ಶಿವಮೊಗ್ಗ: ಮಲವಗೊಪ್ಪದ ಭದ್ರಾ ಎಡದಂಡೆ ಕಾಲುವೆಯಲ್ಲಿ ಸ್ನೇಹಿತರ ಜತೆ ಈಜಲು ತೆರಳಿದ್ದ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಹರಿಗೆ ನಿವಾಸಿ ಶಂಕರ್ (14) ಶನಿವಾರ ಮಧ್ಯಾಹ್ನದ ಸ್ನೇಹಿತರ ಜತೆ ಮಲವಗೊಪ್ಪದ ಚನ್ನಬಸವೇಶ್ವರ ದೇವಸ್ಥಾನದ ಬಳಿಯ ಚಾನಲ್‌ನಲ್ಲಿ ಈಜಲು ತೆರಳಿದ್ದ.
ಇದನ್ನೂ ಓದಿ – ಹೊಸನಗರ, ಹಾಲಿನ ಟ್ಯಾಂಕರ್ ಪಲ್ಟಿ , ಮಾವಿನಹೊಳೆಯಲ್ಲಿ ಹಾಲಿನ ಹೊಳೆ!
ಚಾನಲ್‌ಗೆ ಬಿದ್ದ ವೇಳೆ ಮೇಲೆ ಬರಲಾಗದೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಸಂಜೆ ವೇಳೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ಆರಂಭಿಸಿದರೂ ಹೆಚ್ಚಿನ ನೀರು ಇದ್ದ ಪತ್ತೆಯಾಗಿರಲಿಲ್ಲ.
ಭಾನುವಾರ ನೀರು ಕಡಿಮೆ ಮಾಡಿ ಹುಡುಕಾಟ ನಡೆಸದ್ದು ಬಿದ್ದ ಜಾಗದಿಂದ 100 ಮೀಟರ್ ಅಂತರದಲ್ಲಿ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ – ಭದ್ರಾವತಿ ನಗರಸಭೆ, 1.46 ಕೋಟಿ ಉಳಿತಾಯ ಬಜೆಟ್ ಮಂಡನೆ, ಹೊಸ ಯೋಜನೆಗಳೇನು?
ಶಂಕರ್ ಹರಿಗೆ ನಿವಾಸಿ ಗಣೇಶ್ ಎಂಬುವರ ಪುತ್ರನಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














