ಕಾರ್ಗಲ್: ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಗಲ್ ಮೂಲದ ರಮ್ಲಾ ಸುಲೇಮಾನ್ ಎಂಬ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಿದ್ದ 17 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 45,000 ನಗದು ಕಳ್ಳತನವಾಗಿರುವ ಘಟನೆ ನಡೆದಿದೆ.
ಇದನ್ನೂ ಓದಿ > > ಹಣ್ಣಿನ ಅಂಗಡಿಗೆ ನುಗ್ಗಿ ಮಾವು, ದಾಳಿಂಬೆ ಕದ್ದ ಖದೀಮ!
ಈಚೆಗೆ ಕಾರ್ಗಲ್ ಪಟ್ಟಣದಲ್ಲಿ ನಡೆಯುತ್ತಿದ್ದ ಶುಭ ಕಾರ್ಯಕ್ಕಾಗಿ ಶಿವಮೊಗ್ಗದಿಂದ ಪ್ರಯಾಣಿಸುತ್ತಿದ್ದ ಮಹಿಳೆಯ ಪಕ್ಕದಲ್ಲಿ ಆಲ್ಕೊಳ ಬಳಿ ಅಪರಿಚಿತ ಮಹಿಳೆಯೊಬ್ಬರು ಬಂದು ಕುಳಿತಿದ್ದರು. ಆಕೆಯೊಂದಿಗೆ ಮಾತನಾಡುತ್ತಿದ್ದಂತೆ ನಿದ್ದೆಗೆ ಜಾರಿದ ರಮ್ಲಾ ಸುಲೇಮಾನ್, ಎಚ್ಚರಗೊಂಡಾಗ ಆನಂದಪುರದ ಯಡೇಹಳ್ಳಿಯನ್ನು ಬಸ್ ತಲುಪಿತ್ತು. ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ಜಿಪ್ ತೆರೆದು, ಕೈಯ್ಯಾಡಿಸಿ ನೋಡಿದಾಗ ಬಟ್ಟೆಯ ಗಂಟಿನಲ್ಲಿ ಕಟ್ಟಿದ್ದ 171 ಗ್ರಾಂ ತೂಕದ ಬಂಗಾರ ಮತ್ತು 45,000/- ನಗದು ಕಳ್ಳತನವಾಗಿತ್ತು.
ಇದನ್ನೂ ಓದಿ > > ಅಡ್ಮಿಷನ್ ಮಾಡಿಕೊಳ್ಳಲು ಲಂಚಕ್ಕೆ ಬೇಡಿಕೆ, ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ!
ಕೂಡಲೇ ಬಸ್ ಸಿಬ್ಬಂದಿಗೆ ತಿಳಿಸಿದಾಗ, ಆನಂದಪುರ ಸಮೀಪ ಅಪರಿಚಿತ ಮಹಿಳೆ ಬಸ್‌ನಿಂದ ಇಳಿದಿದ್ದಾಗಿ ತಿಳಿಸಿದ್ದಾರೆ. ಗಾಬರಿಗೊಂಡ ಮಹಿಳೆ ಎಲ್ಲಿ ದೂರು ನೀಡಬೇಕೆಂಬ ಗೊಂದಲದಲ್ಲಿದ್ದರು. ಅಂತಿಮವಾಗಿ ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದರು.














