• About Us
  • Advertise
  • Privacy & Policy
  • Contact Us
Tuesday, July 28, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಗೃಹಲಕ್ಷ್ಮಿ 31ನೇ ಕಂತು ಬಿಡುಗಡೆ,  ಗೃಹಜ್ಯೋತಿ ಸಮೀಕ್ಷೆಗೆ ಆತಂಕ ಬೇಡ!

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
July 18, 2026
in ಶಿವಮೊಗ್ಗ, ರಾಜ್ಯ
ಗೃಹಲಕ್ಷ್ಮಿ 31ನೇ ಕಂತು ಬಿಡುಗಡೆ,  ಗೃಹಜ್ಯೋತಿ ಸಮೀಕ್ಷೆಗೆ ಆತಂಕ ಬೇಡ!
Share on FacebookShare on TwitterShare on WhatsApp

ಶಿವಮೊಗ್ಗ: ಗೃಹ ಲಕ್ಷ್ಮಿ ಯೋಜನೆಯ 31 ನೇ ಕಂತು ಬಿಡುಗಡೆಯಾಗುತ್ತಿದ್ದು ಇನ್ನೊಂದೆರಡು ದಿನಗಳಲ್ಲಿ ಫಲಾನುಭವಿಗಳಿಗೆ ಹಣ ಜಮಾ ಆಗಲಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ‌ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದ ನಂತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವು ಯಶಸ್ವಿಯಾಗಿ ಮುನ್ನಡೆಯುತ್ತಿವೆ ಎಂದರು.

ಗೃಹಲಕ್ಷ್ಮಿ ಯೋಜನೆ

ಶಿವಮೊಗ್ಗ ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 31ನೇ ಕಂತಿನ ಹಣ ಬಿಡುಗಡೆಯಾಗಿದ್ದು ಜಿಲ್ಲೆಯ ಒಟ್ಟು 3,79,858 ಅರ್ಹ ಮಹಿಳಾ ಫಲಾನುಭವಿಗಳಿಗೆ ಈ ಕಂತಿನ ಲಾಭ ಸಿಗಲಿದೆ.
ಒಟ್ಟು ರೂ. 75.97 ಕೋಟಿ ಹಣ ಬಿಡುಗಡೆಯಾಗಿದೆ. ಪ್ರತಿಯೊಬ್ಬ ಫಲಾನುಭವಿಯ ಖಾತೆಗೆ ತಲಾ 2,000 ರೂ. ಹಣವು ಮುಂದಿನ ಒಂದೆರಡು ದಿನಗಳಲ್ಲಿ ನೇರವಾಗಿ ಜಮೆಯಾಗಲಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 30 ಕಂತುಗಳಲ್ಲಿ ಡಿ.ಬಿ.ಟಿ. ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಟ್ಟು 3,110.48 ಕೋಟಿಗೂ ಅಧಿಕ ರೂಪಾಯಿ ಜಮೆಯಾಗಿದೆ.

ಮೃತರ ಖಾತೆಯಿಂದ ಹಣ ವಾಪಸ್:

ಜಿಲ್ಲೆಯಲ್ಲಿ ಮರಣ ಹೊಂದಿದ 9,247 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ತಾಂತ್ರಿಕ ಕಾರಣಗಳಿಂದ ಅವರ ಖಾತೆಗೆ ಜಮೆಯಾಗಿದ್ದ ಹಣವನ್ನು ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಈಗಾಗಲೇ 3,600 ಫಲಾನುಭವಿಗಳಿಂದ 3,79,82,000 ರೂ.ಗಳನ್ನು ಯಶಸ್ವಿಯಾಗಿ ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ > > ಜಲಾಶಯ ನಂಬಿ ಬೆಳೆ ಬೆಳೆಯದಂತೆ ರೈತರಲ್ಲಿ ಮನವಿ

ಗೃಹಜ್ಯೋತಿ ಯೋಜನೆ-ಸಮೀಕ್ಷೆ

ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರ ಮಾಹಿತಿ ಪರಿಶೀಲನಾ ಕಾರ್ಯವು ಜುಲೈ 1 ರಿಂದ ಆರಂಭವಾಗಿದೆ. ಈ ಕುರಿತು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಮನೆ ಬಾಗಿಲಿಗೆ ಮೆಸ್ಕಾಂ ಸಿಬ್ಬಂದಿ

ಮೆಸ್ಕಾಂ ಮೀಟರ್ ರೀಡರ್‌ಗಳು ಮತ್ತು ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಫಲಾನುಭವಿಗಳು ಈ ಸಮೀಕ್ಷೆಗಾಗಿ ಮೆಸ್ಕಾಂ ಕಚೇರಿಗೆ ಅಲೆಯುವ ಅಗತ್ಯವಿಲ್ಲ.

ಉಚಿತ ವಿದ್ಯುತ್ ಸ್ಥಗಿತವಾಗಲ್ಲ

ಈ ಸಮೀಕ್ಷೆಯು ಕೇವಲ ಫಲಾನುಭವಿಗಳ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುವ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಯಾವುದೇ ಕಾರಣಕ್ಕೂ ಉಚಿತ ವಿದ್ಯುತ್ ಸೇವೆಯನ್ನು ಸ್ಥಗಿತಗೊಳಿಸುವುದಿಲ್ಲ.
ಜಿಲ್ಲೆಯಲ್ಲಿ ಯೋಜನೆಗೆ ನೋಂದಣಿಯಾಗಿರುವ ಒಟ್ಟು 5,09,133 ಗೃಹಗಳಲ್ಲಿ ಈಗಾಗಲೇ 1,38,566 ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ. 29 ರಷ್ಟು ಪ್ರಗತಿ ಸಾಧಿಸಲಾಗಿದೆ. ಸಾರ್ವಜನಿಕರು ಸಿಬ್ಬಂದಿಗೆ ಅಗತ್ಯ ದಾಖಲೆ ನೀಡಿ ಸಹಕರಿಸುವಂತೆ ಕೋರಿದರು.

ಅನ್ನಭಾಗ್ಯ ಯೋಜನೆ: ರೋಗಿಗಳಿಗೆ 15 ದಿನಗಳಲ್ಲಿ ಬಿಪಿಎಲ್ ಕಾರ್ಡ್

ತುರ್ತು ಆರೋಗ್ಯ ಸೇವೆಗಳ ಕಾರಣಕ್ಕಾಗಿ ಬಿ.ಪಿ.ಎಲ್. ಕಾರ್ಡ್ ಕೋರಿ ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ಸರ್ಕಾರ ಉತ್ತಮ ಅವಕಾಶ ನೀಡಿದೆ. ಅನಾರೋಗ್ಯ ಪೀಡಿತರಿಗೆ ಯಾವುದೇ ವಿಳಂಬವಿಲ್ಲದೆ 15 ದಿನಗಳ ಒಳಗಾಗಿ ಕಾರ್ಡ್ ವಿತರಿಸುವಂತೆ ಸರ್ಕಾರವು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ ಎಂದು ಸಿ.ಎಸ್. ಚಂದ್ರಭೂಪಾಲ ಅವರು ತಿಳಿಸಿದರು.

ಇದನ್ನೂ ಓದಿ > > 15 ದಿನಗಳ ಬಳಿಕ ಹೊಳೆಯಲ್ಲಿ ಜಾರಿಬಿದ್ದ ವ್ಯಕ್ತಿಯ ಶವ ಪತ್ತೆ!

ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ಎಂ ಎಸ್ ಬಸವರಾಜಪ್ಪ, ಆರ್ ಶಿವಣ್ಣ, ಇಕ್ಕೇರಿ ರಮೇಶ್ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ಎಂ ಮಧು, ಸದಸ್ಯರುಗಳಾದ ಅಮೀರ್ ಅಮ್ಜಾ, ಎಸ್ ಪ್ರಭಾಕರ್, ಭವ್ಯ ಕೃಷ್ಣಮೂರ್ತಿ, ಎಂ ರಾಹುಲ್, ಅರ್ಚನಾ, ಎನ್ ನವುಲೇಶ್,ಯು ಶಿವಾನಂದ, ಕೆ ಉದಯಕುಮಾರ್, ಎಚ್ ಬಿ ಚಿದಂಬರ, ಎಚ್ ಕೆ ಜಯಶೀಲಪ್ಪಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ‌ನಿರ್ದೇಶಕಿ ಭಾರತಿ ಬಣಕಾರ್, ಸಿಡಿಪಿಓ‌ ಗಂಗೂಬಾಯಿ, ಮೆಸ್ಕಾಂ ಇಲಾಖೆ ನಿಯಂತ್ರಣಾಧಿಕಾರಿ ಚಂದ್ರಕಲಾ, ಇತರೆ ಅಧಿಕಾರಿಗಳು ಹಾಜರಿದ್ದರು. ಉಪಸ್ಥಿತರಿದ್ದರು.

Tags: CRIMEdon't worry about Grihaljyoti survey!Grihalakshmi 31st episode releasedGuarantee planskannada newskannada news livelatest newsmalnad newsshimogashivamoggaಶಿವಮೊಗ್ಗ
Previous Post

15 ದಿನಗಳ ಬಳಿಕ ಹೊಳೆಯಲ್ಲಿ ಜಾರಿಬಿದ್ದ ವ್ಯಕ್ತಿಯ ಶವ ಪತ್ತೆ!

Next Post

ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಯುವಕ ಹೃದಯಾಘಾತದಿಂದ ಸಾವು!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಯುವಕ ಹೃದಯಾಘಾತದಿಂದ ಸಾವು!

ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಯುವಕ ಹೃದಯಾಘಾತದಿಂದ ಸಾವು!

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

July 28, 2026
ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

July 27, 2026
ಆಯನೂರು ಬಳಿ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವು

ಆಯನೂರು ಬಳಿ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವು

July 27, 2026
ಆಗುಂಬೆ ಘಾಟಿಯಲ್ಲಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ!

ಆಗುಂಬೆ ಘಾಟಿಯಲ್ಲಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ!

July 26, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

July 28, 2026
ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

July 27, 2026

Copyright © 2026 Yuva Dhwani. Designed by KIPL