ಶಿವಮೊಗ್ಗ: ಆನ್ಲೈನ್ ಔಷಧ ಮಾರಾಟವನ್ನು ವಿರೋಧಿಸಿ ಔಷಧಿ ವ್ಯಾಪಾರಿಗಳ ಸಮಸ್ಯೆಗಳ ಬಗೆಹರಿಸುವಂತೆ ಒತ್ತಾಯಿಸಿ ಮೆಡಿಕಲ್ ಶಾಪ್ಗಳನ್ನು ಬಂದ್ ಮಾಡುವಂತೆ ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ನೀಡಿದ ಕರೆಗೆ ಶಿವಮೊಗ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.!
ಶಿವಮೊಗ್ಗದಲ್ಲಿ 1 ಸಾವಿರಕ್ಕೂ ಹೆಚ್ಚು ಔಷಧಿ ಅಂಗಡಿಗಳಿದ್ದು, ಬಹುತೇಕ ಔಷಧಿ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ಮೆಡ್ಪ್ಲಸ್ಗಳು ಎಂದಿನಂತೆ ವ್ಯಾಪಾರ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದಿತು.
ಈ ಮುಷ್ಕರವು ದೇಶ ವ್ಯಾಪಿಯಾಗಿದ್ದು. ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಸಂಸ್ಥೆ ಮತ್ತು ರಾಜ್ಯಘಟಕದ ಸಹಭಾಗಿತ್ವದಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿತ್ತು.
ಇದನ್ನೂ ಓದಿ > ಅಸ್ವಸ್ಥ ಮಹಿಳೆಯನ್ನು ರಕ್ಷಣೆ ಮಾಡಿದ ಪೊಲೀಸರು
ಇದನ್ನೂ ಓದಿ > ಬಸ್ ಚಾಲಕರಿಗೆ ತಿಳಿವಳಿಕೆ ಪತ್ರ, ಪಿಎಸ್ಐ ಪ್ರವೀಣ್ ಅವರ ಎಚ್ಚರಿಕೆ ಏನು?
ಔಷಧಿಗಳು ಸಾಮಾನ್ಯ ವಾಣಿಜ್ಯ ವಸ್ತುಗಳಲ್ಲ. ಅವುಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಜವಾಬ್ದಾರಿಯುತ ವಿತರಣೆ ಅಗತ್ಯವಿದೆ. ಆದರೆ ಆನ್ಲೈನ್ನಲ್ಲಿ ಇದು ಸಾಧ್ಯವಾಗುವುದಿಲ್ಲ. ಔಷಧಿಗಳ ದುರುಪಯೋಗವಾಗುತ್ತಿದೆ. ಎ.ಐ. ಬಳಸಿ ನಕಲಿ ಪ್ರಿಸ್ಕ್ರಿಪ್ಷೆನ್ಗಳನ್ನು ಬಳಸಬಹುದಾಗಿದೆ. ಅಲ್ಲದೆ ಅಸುರಕ್ಷಿತ ಔಷಧಿಗಳ ಬಳಕೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಆನ್ಲೈನ್ ಔಷಧ ಮಾರಾಟ ರದ್ದಾಗಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಇಂದು ಬೆಳಗ್ಗೆ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.















