ಶಿವಮೊಗ್ಗ: ಸಹೋದ್ಯೋಗಿಯೊಬ್ಬರಿಗೆ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ ಬೆನ್ನಲ್ಲೇ, ಮಹಿಳಾ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಯಿಂದ 98 ಸಾವಿರ ನಗದು ಆನ್‌ಲೈನ ಮೂಲಕ ನಾಪತ್ತೆಯಾಗಿದೆ. ಈ ಸಂಬಂಧ ಶಿವಮೊಗ ದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ >ಅಡಿಕೆ ಹಾನಿ ಪರಿಹಾರಕ್ಕೆ ವಿಶೇಷ ಪ್ಯಾಕೇಜ್‌ಗೆ ಬೇಡಿಕೆ!
ಇದನ್ನೂ ಓದಿ > ರಸ್ತೆ ವಿಸ್ತರಣೆ, ಜೆಸಿಬಿ ಬಳಸಿ ಗೂಡಂಗಡಿಗಳ ತೆರವು ಕಾರ್ಯಾಚರಣೆ!
ಸರ್ಕಾರಿ ಇಲಾಖೆಯೊಂದರಲ್ಲಿ ಅಧಿಕಾರಿಯಾಗಿರುವ ಮಹಿಳೆ, ತಮ್ಮ ಸಹೋದ್ಯೋಗಿಗೆ ಗೂಗಲ್ ಪೇ ಆಪ್ ಮೂಲಕ 1,500 ಸಾವಿರ ಹಣ ಕಳುಹಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಅವರಿಗೆ ತಿಳಿಯದೆ ಮೊಬೈಲ್‌ಗೆ ಯಾವುದೋ ಆಪ್ ಇನ್‌ಸ್ಟಾಲ ಆಗಿದೆ. ಕೆಲವೇ ಹೊತ್ತಿಗೆ ಮೊಬೈಲ್ ಅನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಿದ ಆಪ್ ಮೂಲಕ ದೂರುದಾರರ ಬ್ಯಾಂಕ್ ಖಾತೆಯಿಂದ ಸಂಜಯ್ ಬನ್ನಿವಾಲ್ ಎಂಬುವವರ ಖಾತೆಗೆ ಒಟ್ಟು 98,000 ಹಣ ಆನ್‌ಲೈನ್ ಮೂಲಕ ವರ್ಗಾಯಿಸಿಕೊಳ್ಳಲಾಗಿದೆ. ಹಣ ಕಡಿತವಾಗಿರುವುದು ತಿಳಿಯುತ್ತಿದ್ದಂತೆಯೇ ಗೊಂದಲಕ್ಕೀಡಾದ ಮಹಿಳಾ ಅಧಿಕಾರಿ ತಕ್ಷಣವೇ ತಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.















