ಭದ್ರಾವತಿ: ಇಲ್ಲಿನ ಕಡದಕಟ್ಟೆಯಲ್ಲಿರುವ ರೈಲ್ವೆ ಫ್ಲೈಓವರ್ ಮೇಲಿರುವ ಬೀದಿ ದೀಪಗಳು ಕಾರ್ಯನಿರ್ವಹಿಸದೇ ವಾಹನ ಸವಾರರು ಪರದಾಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಡದಕಟ್ಟೆ ರೈಲ್ವೆ ಫ್ಲೈಓವರ್ ನಿರ್ಮಾಣವಾದ ನಂತರ ವಾಹನ ಸವಾರರಿಗೆ ಬಹಳಷ್ಟು ಅನುಕೂಲವಾಗಿದೆ. ಆದರೆ, ಇತ್ತೀಚೆಗೆ ಇಲ್ಲಿನ ಹಲವು ಬೀದಿ ದೀಪಗಳು ಕಾರ್ಯನಿರ್ವಹಿಸದೇ ಇರುವ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
ಇದನ್ನೂ ಓದಿ > ಹಾವು ಕಚ್ಚಿ ಎರಡೂವರೆ ವರ್ಷದ ಮಗು ಸಾವು
ಕೆಲವು ದಿನಗಳ ಹಿಂದೆ ಫ್ಲೈಓವರ್‌ನ ಮೇಲೆ ಎಲೆಕ್ಟ್ರಿಕಲ್ ಬೈಕ್ ಬೆಂಕಿ ಹೊತ್ತಿಕೊಂಡು ಅದರಿಂದಾಗಿ ಕೇಬಲ್ ಶಾರ್ಟ್ ಸರ್ಕ್ಯೂಟ್ ಆಗಿತ್ತು. ಪರಿಣಾಮವಾಗಿ ಫ್ಲೈಓವರ್ ಮೇಲಿನ ಬೀದಿ ದೀಪಗಳು ಕೆಟ್ಟು ಹೋಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯುಂಟಾಗಿದೆ.
ಇದನ್ನೂ ಓದಿ > ಮಂಗನ ಕಾಯಿಲೆ, ಸಾರ್ವಜನಿಕರಿಗೆ ತುರ್ತು ಮಾರ್ಗಸೂಚಿ, ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ
ಯಾವುದಾದರೂ ಅಪಾಯ ಸಂಭವಿಸುವ ಮುನ್ನವೇ ಸಂಬಂಧಿಸಿದ ಇಲಾಖೆ ತಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.














