• About Us
  • Advertise
  • Privacy & Policy
  • Contact Us
Monday, October 26, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ವಿಶೇಷ

ಈ ಬದ್ಧತೆ ಎಂದೂ ಭದ್ರ, “ಸಮಾಜದ ಕಟ್ಟ ಕಡೆಯವರಿಗೆ ಮೊಟ್ಟ ಮೊದಲ ಸ್ಥಾನ”

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
October 25, 2026
in ವಿಶೇಷ
ಈ ಬದ್ಧತೆ ಎಂದೂ ಭದ್ರ, “ಸಮಾಜದ ಕಟ್ಟ ಕಡೆಯವರಿಗೆ ಮೊಟ್ಟ ಮೊದಲ ಸ್ಥಾನ”
Share on FacebookShare on TwitterShare on WhatsApp

ಇದು ಪ್ರಸಿದ್ಧ ಪತ್ರಕರ್ತ ಲೋಹಿಯಾವಾದಿ, ವಿನೋಬಾ ಅವರ ಸರ್ವೋದಯದ ಜೀವದಾನಿಸ ದಿವಂಗತ ಖಾದ್ರಿ ಶಾಮಣ್ಣ ಅವರು ಭಾವಪರವಶರಾಗಿ ಹೇಳುತ್ತಿದ್ದ ಮಾತು. ಕೇವಲ ಮಾತಲ್ಲ. ಕೂಗುತ್ತಿದ್ದ ಘೋಷಣೆ. ಪ್ರಾಚೀನ ಕಾಲದಿಂದಲೂ ಭಾರತದ ಜನತೆಯ ಆದರ್ಶವಾಗಿರುವ “ಸರ್ವೇಜನಾ ಸುಖಿನೋಭವಂತು’ ಚಕ್ರವರ್ತಿ ಹಾಗೂ ರಾಜ ಮಹಾರಾಜರ ಧರ್ಮ ಆಡಳಿತ, ಕಾರ್ಲ್‌ ಮಾಕ್ಸ್ ಸಮಾಜವಾದ, ಜಯಪ್ರಕಾಶ್ ನಾರಾಯಣ್ ಹಾಗೂ ಡಾ|| ರಾಮಮನೋಹರ ಲೋಹಿಯಾ ಅವರ ಸಮಾಜವಾದ, ಮಹಾತ್ಮಾ ಗಾಂಧಿ ಅವರ ರಾಮರಾಜ್ಯ ವಿನೋಬ ಬಾವೆ ಅವರ ಸರ್ವೋದಯ, ವಿಕಾಸಗೊಂಡ ಪ್ರಜಾಪ್ರಭುತ್ವ ಪದ್ಧತಿ, ಭಾರತದ ಬಂಧ ವಿಮೋಚನೆಗಾಗಿ ಗಾಂಧಿ ನಾಯಕತ್ವದಲ್ಲಿ ನಡೆದ ಅಹಿಂಸಾತ್ಮಕ ಚಳವಳಿ, ಸ್ವಾತಂತ್ರ್ಯ ಬಂದ ನಂತರ, ಸಮಾಜದ ನಿರ್ಮಾಣಕ್ಕಾಗಿ ಭಾರತದ ಜನತೆ ರೂಪಿಸಿಕೊಂಡಿರುವ ಸಂವಿಧಾನ ಇವೆಲ್ಲ ಹಾಗೂ ಇವೆಲ್ಲದರ ಆದರ್ಶ, ಸಂದೇಶ ಒಂದೇ. ಮಾರ್ಗ ಭಿನ್ನ ಅಷ್ಟೇ, ಸಮಾನ ಅವಕಾಶಗಳಿರುವ ಸಮಾನತೆ, ಸ್ವಾತಂತ್ರ್ಯ ಹಾಗೂ ಶೋಷಣೆ ರಹಿತ ಸಮಾಜದ ರಚನೆಯೇ ಈ ಎಲ್ಲಾ ವಿಚಾರಗಳ, ವಾದಗಳ, ಪ್ರತಿಪಾದನೆಗಳ ಹಾಗೂ ಸಿದ್ಧಾಂತಗಳ ಮೂಲ ಗುರಿ ಹಾಗೂ ಸಂದೇಶ.

ಇಂತಹ ವೈಚಾರಿಕ ಸಂಘರ್ಷಗಳ ಕಾಲದಲ್ಲಿ ಕಣ್ಣು ಬಿಟ್ಟ ಕೂಸು ಎಸ್. ಬಂಗಾರಪ್ಪ. ಅವರು ಬೆಳೆದರು. ಬೆಳೆಯುತ್ತಲೇ ಬಂದರು. ಬಡವರು, ದುರ್ಬಲರು, ಅವಕಾಶ ಹಾಗೂ ಆತ್ಮ ಗೌರವ ವಂಚಿತರು ನೂರಾರು ರೀತಿಗಳಲ್ಲಿ ಅಮಾನುಷ ಶೋಷಣೆಗೆ ಒಳಗಾದವರು ಇವರ ಪರವಾಗಿ ಹೋರಾಡಲು ಮನಸ್ಸು ಮಾಡಿದರು. ವಣತೊಟ್ಟರು. ಜೀವನದಲ್ಲಿ ಪರಿಸರದ ಪರಿಚಯವಾಗುತ್ತಿದ್ದಂತೆ ಸಮಾಜಮುಖಿಯಾದರು. ಮೇಲೆದ್ದು ಹೊರಟರು. ಸಮಾಜವಾದಿ ಸಮಾಜದ ಹಾಗೂ ಸರ್ವತ್ರ್ಯ ಕಲ್ಯಾಣ ಕ್ಷೇತ್ರದ ನಿರ್ಮಾಣ ಮಾಡಲು ಮುನ್ನೆಜ್ಜೆಗಳನ್ನಿಡುತ್ತ ತಮ್ಮ ಬಾಳಿನ ಮಹಾಪಯಣವನ್ನು ಆರಂಭಿಸಿದರು. ಈ ನಿತ್ಯೋತ್ಸಾಹಿ, ನಿರಂತರ ಉತ್ಸಾಹಿ ಅಂದಿನಿಂದ ನಿಂತಿಲ್ಲ. ನಿಲ್ಲುವುದೂ ಇಲ್ಲ.

ಇದನ್ನೂ ಓದಿ > >ಕಾರು, ಕ್ಯಾಂಟರ್‌ ಮುಖಾಮುಖಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು!

1967ರಲ್ಲಿ ಕರ್ನಾಟಕದ ವಿಧಾನಸಭೆಯನ್ನು ಪ್ರವೇಶಿಸಿದ ಲೋಹಿಯಾ ಸಮಾಜವಾದಿ ಎಸ್. ಬಂಗಾರಪ್ಪ ಅವರು ಸಚಿವರಾಗಿ, ಮುಖ್ಯಮಂತ್ರಿಯಾಗಿ, ಲೋಕಸಭೆ ಸದಸ್ಯರಾಗಿ ಕಳೆದ ನಾಲ್ಕು ದಶಕಗಳ ಕಾಲಕ್ಕಿಂತ ಹೆಚ್ಚು ಕಾಲ ನಿರಂತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕ್ಷೇತ್ರ ಯಾವುದೇ ಆಗಲಿ, ಪಕ್ಷ ಯಾವುದೇ ಆಗಲಿ, ಸಂದರ್ಭ ಯಾವುದೇ ಆಗಲಿ, ಇವರ ಆದರ್ಶ ನಿಷ್ಠೆ ಕಡಿಮೆಯಾಗಿಲ್ಲ. ಬದಲಾಗಿಲ್ಲ. ಬಲಗೊಂಡಿದೆ.

ಈ ಸಮಾಜವಾದಿ, ಗುರಿಸಾಧನಾ ಮಾರ್ಗದಲ್ಲಿ ಹಟವಾದಿ” ವೈವಿಧ್ಯತೆಯಲ್ಲಿ ಐಕೃತೆ” ಇವರ ವ್ಯಕ್ತಿತ್ವದ ವೈಶಿಷ್ಟ್ಯ ಇದರ ಆಸಕ್ತಿ ಸಾಧನೆ ಬಹುಮುಖಿ ಷಟಲ್‌ ಕಾಕ್-ಬ್ಯಾಂಡ್‌ಮೆಂಟಿನ್ ಪ್ರಿಯ ನಡಿಗೆಯಷ್ಟು ಸೈಕಲ್ ಸವಾರಿಯಲ್ಲಿ ಆನಂದ, ಕುಸ್ತಿಪಟು, ಕಲೆ-ಕ್ರೀಡೆಗಳು ಒಲವು. ಪಂಪರಿಂದ ಕುವೆಂಪುವರೆಗೆ ಸಾಹಿತ್ಯ ಪರಿಚಯ. ಕನ್ನಡ ಭಾಷೆ ಬಗ್ಗೆ ಅಷ್ಟೇ ಪ್ರೇಮ-ಸಂಗೀತ ಹಾಗೂ ಜನಪದದ ರಾಗ ಕೇಳಿಬಂದರೆ ಎಲ್ಲವನ್ನು ಮರೆಯುತ್ತಾರೆ. ಮಗ್ನರಾಗುತ್ತಾರೆ. ಕುಣಿಯುತ್ತಾರೆ. ಒಮ್ಮೊಮ್ಮೆ ಕುಪ್ಪಳಿಸುತ್ತಾರೆ.

28-12-72ರಂದು ಕರ್ನಾಟಕದ ವಿಧಾನಸಭೆ, ರಾಜ್ಯದ ಹೆಸರು “ಕರ್ನಾಟಕ” ಎಂದಾಗಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ ಶುಭ ಹಾಗೂ ಚಾರಿತ್ರಿಕ ಸಂದರ್ಭ. ಬಂಗಾರಪ್ಪ ಅವರು ಅರಳಿದ ಮಲ್ಲಿಗೆಯನ್ನು ಸಭೆಯಲ್ಲಿ ಸುತ್ತ ಎರಚಿ, ಸಮಗ್ರ ಕರ್ನಾಟಕಕ್ಕೆ “ಮೈಸೂರು ಮಲ್ಲಿಗೆ”ಯ ಕಂಪನ್ನು ಬೀರಿದರು. ಸಮಸ್ತ ಕನ್ನಡಿಗರೊಡನೆ ಸಂತೋಷವನ್ನು ಹಂಚಿಕೊಂಡರು. ಬಂಗಾರಪ್ಪ ಅವರು 15 ಸಾವಿರಕ್ಕಿಂತ ಹೆಚ್ಚು ಸಾಮೂಹಿಕ ವಿವಾಹಗಳು ನಡೆಯಲು ಕಾರಣರಾಗಿದ್ದಾರೆ. ಇವರು ಸಮಾಜ ಮುಖಿ ಎನ್ನುವುದಕ್ಕೆ ಅಪರೂಪ ನಿದರ್ಶನವೇ ಸಾಕು.

ಇದನ್ನೂ ಓದಿ > >ಗೋಡ್ಸೆ ವಿಚಾರ ಮುಂದಿಟ್ಟು ಬಿಜೆಪಿಗೆ ಬಿ.ಕೆ. ಹರಿಪ್ರಸಾದ್ ನೇರ ಸವಾಲು!

ಒಮ್ಮ ಇವರು ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಓರ್ವ ವ್ಯಕ್ತಿ ಬಗ್ಗೆ ಕಟುವಾದ ಟೀಕೆ ಮಾಡಿದರು. ಕೆಲ ಸಮಯದ ನಂತರ ನಾನು ಇವರನ್ನು ಲಾಬಿಯಲ್ಲಿ ಭೇಟಿ ಮಾಡಿದೆ. ವ್ಯಕ್ತಿಯೊಬ್ಬರ ಬಗ್ಗೆ ಬಂಗಾರಪ್ಪ ಅವರು ಮಾಡಿದ ಟೀಕೆ ನಿರಾಧಾರವಾದುದು ಎಂದು ನಾನು ಬಂಗಾರಪ್ಪ ಅವರಿಗೆ ಹೇಳಿದೆ. ನನಗೆ ಗೊತ್ತಿದ್ದ ಸತ್ಯವನ್ನು ಅವರ ಗಮನಕ್ಕೆ ತಂದೆ. ಸರಿ ಎಂದು ಹೇಳಿ ಸುಮ್ಮನಾದರು. ಕೆಲ ನಿಮಿಷಗಳ ನಂತರ, ನಾನು ಪತ್ರಿಕಾ ಗ್ಯಾಲರಿಗೆ ಹಿಂದಿರುಗಿದೆ. ಬಂಗಾರಪ್ಪ ಅವರು ಅಷ್ಟು ಹೊತ್ತಿಗೆ ವಿಧಾನಸಭೆ ಪ್ರವೇಶಿಸಿ ತಮ್ಮ ಸ್ಥಾನದಲ್ಲಿ ಕುಳಿತಿದ್ದರು. ಬಂಗಾರಪ್ಪ ವೈಯಕ್ತಿಕ ವಿವರಣೆಯೊಂದನ್ನು ಸಭೆಯಲ್ಲಿ ನೀಡಲು ಸಭಾಧ್ಯಕ್ಷರ ಅನುಮತಿ ಕೋರಿದರು. ಬಂಗಾರಪ್ಪ ವೈಯಕ್ತಿಕ ವಿವರಣೆ ನೀಡಿ ತಾವು ಸಭೆಯ ಮಾನ್ಯ ಸದಸ್ಯರೊಬ್ಬರನ್ನು ಕುರಿತು ಮಾಡಿದ ಟೀಕೆ ನಿರಾಧಾರವಾದದ್ದು ಅದನ್ನು ವಾಪಸ್ಸು ಪಡೆದು ಕ್ಷಮೆ ಯಾಚಿಸುವುದಾಗಿ ತಿಳಿಸಿದರು. ಪ್ರೆಸ್ ಗ್ಯಾಲರಿಯಲ್ಲಿ ಕುಳಿತಿದ್ದ ನಾನು ಚಕಿತನಾದೆ.

ಮಾನ್ಯ ಸದಸ್ಯರೊಬ್ಬರನ್ನು ಕುರಿತ ತಾವು ಮಾಡಿದ್ದ ಟೀಕೆ ನಿರಾಧಾರವಾದದ್ದು ಎಂದು ತಿಳಿದು ಬಂದಾಗ ಅದನ್ನು ವಾಪಸ್ಸು ಪಡೆದು ಕ್ಷಮೆಯಾಚಿಸುವಂತಹ ಸೌಜನ್ಯದ ವರ್ತನೆ!. ಅದೂ ಒಬ್ಬ ಶಾಸಕರ ಇಂತಹ ಸಂಸದೀಯ ನಡವಳಿಕೆ ಉನ್ನತ ಮಟ್ಟದ ವರ್ತನೆ ಸರ್ವಕಾಲಕ್ಕೂ ಸ್ಫೂರ್ತಿದಾಯಕ. ಈ ರೀತಿಯ ಸಂಸದೀಯ ನಡವಳಿಕೆ ಪ್ರಶಂಸನೀಯ ಹಾಗೂ ಅನುಕರಣೀಯ. ಇವರು ಸಂಸದೀಯ ನಡವಳಿಕೆಯಲ್ಲೂ ಒಂದು ಮಾದರಿಯೇ.

1991ರಲ್ಲಿ ತುಮಕೂರಿನಲ್ಲಿ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ವಾರ್ಷಿಕ ಅಧಿವೇಶನ, ಶ್ರೀ ಸಿದ್ದಗಂಗಾ ಮಠಾಧೀಶರ ದಾಸೋಹದ ಆಶೀರ್ವಾದದಡಿಯಲ್ಲಿ. ಅಧಿವೇಶನಕ್ಕೆ ಎರಡು ದಿನ ಮುನ್ನ ಒಕ್ಕೂಟದ ಅಧ್ಯಕ್ಷ ಕೆ. ವಿಕ್ರಮರಾವ್, ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಆಗಿನ ಅಧ್ಯಕ್ಷ ಎಸ್. ಅರ್ಜುನ ದೇವ ಹಾಗೂ ನಾನು ಆಗ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರನ್ನು ಭೇಟಿ ಮಾಡಿದೆವು. ಸಮ್ಮೇಳನ ನಡೆಸಲು ಧನ ಸಹಾಯ ತೋರಿದವು. ಒಂದು ಮೊತ್ತವನ್ನು ಸಹಾಯ ಧನವಾಗಿ ನೀಡುವುದಾಗಿ ಬಂಗಾರಪ್ಪ ಅವರು ಹೇಳಿದರು. “ಸಾಲದು ಸಾರ್. ಇನ್ನೊಂದು ಲಕ್ಷ ಕೊಡಿ” ಎಂದು ನಾನು ಕೋರಿದೆ.

ಇದನ್ನೂ ಓದಿ > > ರೈತರ ಸಂಕಷ್ಟಕ್ಕೆ ಸ್ಪಂದಿಸುವವರಿಲ್ಲವೇ?, ಖಾಲಿ ಹುದ್ದೆ ಭರ್ತಿಗೆ ಒತ್ತಾಯ!

ತತ್‌ಕ್ಷಣ” ಆಗಲಿ’ ಎಂದು ಮಂಜೂರು ಮಾಡಿದರು. ರಾಷ್ಟ್ರದ ಎಲ್ಲಾ ರಾಜ್ಯಗಳಿಂದ ಬರುವ ಪತ್ರಕರ್ತರು ಭಾಗವಹಿಸುವ ಸಮ್ಮೇಳನ ಎಂದು ಬಂಗಾರಪ್ಪ ಅವರಿಗೆ ಗೊತ್ತಿತ್ತು. ಮೇಲಾಗಿ ಪತ್ರಕರ್ತರು ಪತ್ರಿಕಾ ಸಂಘದ ಚಳವಳಿ ನಡೆಸುತ್ತಿದ್ದಾರೆಂಬುದೂ ತಿಳಿದಿತ್ತು. ಜೊತೆಗೆ ಸಹಾಯ ಧನ ನ ದುರುಪಯೋಗವಾಗಿದೆಂಬ ವಿಶ್ವಾಸವೂ ಅವರಲ್ಲಿತ್ತು. ರಾಜ್ಯದ ಪತ್ರಕರ್ತರ ಪರವಾಗಿ ನಾವು ಕೃತಜ್ಞತೆ ಅರ್ಪಿಸಿದೆವು. ಸರ್ವರ ಸುಖ-ಸ್ವಾತಂತ್ರ್ಯ ಬಯಸುವ ಸಿದ್ಧಾಂತದ ಬಗ್ಗೆ ಇವರ ಬದ್ಧತೆ ಕಾಲ ಉರುಳುತ್ತ ಬಂದಿದ್ದರೂ ಕಡಿಮೆಯಾಗಿಲ್ಲ. ಅಲುಗಾಡಿಯೂ ಇಲ್ಲ. ಮಿಗಿಲಾಗಿ ಬದ್ಧತೆ, ಇನ್ನಷ್ಟು ಭದ್ರವಾಗುತ್ತಿದೆ. ಬಂಗಾರಪ್ಪ, ಜನಪರ ಬದ್ಧತೆಯಲ್ಲಿ ಬಂಗಾರವೇ.

 -ಎಸ್.ವಿ. ಜಯಶೀಲರಾವ್, ಹಿರಿಯ ಪತ್ರಕರ್ತರು. (ಕೃಪೆ: ಶ್ರೀ ಎಸ್.‌ ಬಂಗಾರಪ್ಪ ಅಭಿನಂದನಾ ಗ್ರಂಥ)

Tags: kannada newskannada news liveLohiaite Socialist S. Bangarappamalnad newsS. Bangarappa.shimogashivamoggaThis commitment remains steadfast: "The very last person in society gets the very first place."ಶಿವಮೊಗ್ಗ
Previous Post

ಗೋಡ್ಸೆ ವಿಚಾರ ಮುಂದಿಟ್ಟು ಬಿಜೆಪಿಗೆ ಬಿ.ಕೆ. ಹರಿಪ್ರಸಾದ್ ನೇರ ಸವಾಲು!

Next Post

ಗಾಜನೂರು ಜಲಾಶಯದ ಬಳಿ ನದಿಯಲ್ಲಿ ಮುಳುಗಿ ಇಬ್ಬರು ಸಾವು!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಗಾಜನೂರು ಜಲಾಶಯದ ಬಳಿ ನದಿಯಲ್ಲಿ ಮುಳುಗಿ ಇಬ್ಬರು ಸಾವು!

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ,  ಮೆರವಣಿಗೆ ಈಗ ಸ್ಥಗಿತ!

ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ, ಮೆರವಣಿಗೆ ಈಗ ಸ್ಥಗಿತ!

October 21, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026
ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

October 26, 2026
ಹೊಳೆಹೊನ್ನೂರು | ವಾಹನ ಡಿಕ್ಕಿ, ಅರಸೀಕೆರೆ ಮೂಲದ ವ್ಯಕ್ತಿ ಸಾವು!

ವಿಷ ಸೇವಿಸಿದ್ದ ಗೃಹಿಣಿ ಆಸ್ಪತ್ರೆಯಲ್ಲಿ ಸಾವು, ಕಾರಣವೇನು?

October 26, 2026
ಅ.30ರಿಂದ ಕೃಷಿ ಮೇಳ, 600ಕ್ಕೂ ಹೆಚ್ಚು ಮಳಿಗೆಗಳು, AI ತಂತ್ರಜ್ಞಾನ, ಹೊಸ ತಳಿಗಳ ಅನಾವರಣ!

ಅ.30ರಿಂದ ಕೃಷಿ ಮೇಳ, 600ಕ್ಕೂ ಹೆಚ್ಚು ಮಳಿಗೆಗಳು, AI ತಂತ್ರಜ್ಞಾನ, ಹೊಸ ತಳಿಗಳ ಅನಾವರಣ!

October 26, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026
ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

October 26, 2026

Copyright © 2026 Yuva Dhwani. Designed by KIPL