ಶಿವಮೊಗ್ಗ : ಜಿಂಕೆ ಮಾಂಸ ತಂದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹಾಗೂ 20 ಕೆ.ಜಿ ಜಿಂಕೆ ಮಾಂಸವನ್ನು ಭದ್ರಾವತಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಕಾಚಗೊಂಡನಹಳ್ಳಿಯ ಅರುಮುಗ ಪ್ರಮುಖ ಆರೋಪಿಯಾಗಿದ್ದು ನಾಪತ್ತೆಯಾಗಿದ್ದಾನೆ. ಸೀಗೆಬಾಗಿಯ ಮುನ್ನ, ಸುರಗಿತೋಪಿನ ಚಂದ್ರಶೇಖರ್, ಹೊಸಸಿದ್ದಾಪುರ ಮೂರ್ತಿ ಬಂಧಿತ ಆರೋಪಿಗಳು. ಜಿಂಕೆ ಬೇಟೆಯಾಡಿ ಮಾಂಸ ತಂದು ಮಾರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ > ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ, ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?
ಇದನ್ನೂ ಓದಿ > ಶಿವಮೊಗ್ಗದಲ್ಲಿ ಕ್ರಿಕೆಟ್ ಬೆಟ್ಟಿಂಗ್, ಆರು ಮಂದಿ ಬಂಧನ!
ಮಿಲಿಟರಿ ಕ್ಯಾಂಪ್ ನ ಬಸ್ ನಿಲ್ದಾಣದ ಸಂತೆ ಮೈದಾನದ ಬಳಿ ಮಾಂಸದ ಜೊತೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.















