ಶಿವಮೊಗ್ಗ: ಬಿಜೆಪಿ ಮುಖಂಡ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಮೇಶ್ (ರಾಮು) ಅವರ ಧರ್ಮಪತ್ನಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಕಲ್ಪನಾ ರಮೇಶ್ ಅವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕಲ್ಪನಾ ರಮೇಶ್ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ.
ಇದನ್ನೂ ಓದಿ > >ಶಿವಮೊಗ್ಗ ದಸರಾ ಆನೆ ಅವಘಡದ ಬೆನ್ನಲ್ಲೇ ಅರಣ್ಯ ಇಲಾಖೆ ಅಲರ್ಟ್: ಜಂಬೂಸವಾರಿಗೆ ಹೊಸ ರೂಲ್ಸ್!
ಬಿಜೆಪಿ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಮೇಶ್ (ರಾಮು) ಅವರು ಜಿಲ್ಲೆಯ ವಿವಿಧ ಹಂತಗಳಲ್ಲಿ ಪಕ್ಷದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಧರ್ಮಪತ್ನಿ ಕಲ್ಪನಾ ರಮೇಶ್ ಅವರ ಅಗಲಿಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ದುಃಖ ಮೂಡಿಸಿದೆ.
ಇದನ್ನೂ ಓದಿ > >ಶಿವಮೊಗ್ಗ ದಸರಾ ಸೋಮಣ್ಣ ಆನೆಯ ಕುರಿತು ನಟಿ ರಮ್ಯಾ ಹೇಳಿದ ಆಕ್ರೋಶದ ಪ್ರತಿಕ್ರಿಯೆಯೇನು?
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿ ಹಾಗೂ ಸದ್ಗತಿಯನ್ನು ಕರುಣಿಸಲಿ. ಈ ದುಃಖದ ಸಂದರ್ಭದಲ್ಲಿ ಪತಿ ರಮೇಶ್ (ರಾಮು) ಸೇರಿದಂತೆ ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಹಿತೈಷಿಗಳಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರಾರ್ಥಿಸಿದೆ.
2018ರ ಪಾಲಿಕೆ ಚುನಾವಣೆಯಲ್ಲಿ ಗೆಲುವು
ಎಸ್ಪಿಎಂ ರಸ್ತೆಯ ಭೂಪಾಳಂ ಶಾಲೆ ಬಳಿ ಇರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು. ಕಲ್ಪನಾ ರಮೇಶ್ ಅವರು 2018 ರಲ್ಲಿ ನಡೆದ ಶಿವಮೊಗ್ಗ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿಯಾಗಿ 23ನೇ ವಾರ್ಡ್ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.














