
ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿ ಸ್ಟೈಲ್ ಡ್ಯಾನ್ಸ್ ಗ್ರೂಪ್ ಆಯೋಜಿಸಿದ್ದ ವಿಶ್ವದಾಖಲೆಯ ನೃತ್ಯ ಪ್ರದರ್ಶನ ಭಾನುವಾರ ಅದ್ಧೂರಿಯಾಗಿ ನಡೆಯಿತು.
ಸಂಸ್ಥೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ನಿರಂತರವಾಗಿ 2 ಗಂಟೆ 10 ನಿಮಿಷಗಳ ಕಾಲ ನೃತ್ಯ ಪ್ರದರ್ಶಿಸುವ ಮೂಲಕ ನೋಬಲ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಿದ್ದಾರೆ.
ಇದನ್ನೂ ಓದಿ > > ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಯುವಕ ಹೃದಯಾಘಾತದಿಂದ ಸಾವು!
ಈ ವಿಶ್ವದಾಖಲೆ ಪ್ರಯತ್ನಕ್ಕಾಗಿ ಹಲವು ದಿನಗಳಿಂದ ವಿದ್ಯಾರ್ಥಿಗಳು ಕಠಿಣ ಅಭ್ಯಾಸ ನಡೆಸಿದ್ದರು ಎಂದು ಸಂಸ್ಥೆಯ ಶಶಿಕುಮಾರ್ ತಿಳಿಸಿದರು.
ವಿವಿಧ ಶೈಲಿಯ ನೃತ್ಯಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಇದನ್ನೂ ಓದಿ > > ಗಾಂಜಾ ಸಾಗಾಟ, ಪೊಲೀಸರ ದಾಳಿ, ಇಬ್ಬರು ಅರೆಸ್ಟ್
ಕ್ರೀಡಾಂಗಣದಲ್ಲಿ ಪೋಷಕರು, ನೃತ್ಯಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಂಡವನ್ನು ಹುರಿದುಂಬಿಸಿದರು.
ಕಾಯ೯ಕ್ರಮದಲ್ಲಿ ಉಪಾಧ್ಯಕ್ಷ ಈ ವಿಶ್ವಾಸ್ , ಕಾಯ೯ದಶಿ೯ ಸಿಂಪ್ಲೆಕ್ಸ್ ರಮೇಶ್ , ಯುವ ನಾಯಕರಾದ ಶರತ್ ಮರಿಯಪ್ಪ ,ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ ನಿದೇ೯ಶಕ ಉಮೇಶ್ , ಕ್ರೀಡಾ ಇಲಾಖೆ ನಿದೇ೯ಶಕ ರೇಖ್ಯಾ ನಾಯಕ್, ನೊಬಲ್ ವಡ್೯ ರೆಕಾಡ್೯ ಸ೦ಸ್ಥೆಯ ಜಿಲ್ಲಾ ನಿದೇ೯ಶಕರಾದ ಎಸ್ ಕೃಷ್ಣಮೂತಿ೯ , ಮತ್ತು ನೃತ್ಯ ಸ೦ಸ್ಥೆಯ ಮುಖ್ಯಸ್ಥರಾದ ಶಶಿಕುಮಾರ್ , ನೃತ್ಯ ಸ೦ಸ್ಥೆಯ ವ್ಯವಸ್ಥಾಪಕರಾದ ವಿನಯ್ , ನೃತ್ಯ ನಿದೇ೯ಶಕರಾದ ಸೃಜನ್ ಉಪಸ್ಥಿತರಿದ್ದರು.














