• About Us
  • Advertise
  • Privacy & Policy
  • Contact Us
Tuesday, July 28, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ರಾಜ್ಯ

ಯೂರೋಪ್‌ನಲ್ಲಿ ಬಸವ ಜಯಂತಿ, ಜರ್ಮನಿಯ ಎರ್ಲಾಂಗ್‌ ನಗರದಲ್ಲಿ ಭವ್ಯ ಮೆರವಣಿಗೆ

ದಯವೇ ಧರ್ಮದ ಮೂಲ: ಜಾಗತಿಕ ಆಶಯವಾಗಲಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
May 19, 2026
in ರಾಜ್ಯ, ಶಿವಮೊಗ್ಗ
ಯೂರೋಪ್‌ನಲ್ಲಿ ಬಸವ ಜಯಂತಿ, ಜರ್ಮನಿಯ ಎರ್ಲಾಂಗ್‌ ನಗರದಲ್ಲಿ ಭವ್ಯ ಮೆರವಣಿಗೆ
Share on FacebookShare on TwitterShare on WhatsApp

ಶಿವಮೊಗ್ಗ: ಭಯವೇ ಧರ್ಮದ ಮೂಲ ಎಂದು ವ್ಯಾಖ್ಯಾನಿಸುತ್ತಿರುವ ಇವತ್ತಿನ ಜಾಗತಿಕ ಸಂದರ್ಭದಲ್ಲಿ ಬಸವಣ್ಣವರು ಹೇಳಿದ ದಯವೇ ಧರ್ಮದ ಮೂಲವಯ್ಯ  ಎಂಬದನ್ನು  ಗಟ್ಟಿಯಾಗಿ ಸಾರುವ ಅಗತ್ಯವಿದೆ ಎಂದು ಶಿವಮೊಗ್ಗ ಬಸವಕೇಂದ್ರ ಹಾಗೂ ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠದ ಡಾ. ಶ್ರೀ ಮ. ನಿ. ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದ್ದಾರೆ.

ಯೂರೋಪ್‌ ಬಸವ ಸಮಿತಿ ಜರ್ಮನಿಯ ಎರ್ಲಂಗನ್ ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತಿಯ ಸಾನ್ನಿಧ್ಯವಹಿಸಿ ಅಶೀರ್ವಚನ ನೀಡಿದರು.

ಇಂದು ಹಿಂಸೆಯನ್ನು ಎತ್ತಿಹಿಡಿಯುವ ವಿಕೃತಿ ಮೆರೆಯುತ್ತಿದೆ. ಬಸವಣ್ಣ ಧರ್ಮವನ್ನು ಅದರ ಮೂಲ ಅರ್ಥದಲ್ಲಿ ವ್ಯಾಖ್ಯಾನಿಸಿ ಎಲ್ಲರಲ್ಲೂ ದಯೆಯೇ ಮುಖ್ಯವಾಗಬೇಕು. ದಯೆಯುಳ್ಳದ್ದೇ ಧರ್ಮ, ಅಲ್ಲವಾದುದು ಅಧರ್ಮವೆಂದೇ ಹೇಳಿದ್ದಾರೆ. ದಯೆಯು ಕೇವಲ ಮಾನವರಲ್ಲಷ್ಟೇ ಅಲ್ಲ, ಸಕಲ ಜೀವರಾಶಿಗಳಲ್ಲಿ ಇರಬೇಕು ಎಂಬುದು ಬಸವಣ್ಣನವರು ವ್ಯಾಖ್ಯಾನಿಸಿದ ಧರ್ಮದ ನಿಯಮವಾಗಿದೆ ಎಂದರು.

ಇದನ್ನೂ ಓದಿ >   ಮೇ.20ರಂದು ಶಿವಮೊಗ್ಗದಲ್ಲಿ ಮೆಡಿಕಲ್‌ಗಳು ಬಂದ್, ಕಾರಣವೇನು?

ಇದನ್ನೂ ಓದಿ >  ಶಿವಮೊಗ್ಗ, ಮಳೆಗಾಳಿಗೆ ಉರುಳಿದ ಮರ, ಗಂಟೆಗಟ್ಟಲೇ ರೈಲು ಸಂಚಾರದಲ್ಲಿ ವ್ಯತ್ಯಯ!

ಅತಿವೇಗ, ಆಸೆ ಮತ್ತು ಸಂಯಮರಾಹಿತ್ಯ ಗುಣಗಳು ಇಂದು ಜೀವನವನ್ನು ಅಸಹನೀಯಗೊಳಿಸಿವೆ. ವ್ಯಕ್ತಿಯ ಮಟ್ಟದಿಂದ ಜಾಗತಿಕ ಮಟ್ಚದವರೆಗೆ ಎಲ್ಲರೂ ಉನ್ಮಾದದಲ್ಲೇ ಇರುವ ಪರಿಸ್ಥಿತಿ ಬಂದೊದಗಿದೆ. ವ್ಯಕ್ತಿಯು ಕೌಟುಂಬಿಕ ಸಾಮರಸ್ಯ ಕಳೆದುಕೊಂಡು ಪರಸ್ಪರ ದ್ವೇಷ ಅಸೂಯೆಗಳ ಉನ್ಮಾದದಲ್ಲಿದ್ದರೆ ಜಾಗತಿಕವಾಗಿ ದೇಶಗಳು ಯುದ್ದೋನ್ಮಾದದಲ್ಲಿ ಮುಳುಗಿವೆ. ಇವೆರಡರಿಂದಲೂ ದೂರವಿರುವವರು ಈ ಉನ್ಮಾದಗಳನ್ನು ರೋಚಕತೆಯಾಗಿಸಿಕೊಂಡು ಉನ್ಮತ್ಥರಾಗಿ ಸುಖಿಸುತ್ತಿದ್ದಾರೆ. ಇವಾವುಗಳೂ ಉತ್ತಮ ಬೆಳವಣಿಗೆಯ ಲಕ್ಷಣಗಳಲ್ಲ ಎಂದು ವಿಶ್ಲೇಷಿಸಿದರು.

ಜರ್ಮನಿಯ ಎರ್ಲಂಗನ್ ನಗರದಲ್ಲಿ ನಡೆದ ಬಸವ ಜಯಂತಿಯನ್ನು ಉದ್ದೇಶಿಸಿ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸ್ಟಾಡ್ಟ್ ಎರ್ಲಾಂಗೆನ್ ಉಪಮೇಯರ್ ಫ್ರೌ ಇವಾ ಲಿನ್ಹಾರ್ಟ್ ಉಪ ಮೇಯರ್, ಜರ್ಮನಿಯಲ್ಲಿರುವ ಭಾರತದ ರಾಯಭಾರಿ ಅಜಿತ್ ವಿನಾಯಕ ಗುಪ್ತೆ, ಇಂಡಾಲಜಿಸ್ಟ್ ಮತ್ತು ಪ್ರೊಫೆಸರ್ ದಕ್ಷಿಣ ಏಷ್ಯಾದ ಅಧ್ಯಯನಗಳ ವಿಭಾಗದ ಪ್ರೊ. ಡಾ. ರಾಬರ್ಟ್ ಜೆ ಝೈಡೆನ್ಬೋಸ್ರಾಹುಲ್, ಯೂರೋಪಿನ ವಿಶ್ವ ಹಿಂದೂ ಪರಿಷತ್‌ ಪ್ರತಿನಿಧಿ ನಾರಾಯಣ, ಚಿಕ್ಕಮಗಳೂರಿನ ಐಸಿರಿ ಫೌಂಡೇಷನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಇದ್ದರು.

ಕನ್ನಡಗರಿಗೆ ಜರ್ಮನಿ ಎಂದಾಕ್ಷಣ ನೆನಪಾಗುವುದು ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರು. ಕನ್ನಡ ಸಾಹಿತ್ಯ, ಇತಿಹಾಸಗಳಿಗೆ ಅಪಾರ ಕೊಡುಗೆ ನೀಡಿದ ಕಿಟೆಲ್ ಜರ್ಮನಿಯವರಾದರೂ ಕನ್ನಡ ಭಾಷೆ ಇತಿಹಾಸಗಳ ಪ್ರಜ್ಞೆಯುಳ್ಳವರೆಲ್ಲರ ದೃಷ್ಟಿಯಲ್ಲಿ ಕನ್ನಡದವರೇ ಆಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಜರ್ಮನ್‌ ನಲ್ಲಿರುವ ಭಾರತೀಯ ರಾಯಭಾರಿ ಅಜಿತ್ ವಿನಾಯಕ ಗುಪ್ತೆ ಮಾತನಾಡಿ, ಬಸವಣ್ಣ ಒಬ್ಬ ತತ್ವಜ್ಞಾನಿ, ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕ ಮಾತ್ರವಲ್ಲದೆ ದೈವಿಕ ಮತ್ತು ದೈನಂದಿನ ಜೀವನದ ನಡುವಿನ ಅಂತರವನ್ನು ಕಡಿಮೆ ಮಾಡಿದ ಆಧ್ಯಾತ್ಮಿಕ ಚೈತನ್ಯ ಮತ್ತು ಜಾತಿ, ವರ್ಗ ಮತ್ತು ಲಿಂಗ ತಾರತಮ್ಯವನ್ನು ಪ್ರಸಿದ್ಧವಾಗಿ ತಿರಸ್ಕರಿಸಿದ ವರ್ಗರಹಿತ ಸಮಾಜದ ಉಗ್ರ ಪ್ರತಿಪಾದಕರಾಗಿದ್ದರು ಎಂದರು.

ವಿಶ್ವದ ಮೊದಲ ಸಂಸತ್ತು ಎಂದು ಪರಿಗಣಿಸಲಾದ ಅವರ ಅನುಭವ ಮಂಟಪವು ಸಾರ್ವಜನಿಕ ಜೀವನದಲ್ಲಿ ಯಾವುದೇ ತಾರತಮ್ಯವನ್ನು ಲೆಕ್ಕಿಸದೆ ಎಲ್ಲರ ಸಾರ್ವತ್ರಿಕ ಭಾಗವಹಿಸುವಿಕೆಗೆ ಅಡಿಪಾಯ ಹಾಕಿತು ಎಂದು ತಿಳಿಸಿದರು.

ಬಸವಣ್ಣನವರ ಮತ್ತೊಂದು ಆಳವಾದ ಚಿಂತನೆಯೆಂದರೆ ಭಕ್ತಿ ಮತ್ತು ಘನತೆ ಭವ್ಯ ಕಟ್ಟಡಗಳಲ್ಲಿ ಕಂಡುಬರುವುದಿಲ್ಲ, ಆದರೆ ಮಾನವ ಚೈತನ್ಯದೊಳಗೆ ಕಂಡುಬರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಅವನ ಅಥವಾ ಅವಳ ಹಿನ್ನೆಲೆಯನ್ನು ಲೆಕ್ಕಿಸದೆ ಅಂತರ್ಗತ ದೈವತ್ವವನ್ನು ಹೊಂದಿದ್ದಾನೆ ಎಂದು ಅವರು ನಂಬಿದ್ದರು. ಇದು ಅವರು ಪ್ರತಿಪಾದಿಸಿದ ಸಾಮಾಜಿಕ ಸುಧಾರಣೆ ಮತ್ತು ಸಮಾನತೆಯ ಅಡಿಪಾಯವಾಗಿದೆ, ಇದು ಆಧುನಿಕ ಯುರೋಪಿನಲ್ಲಿ ಮತ್ತು ಭಾರತದಲ್ಲಿ ಪ್ರತಿಧ್ವನಿಸುತ್ತದೆ ಎಂದು ವಿಶ್ಲೇಷಿಸಿದರು.

ನಾವು ಗಡಿಗಳನ್ನು ಮೀರಿದ ಸಹೋದರತ್ವದ ಮನೋಭಾವವನ್ನು ಉತ್ತೇಜಿಸುತ್ತೇವೆ. ಸಮಗ್ರತೆಯಿಂದ ಬದುಕುವುದು ಪರಂಪರೆಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಗೌರವ. ಇಂದಿನಂತೆ ಜಗತ್ತಿಗೆ ಸಾರ್ವತ್ರಿಕ ಸಹೋದರತ್ವದ ಮಹತ್ವವನ್ನು ಒತ್ತಿಹೇಳಿದ ಬಸವಣ್ಣನವರಂತಹ ಚಿಂತಕರ ಅಗತ್ಯವಿದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಹೇಳಿದರು.

ಇಂಡಾಲಜಿಸ್ಟ್ ಮತ್ತು ಪ್ರೊಫೆಸರ್ ದಕ್ಷಿಣ ಏಷ್ಯಾದ ಅಧ್ಯಯನಗಳ ವಿಭಾಗದ ಪ್ರೊ. ಡಾ. ರಾಬರ್ಟ್ ಜೆ ಝೈಡೆನ್ಬೋಸ್ ಅವರು ಮಾತನಾಡಿ, ದಾಸೋಹ ಅನ್ನುವ ವಿಚಾರ ಸರ್ವೋದಯ ತತ್ವದ ಆಧಾರಿತದ್ದು. ಅದು ಸಿದ್ಧಾಂತಹಕ್ಕೂ ಮೀರಿದ ಜೀವನದ ಫಿಲಾಸಫಿ.”ಭಾರತೀಯರಾದ ನೀವುಗಳು , ನೀವು ಯಾವ ವಿಚಾರದ ಭೂಮಿಯವರು ಎಂಬ ಅರಿವು ಇರಲಿ”, ಎಂದು ಘೋಷಿಸಿದರು.

ಚಿಕ್ಕಮಗಳೂರಿನ ಐಸಿರಿ ಫೌಂಡೇಷನ್‌ನ ನಿರ್ದೇಶಕರಾದ ರೋಹನ್ ಭಾರ್ಗವಪುರಿ ಮಾತನಾಡಿ, ಬಸವಣ್ಣನವರ ಮೂರು ಮೂಲಭೂತ ವಿಷಯಗಳಾದ ದಾಸೋಹ, ಸಮಾನತೆ ಹಾಗೂ ಕಾಯಕತ್ವ ಇಡೀ ಜಗತ್ತಿಗೆ ಒಂದು ಮಾದರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಎರ್ಲಾಂಗೆನ್‌ ನಗರದ ಉಪಮೇಯರ್‌ ಫ್ರೌ ಇವಾ ಲಿನ್ಹಾರ್ಟ್, ವಿಹೆಚ್‌ಪಿ ಯೂರೋಪ್‌ ಪ್ರತಿನಿಧಿ  ರಾಹುಲ್ ನಾರಾಯಣ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಬಸವ ಸಮಿತಿ ಯುರೋಪಿನ ಅಧ್ಯಕ್ಷರಾದ ವಿಜಯ್ ಕುಮಾರ್ ಮತ್ತು ಕಾರ್ಯಕಾರಿ ಮಂಡಳಿಯವರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಭಾರತೀಯ ಜಾನಪದ ಕಲಾ ತಂಡಗಳೊಂದಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಪಲ್ಲಕ್ಕಿ ಉತ್ಸವ ನೆರವೇರಿಸಿ ಪೂಜೆ ಸಲ್ಲಿಸಲಾಯಿತು.

Tags: Basava JayantiBasava Jayanti in EuropeErlangGermanygrand procession in Erlangkannada newskannada news livemalnad newsshimogaಯೂರೋಪ್‌ ಬಸವ ಸಮಿತಿಶಿವಮೊಗ್ಗ
Previous Post

ಮೇ.20ರಂದು ಶಿವಮೊಗ್ಗದಲ್ಲಿ ಮೆಡಿಕಲ್‌ಗಳು ಬಂದ್, ಕಾರಣವೇನು?

Next Post

ಶಿವಮೊಗ್ಗ, ಲಿಫ್ಟ್’ನಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ,  ಘಟನೆ ನಡೆದಿದ್ದು ಹೇಗೆ?

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಿವಮೊಗ್ಗ, ಲಿಫ್ಟ್’ನಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ,  ಘಟನೆ ನಡೆದಿದ್ದು ಹೇಗೆ?

ಶಿವಮೊಗ್ಗ, ಲಿಫ್ಟ್'ನಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ,  ಘಟನೆ ನಡೆದಿದ್ದು ಹೇಗೆ?

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

July 28, 2026
ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

July 27, 2026
ಆಯನೂರು ಬಳಿ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವು

ಆಯನೂರು ಬಳಿ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವು

July 27, 2026
ಆಗುಂಬೆ ಘಾಟಿಯಲ್ಲಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ!

ಆಗುಂಬೆ ಘಾಟಿಯಲ್ಲಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ!

July 26, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

July 28, 2026
ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

July 27, 2026

Copyright © 2026 Yuva Dhwani. Designed by KIPL