ಶಿವಮೊಗ್ಗ: ನಗರದ ಆಲ್ಕೊಳ ಸಮೀಪದ ಸುಲ್ತಾನ್ ಮೊಹಲ್ಲಾದಲ್ಲಿ ರಾತ್ರಿ ಬೃಹತ್ ಹೆಬ್ಬಾವೊಂದು ಕಾಣಿಸಿಕೊಂಡು ಸಾರ್ವಜನಿಕರಿಗೆ ಆತಂಕ ಮೂಡಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಸ್ನೇಕ್ ಕಿರಣ್ ಹೆಬ್ಬಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ > ಸಿಇಟಿಯಲ್ಲಿ ಕಡಿಮೆ ಅಂಕ, ವಿಷ ಸೇವಿಸಿದ್ದ ಯುವಕ ಸಾವು!
ಮಂದಾರ ಮಂದಿರದ ಹತ್ತಿರದ 2ನೇ ಕ್ರಾಸ್‌ನಲ್ಲಿರುವ ಚಿನ್ನಪ್ಪ ಎಂಬುವವರ ಮನೆ ಎದುರಿನ ಚರಂಡಿಯಲ್ಲಿ ಸುಮಾರು 8 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ >ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್‌ನಿಂದ ಕೇಂದ್ರ ಶಿಕ್ಷಣ ಸಚಿವರ ಅಣಕು ಶವಯಾತ್ರೆ!, ಚಟ್ಟ ಕಟ್ಟಿ ಮೆರವಣಿಗೆ, ಕಾರಣವೇನು?
ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು ಕಾರ್ಯಾಚರಣೆ ನಡೆಸಿ, ಚರಂಡಿಯಲ್ಲಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.















