ಆನಂದಪುರ: ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಿ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಅವರ ನೇತೃತ್ವದಲ್ಲಿ ಐಗಿನಬೈಲು ಕ್ರಾಸ್ ಹಾಗೂ ಹೊಸೂರು ಅರಣ್ಯ ನರ್ಸರಿ ಕ್ರಾಸ್ ಬಳಿ ಸುರಕ್ಷತಾ ಬ್ಯಾರಲ್‌ಗಳನ್ನು ಅಳವಡಿಸಿ, ಅವುಗಳಿಗೆ ರಾತ್ರಿ ವೇಳೆಯಲ್ಲೂ ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುವಂತೆ ರೇಡಿಯಂ ಸ್ಟಿಕರ್‌ಗಳನ್ನು ಅಂಟಿಸಿದರು.
ಇದನ್ನೂ ಓದಿ > > ಹಣ್ಣಿನ ಅಂಗಡಿಗೆ ನುಗ್ಗಿ ಮಾವು, ದಾಳಿಂಬೆ ಕದ್ದ ಖದೀಮ!
ಈ ಎರಡೂ ಸ್ಥಳಗಳು ಅಪಘಾತ ಪ್ರದೇಶಗಳಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಲು ಹಾಗೂ ರಸ್ತೆ ವಿಭಜನೆ ಸ್ಪಷ್ಟವಾಗಿ ಕಾಣುವಂತೆ ಈ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ > > ಅಡ್ಮಿಷನ್ ಮಾಡಿಕೊಳ್ಳಲು ಲಂಚಕ್ಕೆ ಬೇಡಿಕೆ, ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ!
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಬಾರದು. ಜೀವಕ್ಕಿಂತ ಅಮೂಲ್ಯವಾದುದು ಮತ್ತೊಂದಿಲ್ಲ ಎಂದರು.
ಐಗಿನಬೈಲು ಕ್ರಾಸ್ ಹಾಗೂ ಹೊಸೂರು ಅರಣ್ಯ ನರ್ಸರಿ ಕ್ರಾಸ್ ಅಪಘಾತ ಪ್ರದೇಶಗಳಾಗಿರುವ ಕಾರಣ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಲು ಈ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ > > ಶಿವಮೊಗ್ಗದಲ್ಲಿ ವಿಶ್ವದಾಖಲೆಯ ನೃತ್ಯ ಪ್ರದರ್ಶನ ಹೇಗಿತ್ತು?














