ಶಿವಮೊಗ್ಗ: ಗ್ಯಾಸ್ ಬಂಕ್‌ಗಳಲ್ಲಿ ಮನಸ್ಸಿಗೆ ಬಂದಹಾಗೆ ದರ ನಿಗಧಿ ಮಾಡಿ ಸಾರ್ವಜನಿಕರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ > ಕ್ರಿಕೆಟ್ ಟೂರ್ನಿ ವೇಳೆ ಜೇನು ನೊಣಗಳ ದಾಳಿ, 18 ಜನರಿಗೆ ಗಾಯ!
ನಗರದಲ್ಲಿ ಆಟೋ ಚಾಲಕರು ದಿನ ನಿತ್ಯ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗ ಯುದ್ಧ ಶುರುವಾಗಿ 36 ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತು ಸರಿಯಾಗುತ್ತೆ, ನಾಳೆ ಸರಿಯಾಗುತ್ತೆ ಅಂತ ದಿನ ಕಳೆಯುತ್ತಾ ನಾವುಗಳು ಆಟೋ ಚಾಲಕರು ದಿನೇ ದಿನೇ 10ರೂ. 20ರೂ, 30ರೂ. 40 ರೂಪಾಯಿಗಳ ತನಕ ಗ್ಯಾಸ್ ಬೆಲೆ ಏರಿಯಾಗುತ್ತಿದೆ. ಇಲ್ಲಿಯವರೆಗೆ ಎಂ.ಪಿ ಯಾಗಲೀ, ಎಂ.ಎಲ್.ಎ ಆಗಲೀ, ಎಂ.ಎಲ್.ಸಿ ಗಳಾಗಲೀ ಜನಪ್ರತಿನಿಧಿಗಳಾಗಲಿ, ಚಾಲಕರ ಬಗ್ಗೆ ಗಮನಹರಿಸದೇ ಮತ್ತು ಈ ಬೆಲೆ ಏರಿಕೆಯಲ್ಲಿ ಮೀಟರ್ ಬಾಡಿಗೆ, ಪ್ರೀಪೇಡ್ ಬಾಡಿಗೆಗೆ ಸೇವೆ ಕೊಡಲು ಸಾಧ್ಯವೇ ಜನಗಳು ಸಹ 10 ರೂ ಹೆಚ್ಚಿಗೆ ಕೊಟ್ಟು ಸಹಕರಿಸುವುದಿಲ್ಲ. ಎಫ್.ಸಿ ನೋಡಿದರೆ 3 ಭಾಗದಷ್ಟು ಹೆಚ್ಚು. ಇನ್ಸೂರೆನ್ಸ್ ಬಿಡಿಭಾಗಗಳು, ಮೆಕಾನಿಕ್ ದರ ಹಾಗೆ ಹಾಲು, ತರಕಾರಿ, ಅಕ್ಕಿ, ಎಣ್ಣೆ, ಬೇಳೆ-ಕಾಳು, ಬಸ್‌ದರ, ರೈಲು ದರ, ದಿನಸಿ ಪದಾರ್ಥಗಳು, ಕೆ.ಇ.ಬಿ ಬಿಲ್ಲು, ನೀರಿನ ಬಿಲ್ಲು, ಯು.ಜಿ.ಡಿ., ಮನೆ ಕಂದಾಯ, ಪ್ರತಿಯೊಂದರ ದರ ಹೆಚ್ಚಾಗಿ ಆಗಿ ಜೀವನ ಮಾಡುವುದು ಕಷ್ಟವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ > ಭದ್ರಾವತಿ ಅಂಬೇಡ್ಕರ್ ಭವನ ಉದ್ಘಾಟನೆ ಬಗ್ಗೆ ಶಾಸಕ ಬಿ.ಕೆ.ಸಂಗಮೇಶ್ ಹೇಳಿದ್ದೇನು?
ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸತೀಶ್, ನಾಗಭೂಷಣ್, ಶಂಕರ್, ಚನ್ನೇಶ್ ಸೇರಿದಂತೆ ಹಲವರಿದ್ದರು.














