ಎನ್.ಆರ್.ಪುರ: ತಾಲ್ಲೂಕಿನ ಮುಡುಬ ಸಮೀಪದ ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ರನ್ಯಾ (34) ಎಂದು ಗುರುತಿಸಲಾಗಿದೆ.
ಇವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ (ನರ್ಸ್) ಸೇವೆ ಸಲ್ಲಿಸುತ್ತಿದ್ದರು.
ಮೂಲಗಳ ಮಾಹಿತಿಯ ಪ್ರಕಾರ, ರನ್ಯಾ ಅವರು ಶಿವಮೊಗ್ಗದಲ್ಲಿ ತಮ್ಮ ಕೆಲಸ ಮುಗಿಸಿ ಮುತ್ತಿನಕೊಪ್ಪದ ಮನೆಗೆ ಮರಳಿದ್ದರು. ಮನೆಗೆ ಬಂದ ಕೆಲವೇ ಹೊತ್ತಿನಲ್ಲಿ ಮತ್ತೆ ಹೊರಗೆ ಹೋದವರು, ಮುಡುಬ ಸಮೀಪದ ಸೇತುವೆಯ ಮೇಲಿಂದ ನದಿಗೆ ಹಾರಿದ್ದಾರೆ.
ಇದನ್ನೂ ಓದಿ > ಗ್ಯಾಸ್ ದರ ಹೆಚ್ಚಳ, ಆಟೋ ಚಾಲಕರ ಮೇಲಿನ ಹೊರೆ ಇಳಿಸಿ, ಜಿಲ್ಲಾಧಿಕಾರಿಗೆ ಮನವಿ
ಈ ವೇಳೆ ಸೇತುವೆ ಮೇಲೆ ಬಂದ ಕಾರಿನ ಬೆಳಕಿನಲ್ಲಿ ನದಿಗೆ ಹಾರುವ ದೃಶ್ಯ ಕಂಡು ಬಂದಿದೆ. ವಿಷಯ ತಿಳಿದ ಸ್ಥಳೀಯರು, ಕುಟುಂಬದವರು ಸ್ಥಳಕ್ಕೆ ತೆರಳಿದರು. ಪೊಲೀಸರು, ಅಗ್ನಿ ಶಾಮಕ ದಳದವರು ಆಗಮಿಸಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ > ಕ್ರಿಕೆಟ್ ಟೂರ್ನಿ ವೇಳೆ ಜೇನು ನೊಣಗಳ ದಾಳಿ, 18 ಜನರಿಗೆ ಗಾಯ!
ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














