ಸಾಗರ: ಅಂಗಡಿಯೊಳಗೆ ನುಗ್ಗಿದ ಕಳ್ಳನೊಬ್ಬ ಮಾವಿನ ಹಣ್ಣು ಹಾಗೂ ದಾಳಿಂಬೆಯನ್ನು ಚೀಲಕ್ಕೆ ತುಂಬಿಕೊಂಡು ಸಿಕ್ಕಿಬಿದ್ದ ವಿಚಿತ್ರ ಘಟನೆ ಸಾಗರದ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆ ಸಮೀಪ ನಡೆದಿದೆ.
ತಡರಾತ್ರಿ ಹಣ್ಣಿನ ಅಂಗಡಿಗೆ ನುಗ್ಗಿದ ಖದೀಮ, ಹಣ್ಣುಗಳನ್ನು ಕದಿಯುತ್ತಿದ್ದಾಗ ಅಂಗಡಿಯಲ್ಲಿದ್ದ ಸಿಸಿಟಿವಿ ಸೆನ್ಸರ್ ಅಲರ್ಟ್ ತಂತ್ರಜ್ಞಾನ ಆತನ ಆಟಕ್ಕೆ ಮುಕ್ತಿ ಹಾಡಿದೆ. ಕಳ್ಳ ಅಂಗಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಮಾಲೀಕರ ಮೊಬೈಲ್‌ಗೆ ತಕ್ಷಣವೇ ಎಚ್ಚರಿಕೆಯ ಸಂದೇಶ (Alert Message) ರವಾನೆಯಾಗಿದೆ.
ಇದನ್ನೂ ಓದಿ > > ಆಟವಾಡುತ್ತಾ ರಸ್ತೆಗೆ ಬಂದ ಬಾಲಕ, ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವು
ಅಲರ್ಟ್ ಮೆಸೇಜ್ ನೋಡಿ ಎಚ್ಚೆತ್ತ ಮಾಲೀಕರು ತಕ್ಷಣವೇ ಅಂಗಡಿಯತ್ತ ಧಾವಿಸಿದ್ದಾರೆ. ಈ ವೇಳೆ ಸಿಕ್ಕಿಬೀಳುವ ಭಯದಿಂದ ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಸ್ಥಳೀಯ ಸಾಗರ ಟೌನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ > > ಅಡ್ಮಿಷನ್ ಮಾಡಿಕೊಳ್ಳಲು ಲಂಚಕ್ಕೆ ಬೇಡಿಕೆ, ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ!
ಬಂಧಿತ ಆರೋಪಿ ಸಾಗರ ಮೂಲದವನೆಂದು ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕಳ್ಳ ಹಣ್ಣುಗಳನ್ನು ಚೀಲಕ್ಕೆ ತುಂಬುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.














