ಶಿವಮೊಗ್ಗ: ಶಿವಮೊಗ್ಗದ ಇಂದ್ರನಗರ- ಮಳಲಿಕೊಪ್ಪ ಬಳಿ ಚಾಲಕನ ನಿಯಂತ್ರಣ ತಪ್ಪಿ ಭತ್ತ ತುಂಬಿದ್ದ ಕ್ಯಾಂಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಗುಚಿಬಿದ್ದಿರುವ ಘಟನೆ ನಡೆದಿದೆ.
ಇದನ್ನೂ ಓದಿ > > ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ
ಶಿವಮೊಗ್ಗ ನಗರದ ಹೊರವಲಯದ ಮತ್ತೂರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭತ್ತ ತುಂಬಿದ್ದ ಕ್ಯಾಂಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಗುಚಿಬಿದ್ದಿದೆ. ಅಪಘಾತದ ರಭಸಕ್ಕೆ ಕ್ಯಾಂಟರ್ನಲ್ಲಿದ್ದ 50 ಕ್ಕೂ ಹೆಚ್ಚು ಭತ್ತದ ಚೀಲಗಳು ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ.
ಇದನ್ನೂ ಓದಿ > > ವಿದ್ಯುತ್ ಹರಿಸಿ ಜಿಂಕೆಗಳ ಬೇಟೆ, ಮೂವರ ಬಂಧನ, 6 ಮಂದಿ ವಿರುದ್ಧ ಎಫ್ಐಆರ್!
ಅಪಘಾತ ಸಂಭವಿಸಿದ ತಕ್ಷಣ ವಾಹನದೊಳಗೆ ಸಿಲುಕಿಕೊಂಡಿದ್ದ ಚಾಲಕ ಹಾಗೂ ಕ್ಲೀನರ್ ಅನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ತುಂಗಾ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ > > ಹೊಳಲೂರಿನಲ್ಲಿ ಅಡಿಕೆ ಕಳ್ಳತನ, ಐವರು ಖದೀಮರು ಪೊಲೀಸ್ ಬಲೆಗೆ!













