ಸೊರಬ : 10 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೊರಬ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ, ಶಿವಪ್ಪನಾಯಕ ವೃತ್ತದಲ್ಲಿ ಟೈರ್ ಗೆ ಬೆಂಕಿಹಚ್ಚಿ ಆಕ್ರೋಶ
ದತ್ತಗುರು ಬಂಧಿತ ಆರೋಪಿ. ಈತನ ವಿರುದ್ಧ ಸೊರಬದ ಜೆಎಂಎಫ್ ಸಿ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ್ದು, ಆದರೆ, ಆರೋಪಿಯು 10 ವರ್ಷ ದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಆತನ ವಿರುದ್ಧ Conviction Warrant ಅನ್ನು ಹೊರಡಿಸಲಾಗಿತ್ತು.
ಇದನ್ನೂ ಓದಿ > ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ, ಸಿದ್ದರಾಮಯ್ಯ ಘೋಷಣೆ!
ಈತನ ಪತ್ತೆಗೆ ಸಿಪಿಐ ಸೊರಬ ವೃತ್ತ ಹಾಗೂ ಪಿಎಸ್ಐ ಸೊರಬ ಠಾಣೆ ರವರ ನೇತೃತ್ವದಲ್ಲಿ ಹೆಚ್.ಸಿ ಸೋಮನಾಯ್ಕ್ ಮತ್ತು ಪಿಸಿ ಮಲ್ಲೇಶ್ ರವರ ತಂಡವನ್ನು ರಚಿಸಲಾಗಿತ್ತು. ಈ ತಂಡವು ಆರೋಪಿಯನ್ನು ಬೈಂದೂರಿನಲ್ಲಿ ಪತ್ತೆಮಾಡಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.














