ಭದ್ರಾವತಿ: ತಾಲೂಕಿನ ಬಂಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಮೂವರು ಅರಣ್ಯ ದಿನಗೂಲಿ ನೌಕರರು ಹೆಜ್ಜೇನು ದಾಳಿಗೊಳಗಾಗಿದ್ದಾರೆ. ಮೂವರಲ್ಲಿ ಓರ್ವರು ಚಿಂತಾಜನಕ ಸ್ಥಿತಿಯಲ್ಲಿದ್ದರೆ ಮತ್ತಿಬ್ಬರು ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಘಟನೆ ಗುರುವಾರ ನಡೆದಿದೆ.
ಇದನ್ನೂ ಓದಿ > SSLC Result | ಶಿವಮೊಗ್ಗ ಜಿಲ್ಲೆಗೆ ಶೇ.96.56 ಫಲಿತಾಂಶ, 620ಕ್ಕೂ ಹೆಚ್ಚು ಅಂಕ ಪಡೆದವರೆಷ್ಟು?
ಅರಣ್ಯ ಇಲಾಖೆಯ ದಿನಗೂಲಿ ಕೆಲಸಗಾರರಾದ ಉದಯನಗರದ ಕುಮಾರಪ್ಪ (57), ಬಾಪೂಜಿ ನಗರದ ಬಾಬು (34), ಬಂಡಿಗುಡ್ಡದ ಪ್ರದೀಪ (28) ಎಂಬ ಮೂವರು ಗುರುವಾರ ಬೆಳಗ್ಗೆ ಬಂಡಿಗುಡ್ಡ ಅರಣ್ಯಕ್ಕೆ ಕೆಲಸಕ್ಕೆ ಹೋಗಿ ಮಧ್ಯಾಹ್ನ ಒಂದು ಗಂಟೆಗೆ ನೌಕರರು ಹಿಂತಿರುಗಿ ಬರುವಾಗ ಹೆಜ್ಜೇನು ಹಠಾತ್ ದಾಳಿ ಮಾಡಿ ಬೆನ್ನುಹತ್ತಿದೆ. ಹೆಜ್ಜೇನು ಹೆಚ್ಚು ಕಚ್ಚಿದ ಪರಿಣಾಮ ಕುಮಾರಪ್ಪ ಚಿಂತಾಜನಕ ಸ್ಥಿತಿಯಲ್ಲಿದ್ದು, ಶಿವಮೊಗ್ಗಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದರೆ, ಇನ್ನಿಬ್ಬರು ಮೆಗ್ಗಾನ್ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.















