ಶಿವಮೊಗ್ಗ : ನಾಡಿನ ರಾಜಕೀಯ ಮುತ್ಸದ್ಧಿ, ಹಿಂದುತ್ವದ ಪ್ರಖರಧ್ವನಿ, ಹಿಂದುಳಿದ ವರ್ಗಗಳ ನಾಯಕ, ಮಾಜಿ ಉಪಮುಖ್ಯಮಂತ್ರಿ, ಕೆ.ಎಸ್.ಈಶ್ವರಪ್ಪ ಅವರ ಹುಟ್ಟುಹಬ್ಬವನ್ನು ಶ್ರೀಗಂಧ ಸಾಂಸ್ಕøತಿಕ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್, ಕೆ.ಎಸ್. ಈಶ್ವರಪ್ಪ ಅಭಿಮಾನಿಗಳ ಬಳಗದವತಿಯಿಂದ ಅತ್ಯಂತ ಸಡಗರ-ಸಂಭ್ರಮದಿಂದ ಜೂನ್ 10ರಂದು ಆಚರಿಸಲಾಗುವುದು ಎಂದು ಅಭಿಮಾನಿ ಬಳಗದ ಸಂಚಾಲಕ ಈ. ವಿಶ್ವಾಸ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೂನ್ 10ರ ಬೆಳಿಗ್ಗೆ ಗುಂಡಪ್ಪಶೆಡ್, ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪನವರ ಮನೆಯ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ಸುಮಾರು 400ಕ್ಕೂ ಹೆಚ್ಚು ಪುರೋಹಿತರಿಂದ ರುದ್ರಪಠಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಸುಮಾರು 2000ಕ್ಕೂ ಹೆಚ್ಚು ದಂಪತಿಗಳು, ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. 600ಕ್ಕೂ ಹೆಚ್ಚು ಮಾತೆಯರು ಸಮೂಹ ಭಕ್ತಿ ಹಾಗೂ ದೇಶಭಕ್ತಿಗೀತೆಗಳನ್ನು ಹಾಡಲಿದ್ದಾರೆ. ಮಂಗಳ ನಿಧಿ ಸಮರ್ಪಣೆ ಕೂಡ ಇರುತ್ತದೆ ಎಂದರು.
ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ನಾಲ್ಕನೇ ವಾರ್ಡಿನ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಜೋಡಿಯಾಕ್ ಪ್ರಕಾಶ್ ನೇತೃತ್ವದಲ್ಲಿ ತರಳುಬಾಳು ಬಡಾವಣೆಯ ಸಾರ್ವಜನಿಕ ಉದ್ಯಾನವನದಲ್ಲಿ ಈಶ್ವರಪ್ಪನವರ 78ನೇ ಹುಟ್ಟುಹಬ್ಬದ ನೆನಪಿಗಾಗಿ 78 ಗಿಡಗಳನ್ನು ನೆಡುವರು.
ವಿನೋಬನಗರದಲ್ಲಿ ಶ್ರೀಕಾಂತ್ ಜೆ.ಪಿ.ಯವರು 100 ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್, ಹಣ್ಣು ವಿತರಿಸುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿವಮೊಗ್ಗದ ಜನತೆ ಪಾಲ್ಗೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ಪ್ರಮುಖರಾದ ಬಾಲು, ಸುವರ್ಣಾಶಂಕರ್, ಶಿವಾಜಿ, ನವುಲೆ ಈಶ್ವರಪ್ಪ, ಜಾದವ್, ಶ್ರೀಕಾಂತ್, ಆಶಾಚನ್ನಬಸಪ್ಪ, ಲಕ್ಷ್ಮೀಶಂಕರ್ ನಾಯಕ್, ವೆಂಕಟೇಶ್, ರಾಜು, ಕುಬೇರಪ್ಪ, ಸೂರ್ಯನಾರಾಯಣ ಸೇರಿದಂತೆ ಹಲವರಿದ್ದರು.