ಭದ್ರಾವತಿ: ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ವೇಳೆ ಜೇನು ನೊಣಗಳು ದಾಳಿ ನಡೆಸಿದ್ದು, 18 ಜನ ಗಾಯಗೊಂಡಿದ್ದಾರೆ.
ರಾಜಸ್ಥಾನ ಸಮಾಜ್ ವತಿಯಿಂದ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಮೊದಲನೇ ಪಂದ್ಯ ಫೈರ್ ಬರ್ಡ್ಸ್ ಹಾಗೂ ಜೈನ್ ಡ್ಯೂಡ್ಸ್ ತಂಡಗಳ ನಡುವೆ ನಿಗದಿಯಾಗಿತ್ತು.
ಇದನ್ನೂ ಓದಿ > ಭದ್ರಾವತಿ ಅಂಬೇಡ್ಕರ್ ಭವನ ಉದ್ಘಾಟನೆ ಬಗ್ಗೆ ಶಾಸಕ ಬಿ.ಕೆ.ಸಂಗಮೇಶ್ ಹೇಳಿದ್ದೇನು?
ಬೆಳಿಗ್ಗೆ 9 ಗಂಟೆಗೆ ಟಾಸ್ ಮುಗಿಯುತ್ತಿದ್ದಂತೆ ಜೇನು ನೊಣಗಳು ನೆರೆದಿದ್ದವರ ಮೇಲೆ ದಾಳಿ ನಡೆಸಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ಆಟಗಾರರು ಹಾಗೂ ಪ್ರೇಕ್ಷಕರು ತಕ್ಷಣ ದಿಕ್ಕಾಪಾಲಾಗಿ ಓಡಿದರು.
ಗಾಯಗೊಂಡಿದ್ದ 18 ಜನರ ಪೈಕಿ ಇಬ್ಬರು ಯುವಕರನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.














