ಭದ್ರಾವತಿ: ನಗರ ಹಾಗೂ ತಾಲ್ಲೂಕಿನ ಕೆಲವೆಡೆ ನಿನ್ನೆ (ಭಾನುವಾರ) ಮಧ್ಯಾಹ್ನ ಗುಡುಗು-ಸಹಿತ ಧಾರಾಕಾರ ಮಳೆ ಸುರಿಯಿತು.
ಇದನ್ನೂ ಓದಿ > ಶಿವಮೊಗ್ಗ, ಸುತ್ತುಕೋಟೆ ಗ್ರಾಮದ ಮನೆಯಲ್ಲಿಯೇ ಯುವಕನ ಭೀಕರ ಕೊಲೆ!
ಮಧ್ಯಾಹ್ನ 2 ಗಂಟೆಗೆ ಶುರುವಾದ ಮಳೆಯ ಆರ್ಭಟ, 3.25 ರವರೆಗೆ ಮುಂದುವರೆಯಿತು. ವರ್ಷಧಾರೆಯಿಂದಾಗಿ ಇಲ್ಲಿನ ಬಿ.ಎಚ್.ರಸ್ತೆ, ಸಿ.ಎನ್. ರಸ್ತೆ, ಪುನೀತ್ ರಾಜಕುಮಾರ್ ರಸ್ತೆಯ ಮೇಲೆ ನೀರು ಹರಿಯಿತು. ನಗರದಲ್ಲಿ ತಂಪನೆಯ ವಾತಾವರಣ ಸೃಷ್ಟಿಯಾಗಿತ್ತು.
ಇದನ್ನೂ ಓದಿ >ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿ ಅರೆಸ್ಟ್
ಮಳೆಯಿಂದಾಗಿ ನಗರದಲ್ಲಿ ವಾರದ ಸಂತೆಗಾಗಿ ಟೆಂಟ್ ಹಾಕಿದ್ದ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡಿದರು. ಹಣ್ಣು, ತರಕಾರಿ, ಬಟ್ಟೆ, ಧಾನ್ಯ ಹಾಗೂ ಇತರೆ ಸಾಮಗ್ರಿಗಳನ್ನು ಕಾಪಾಡಿಕೊಳ್ಳಲು ವ್ಯಾಪಾರಿಗಳು ಪರದಾಡಿದರು.














