ಶಿವಮೊಗ್ಗ: ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಯುವಕ ಹೃದಯಾಘಾತದಿಂದ ಸಾವುಕಂಡಿರುವ ಘಟನೆ ನಡೆದಿದೆ. ಕೇವಲ ಒಂದು ತಿಂಗಳ ಅಂತರದಲ್ಲಿ ಈ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನಡೆದಿರುವ ಎರಡನೇ ಘಟನೆ ಇದಾಗಿದೆ.’
ಮೃತ ಯುವಕನನ್ನು ಬೆಂಗಳೂರಿನ ಯಲಹಂಕ ಮೂಲದ ಶ್ರೀಕಾಂತ್ (28) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ > > ಗೃಹಲಕ್ಷ್ಮಿ 31ನೇ ಕಂತು ಬಿಡುಗಡೆ, ಗೃಹಜ್ಯೋತಿ ಸಮೀಕ್ಷೆಗೆ ಆತಂಕ ಬೇಡ!
ಜುಲೈ 17ರಂದು ಸ್ನೇಹಿತರೊಂದಿಗೆ ಆಗಮಿಸಿದ್ದ ಶ್ರೀಕಾಂತ್, ಹೊಸನಗರ ತಾಲೂಕಿನ ಸಂಪೆಕಟ್ಟೆ ಸಮೀಪದ ಕಟ್ಟಿನಹೊಳೆಯ ಸ್ನೇಹಿತನ ಮನೆಯಲ್ಲಿ ತಂಗಿದ್ದರು. ಇಂದು ಮುಂಜಾನೆ ಕೊಡಚಾದ್ರಿ ಚಾರಣಕ್ಕೆ ಹೋಗಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ರಾತ್ರಿ ವೇಳೆ ಶ್ರೀಕಾಂತ್ ಅವರಿಗೆ ದಿಢೀರ್ ಆರೋಗ್ಯ ಏರುಪೇರಾಗಿ ಮನೆಯಲ್ಲೇ ಕುಸಿದು ಬಿದ್ದಿದ್ದಾರೆ.
ಇದನ್ನೂ ಓದಿ > > 15 ದಿನಗಳ ಬಳಿಕ ಹೊಳೆಯಲ್ಲಿ ಜಾರಿಬಿದ್ದ ವ್ಯಕ್ತಿಯ ಶವ ಪತ್ತೆ!
ತಕ್ಷಣವೇ ಸ್ನೇಹಿತರು ಅವರನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ, ಶ್ರೀಕಾಂತ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ತೀವ್ರ ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ. ಸದ್ಯ ಮೃತದೇಹವನ್ನು ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
ಹೊಸನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.















