ ಸ್ವೀಕರಿಸಲು ಉಪ ವಿಭಾಗಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ನಂತರ ಮೆಸ್ಕಾಂ ಕಚೇರಿ ಆವರಣದಲ್ಲಿ ರೈತರು ಅಡುಗೆ ಬೇಯಿಸಿ ಊಟ ಮಾಡಿದರು.

ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಮಾತನಾಡಿ, ತ್ಯಾಗದ ಮೂಲಕ ನಾಡಿಗೆ ವಿದ್ಯುತ್ ನೀಡಿದ ಹೆಗ್ಗಳಿಕೆ ನಮ್ಮ ತಾಲ್ಲೂಕಿನದ್ದು. ಉಳ್ಳೂರು-ತ್ಯಾಗರ್ತಿ ವಿದ್ಯುತ್ ಗ್ರಿಡ್ ಕಾಮಗಾರಿ ಇಷ್ಟೊಂದು ವಿಳಂಬವಾಗಲು ಕಾರಣ ಏನು ಎನ್ನುವುದನ್ನು ಸ್ಪಷ್ಟಪಡಿಸಿ. ಕಳೆದ ಸರ್ಕಾರದ ಅವಧಿಯಲ್ಲಿ ಶಂಕುಸ್ಥಾಪನೆಯಾದ ಕಾಮಗಾರಿ ಹಣ ಇದ್ದರೂ ಏಕೆ ಪೂರ್ಣಗೊಂಡಿಲ್ಲ ಎಂದರೇ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು, ೨೦೧೬ರಲ್ಲಿ ಕಾಗೋಡು ತಿಮ್ಮಪ್ಪನವರು ವಿದ್ಯುತ್ ಗ್ರಿಡ್‌ಗೆ ಯೋಜನೆ ರೂಪಿಸಿದ್ದರು. ಯೋಜನೆ ರೂಪಿಸುವಾಗ ಸಣ್ಣಪುಟ್ಟ ಕಾನೂನು ತೊಡಕು ಬರುತ್ತದೆ. ವಿರೋಧ ವ್ಯಕ್ತಪಡಿಸಿದವರ ಮನವೊಲಿಸಿ ಕಾಮಗಾರಿ ಮುಗಿಸುವತ್ತ ಅಧಿಕಾರಿಗಳು ಗಮನ ಹರಿಸಬೇಕಾಗಿತ್ತು. ರೈತರಿಗೆ ತೊಂದರೆ ಆಗದಂತೆ ತಕ್ಷಣ ಕಾಮಗಾರಿ ಮುಗಿಸಿ ಎಂದರು.

ಇದನ್ನೂ ಓದಿ > ಚಾಕು ತೋರಿಸಿ ದರೋಡೆ, ಯುವಕನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ 

ಹೋರಾಟ ಸಮಿತಿಯ ಕುಮಾರಸ್ವಾಮಿ ಕೊಪ್ಪ, ಕಾಮಗಾರಿ ಪೂರ್ಣಗೊಳಿಸಲು ಗ್ರಾಮಸ್ಥರು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಗ್ರಾಮಸ್ಥರು ಭರವಸೆ ನೀಡಿದ್ದರೂ ಇಚ್ಚಾಸಕ್ತಿಯನ್ನು ಗುತ್ತಿಗೆದಾರರು ಪ್ರದರ್ಶನ ಮಾಡುತ್ತಿಲ್ಲ. ರೈತರು ಬೀದಿಗಿಳಿದು ಗ್ರಿಡ್ ಕಾಮಗಾರಿ ಮುಗಿಸಿ ಎಂದು ಬೇಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದರೇ, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಗ್ರಿಡ್ ನಿರ್ಮಾಣಕ್ಕೆ ಬೇಕಾದ ಸಹಕಾರ ನೀಡಲು ರೈತ ಸಂಘ ಎಲ್ಲ ರೀತಿಯ ಬೆಂಬಲ ಗುತ್ತಿಗೆದಾರರಿಗೆ ನೀಡುವ ಭರವಸೆ ನೀಡಿತ್ತು. ಗುತ್ತಿಗೆದಾರರು ರೈತ ಸಂಘ ಸ್ಥಳಕ್ಕೆ ಭೇಟಿ ನೀಡಿದಾಗ ಗುತ್ತಿಗೆದಾರ ಎಂಟು ದಿನದೊಳಗೆ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿದ್ದರು. ಆದರೆ ಎಲ್ಲವೂ ಸುಳ್ಳು ಭರವಸೆ ನೀಡಿದ್ದನ್ನು ರೈತ ಸಂಘ ಖಂಡಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ > ಶಿವಮೊಗ್ಗ, ಗಾಂಜಾ ಮಾರಾಟ ಇಬ್ಬರ ಬಂಧನ

ಪ್ರತಿಭಟನೆ ಉದ್ದೇಶಿಸಿ ಪ್ರಶಾಂತ್ ಕೆ.ಎಸ್., ಮಹಾಬಲೇಶ್ವರ ಗೌಡ ಮಾತನಾಡಿದರು. ಪ್ರತಿಭಟನೆಯಲ್ಲಿ ಟಿ.ಕೆ.ಹನುಮಂತಪ್ಪ, ಶ್ರೀನಾಥ್ ನಾಡಿಗ್, ಕೃಷ್ಣಮೂರ್ತಿ ಹೊಸಂತೆ, ಚೇತನರಾಜ್ ಕಣ್ಣೂರು, ಅಮೃತ್‌ರಾಜ್, ವಿರೇಶ್ ಬರೂರು, ಹಮೀದ್ ಖಾನ್, ಶಿವು ತ್ಯಾಗರ್ತಿ, ವೀರಪ್ಪ ಲ್ಯಾವಿಗೆರೆ, ಸುಭಾಷ್ ಕಲ್ಲನ್, ಖಂಡೋಜಪ್ಪ ಇನ್ನಿತರರು ಹಾಜರಿದ್ದರು.

Tags: kannada newskannada news livelatest newsmalnad newsmarch despite rainofficials stunned!shimogashivamoggaTyagaarthi Bandh successfulಶಿವಮೊಗ್ಗಸಾಗರ :
Previous Post

ಚಾಕು ತೋರಿಸಿ ದರೋಡೆ, ಯುವಕನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ 

Next Post

ವಾಹನಗಳ ಸ್ಟೆಪ್ನಿ ಟೈರ್ ಕಳ್ಳತನ, ಶಿವಮೊಗ್ಗದ ಯುವಕ ಅರೆಸ್ಟ್

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ವಾಹನಗಳ ಸ್ಟೆಪ್ನಿ ಟೈರ್ ಕಳ್ಳತನ, ಶಿವಮೊಗ್ಗದ ಯುವಕ ಅರೆಸ್ಟ್

ವಾಹನಗಳ ಸ್ಟೆಪ್ನಿ ಟೈರ್ ಕಳ್ಳತನ, ಶಿವಮೊಗ್ಗದ ಯುವಕ ಅರೆಸ್ಟ್

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು!

ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು!

July 5, 2026
ತುಂಗಾ ಡ್ಯಾಮ್ ಭರ್ತಿ, ಗೇಟ್‌ಗಳ ಮೂಲಕ ನದಿಗೆ ನೀರು

ತುಂಗಾ ಡ್ಯಾಮ್ ಭರ್ತಿ, ಗೇಟ್‌ಗಳ ಮೂಲಕ ನದಿಗೆ ನೀರು

July 5, 2026
ಉರುಳಿ ಬಿದ್ಧ ಬೃಹತ್ ಗಾತ್ರದ ಮರ, ಸಾಗರ-ಸೊರಬ ರಸ್ತೆ ಸಂಚಾರ ಬಂದ್

ಉರುಳಿ ಬಿದ್ಧ ಬೃಹತ್ ಗಾತ್ರದ ಮರ, ಸಾಗರ-ಸೊರಬ ರಸ್ತೆ ಸಂಚಾರ ಬಂದ್

July 5, 2026
ಪೊಲೀಸರಿಂದ 10 ಕಡೆ ಏಕಕಾಲಕ್ಕೆ ದಾಳಿ, 6 ಜನ ಶಂಕಿತರು ವಶಕ್ಕೆ!

ಪೊಲೀಸರಿಂದ 10 ಕಡೆ ಏಕಕಾಲಕ್ಕೆ ದಾಳಿ, 6 ಜನ ಶಂಕಿತರು ವಶಕ್ಕೆ!

July 5, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು!

ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು!

July 5, 2026
ತುಂಗಾ ಡ್ಯಾಮ್ ಭರ್ತಿ, ಗೇಟ್‌ಗಳ ಮೂಲಕ ನದಿಗೆ ನೀರು

ತುಂಗಾ ಡ್ಯಾಮ್ ಭರ್ತಿ, ಗೇಟ್‌ಗಳ ಮೂಲಕ ನದಿಗೆ ನೀರು

July 5, 2026

Copyright © 2026 Yuva Dhwani. Designed by KIPL