ಶಿವಮೊಗ್ಗ: ಭದ್ರಾವತಿಯ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಇರುವ 14 ಗೂಡಂಗಡಿಗಳನ್ನು ತೆರವು ಮಾಡುವ ಮೂಲಕ ಚನ್ನಗಿರಿ (ಸಿ.ಎನ್) ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಗೂಡಂಗಡಿಗಳ ವ್ಯಾಪಾರಿಗಳಿಗೆ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಜೆ 4ರ ಒಳಗೆ ತಮ್ಮ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಹೇಳಿದರು. ಸಂಜೆ ನಗರಸಭೆ ವತಿಯಿಂದ ಜೆಸಿಬಿ ಯಂತ್ರ ಬಳಸಿ ವ್ಯಾಪಾರಿಗಳು ಅಲ್ಲಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಲಾಯಿತು.
ಇದನ್ನೂ ಓದಿ > ಅಕ್ರಮ ಪ್ರಾಣಿ ಸಾಗಣೆ, ವಧೆ ತಡೆಗೆ ಸಮಿತಿ ರಚನೆ, ಜಿಲ್ಲಾಧಿಕಾರಿ
ಇದನ್ನೂ ಓದಿ > ಶಿವಮೊಗ್ಗದಲ್ಲಿ 5,000 ಬಿಪಿಎಲ್ ಕಾರ್ಡ್ ರದ್ದು, ಆಹಾರ ಸಚಿವರಿಗೆ ಕಾಂಗ್ರೆಸ್ ಮುಖಂಡ ಚೇತನ್ ಮನವಿಗಳೇನು?
ಮಾಧವಾಚಾರ್ ವೃತ್ತದಿಂದ ರಂಗಪ್ಪ ವೃತ್ತದ ಮೂಲಕ ಎಪಿಎಂಸಿ ಪ್ರಾಂಗಣದ ಮುಂಭಾಗದವರೆಗೆ 1.30 ಕಿ.ಮೀ. ಉದ್ದದ ಚನ್ನಗಿರಿ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕಾಮಗಾರಿಗೆ 9.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ಆರಂಭದಲ್ಲಿ ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ ತಲಾ 50 ಅಡಿಯಂತೆ ಒಟ್ಟು 100 ಅಡಿ ಅಗಲದ ರಸ್ತೆ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿತ್ತು. ನಂತರ ಇಲ್ಲಿನ ಕಟ್ಟಡ ಮಾಲೀಕರ ಒತ್ತಾಯಕ್ಕೆ ಮಣಿದು, ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ ತಲಾ 40 ಅಡಿಯಂತೆ ಒಟ್ಟು 80 ಅಡಿ ಅಗಲದ ರಸ್ತೆ ವಿಸ್ತರಣೆ ಮಾಡಲು ನಿಶ್ಚಯಿಸಲಾಗಿತ್ತು.
ಗೂಡಂಗಳಿಗಳ ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಕೆಲವು ಹಣ್ಣಿನ ವ್ಯಾಪಾರಿಗಳು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.















