• About Us
  • Advertise
  • Privacy & Policy
  • Contact Us
Wednesday, May 6, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಅಂಕಣಗಳು

ವೃದ್ದಾಪ್ಯ, ವಯೋ ಸಹಜ ತೊಂದರೆಗಳು.. ಶಾಪವಲ್ಲ!

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
January 22, 2026
in ಅಂಕಣಗಳು
ವೃದ್ದಾಪ್ಯ, ವಯೋ ಸಹಜ ತೊಂದರೆಗಳು.. ಶಾಪವಲ್ಲ!
Share on FacebookShare on TwitterShare on WhatsApp

ಸಾಮಾನ್ಯವಾಗಿ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ನಾವು ವೈದ್ಯರಲ್ಲಿ ಹೋಗುತ್ತೇವೆ. ಚಿಕಿತ್ಸೆ ಪಡೆದು ಅವರು ಕೊಡುವ ಔಷಧಿ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗುವ ಆಶಯವನ್ನು ಹೊಂದುತ್ತೇವೆ. ಆದರೆ ಕೆಲವು ಜನರು ಬಹಳಷ್ಟು ಬಾರಿ  ತೊಂದರೆಗಳನ್ನು ಕೇವಲ ಒಂದೇ ಸಿಟ್ಟಿಂಗ್ ನಲ್ಲಿ ಅಥವಾ ಒಂದು ಬಾರಿಯ ಔಷಧಿ ಮಾತ್ರೆ ಸೇವನೆಯಿಂದ ಗುಣವಾಗಲಿ ಎಂದು ಆಶಿಸುತ್ತಾರೆ. ಅಂತಹವರು ವೈದ್ಯರಿಗೆ ತಾವಾಗಿಯೇ ಇಂಜೆಕ್ಷನ್ ಮಾಡಲು ಕೇಳಿಕೊಳ್ಳುತ್ತಾರೆ. ಔಷಧಿ ಮತ್ತು ಮಾತ್ರೆ ಗಳಿಂದ ಬೇಗನೆ ಗುಣವಾಗುವುದಿಲ್ಲ ಇಂಜೆಕ್ಷನ್ ಮಾಡಿದರೆ ತೀವ್ರ ಗುಣಮುಖವಾಗುತ್ತದೆ ಎಂಬುದು ಅವರ ಅಭಿಪ್ರಾಯ. ಎಷ್ಟೋ ಜನರು ಇಂಜೆಕ್ಷನ್ ಮಾಡದ ವೈದ್ಯರನ್ನು ಒಂದು ಸೂಜಿ ಮಾಡದ ಆತ ಅದೆಂತ ವೈದ್ಯ ಎಂದು ಮೂದಲಿಸುವುದೂ ಉಂಟು. ಮತ್ತೆ ಕೆಲವರು ಮೊದಲ ದಿನ ಒಬ್ಬ ವೈದ್ಯರ ಬಳಿ ಹೋಗಿ ಮರುದಿನ ಮತ್ತೊಬ್ಬ ಅದರ ಮರುದಿನ ಮಗದೊಬ್ಬ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಮೂರರಿಂದ ಐದು ದಿನಗಳ ಕಾಲ ಇರುವ ಜ್ವರ, ಕೆಮ್ಮು, ನೆಗಡಿಯಂತಹ ಕಾಯಿಲೆಗಳು ಕೊನೆಯ ದಿನ ಯಾವ ವೈದ್ಯರ ಬಳಿ ಹೋದಾಗ ಗುಣವಾಗುತ್ತದೆಯೋ ಅದೇ ವೈದ್ಯರು ಅತ್ಯುತ್ತಮ ಎಂದು ಶರಾ ಬರೆಯುತ್ತಾರೆ.

 ಇದು ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸುವ ಅತಿ ದೊಡ್ಡ ಸಮಸ್ಯೆಯಾಗಿದೆ.

ಜನಕ್ ಎಸ್ ಗುಲೇಚ ಎಂಬ ಹಿರಿಯ ವ್ಯಕ್ತಿ, ಹಲವಾರು ಆಸ್ಪತ್ರೆಗಳ ಆಡಳಿತ ಮಂಡಳಿಯ ನಿರ್ದೇಶಕರಾಗಿರುವವರು ಹಿರಿಯ ವಯಸ್ಸಿನ ವೃದ್ಧರಿಗೆ ಈ ಐದು ಮುಖ್ಯ ವಿಷಯಗಳನ್ನು ಅತ್ಯಂತ ಕಾಳಜಿ ಪೂರ್ವಕವಾಗಿ ಅರಿತುಕೊಳ್ಳಲು ಒತ್ತಾಯಿಸುತ್ತಾರೆ.

ಬಹಳಷ್ಟು ಕಾಯಿಲೆಗಳು ಎಂದು ತೋರುವ ಮನೋದೈಹಿಕ ತೊಂದರೆಗಳು ನಿಜವಾಗಿಯೂ ಕಾಯಿಲೆಗಳಲ್ಲ ಅವು ವಯೋಸಹಜವಾಗಿ ಉಂಟಾಗುವ ತೊಂದರೆಗಳು. ಇಂತಹ ತೊಂದರೆಗಳಿಗೆ ಪದೇ ಪದೇ ವೈದ್ಯರ ಬಳಿ ಸಾರಿ ಔಷಧೀಯ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ನೋವನ್ನು ಹತ್ತಿಕ್ಕಬಹುದೇ ಹೊರತು ನೋವಿನ ಮೂಲವನಲ್ಲ ಕಾರಣ ನೋವಿನ ಮೂಲ ವೃದ್ಧಾಪ್ಯದೆಡೆಗಿನ ಹೆಜ್ಜೆ ಅಲ್ಲವೇ?

 * ನಿಮ್ಮ ಆರೋಗ್ಯ ದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಆದರೆ ನಿಮಗೆ ವಯಸ್ಸಾಗುತ್ತಿದೆ ಎಂಬ ಸತ್ಯವನ್ನು ಒಪ್ಪಿ ಅಪ್ಪಿಕೊಳ್ಳಿ 

 ನೀವು ತೊಂದರೆ ಎಂದು ಭಾವಿಸುವ ಬಹುತೇಕ ಸಮಸ್ಯೆಗಳು ವೃದ್ಧಾಪ್ಯದ ಕಾರಣದಿಂದ ಉಂಟಾಗುವ ಸಾಮಾನ್ಯ ಸಮಸ್ಯೆಗಳಾಗಿರುತ್ತವೆ.

 ಪದೇ ಪದೇ ವಸ್ತುಗಳನ್ನು ಮರೆಯುವುದು ವಯೋ ಸಹಜ ಮರೆವಿನ ಕಾರಣಕ್ಕೆ ಮಾತ್ರ. ಮತ್ತೆ ಕೆಲವೊಮ್ಮೆ ಅನ್ಯಮನಸ್ಕತೆಯಿಂದ ಮರೆವು ಉಂಟಾಗುತ್ತದೆಯೇ ಹೊರತು ಎಲ್ಲ ಮರೆವುಗಳು ಅಲ್ಜೈಮರ ಕಾಯಿಲೆಯ  ಲಕ್ಷಣವಲ್ಲ.

 ಯಾವುದೋ ಧ್ಯಾನದಲ್ಲಿ ಇಲ್ಲವೇ ಅವಸರದಲ್ಲಿ ಕನ್ನಡಕ, ಮೊಬೈಲ್, ಕರವಸ್ತ್ರ, ಬೈಕು ಇಲ್ಲವೇ ಕಾರಿನ ಕೀಲಿಗಳನ್ನು ಮರೆಯುವುದು ಸಾಮಾನ್ಯವಾದ ಕ್ರಿಯೆ.

ಬದುಕಿನಲ್ಲಿ ಆಯಾ ವಸ್ತುಗಳನ್ನು ನಿಗದಿತ ಸ್ಥಳದಲ್ಲಿ ಇಡುವ ಶಿಸ್ತನ್ನು ರೂಢಿಸಿಕೊಂಡರೆ ಬಹಳಷ್ಟು ಬಾರಿ ಈ ತೊಂದರೆಯಿಂದ ದೂರವಾಗಬಹುದು. ಇದು ಚಿಕ್ಕ ವಯಸ್ಸಿನವರಲ್ಲಿಯೂ  ಕಂಡು ಬರುತ್ತದೆ. ನಿರ್ಲಕ್ಷ, ಅಶಿಸ್ತು ಮತ್ತು ಅತ್ಯಾತುರಗಳು ಎಷ್ಟೋ ಬಾರಿ ಮರೆವಿಗೆ ಕಾರಣವಾಗುತ್ತದೆ.

 ಇಂತಹ ಸಮಯದಲ್ಲಿ ಕಳೆದುಕೊಂಡ ವಸ್ತುಗಳನ್ನು ಗಾಬರಿಯಿಂದ ಹುಡುಕುವ ಮುನ್ನ ಒಂದೆಡೆ ಶಾಂತವಾಗಿ ಕುಳಿತು ಕೊನೆಯ ಬಾರಿ ಆ ವಸ್ತುವನ್ನು ಎಲ್ಲಿಟ್ಟೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಹಾಗೆ ನೆನಪಿಸಿಕೊಂಡಾಗ ಖಂಡಿತವಾಗಿಯೂ ಅದು ನಮಗೆ ದೊರೆಯುವ ಸಾಧ್ಯತೆಗಳು ಬಹಳ. ಕಳೆಯದ ಹೊರತು ಎಲ್ಲೋ ಎತ್ತಿಟ್ಟಿರುವ ವಸ್ತುಗಳು ಅತ್ಯಂತ ಸುಲಭವಾಗಿ

ದೊರೆಯುತ್ತವೆ. ಆಗ ಸರಳವಾಗಿ ಮನದ ಗೊಂದಲಗಳು ಬಗೆಹರಿಯುತ್ತವೆ. 

 ನೀವು ಕಳೆದುಕೊಂಡ ವಸ್ತುಗಳನ್ನು ಕಳೆದುಕೊಂಡ ಜಾಗದಲ್ಲಿಯೇ ಮರಳಿ ಪಡೆಯುತ್ತೀರಿ…. ಇದು ಖಂಡಿತವಾಗಿಯೂ ಮರೆವಲ್ಲ…. ಡಿಮೆನ್ಸಿಯಾ, ಅಲ್ಜೈಮರ ಅಂತೂ ಅಲ್ಲವೇ ಅಲ್ಲ. 

2. ನಿಮ್ಮ ನಡಿಗೆಯಲ್ಲಾಗುವ ವ್ಯತ್ಯಾಸ ಇಲ್ಲವೇ ನಿಧಾನ ನಡಿಗೆ, ಕಾಲುಗಳಲ್ಲಿ ನಡುಕ ಉಂಟಾಗುವುದು ಕೂಡ ವಯೋ ಸಹಜ ನಿ:ಶಕ್ತಿಯಿಂದಲೇ ಹೊರತು ಪಾರ್ಶ್ವ ವಾಯುವಿನ ಚಿಹ್ನೆಗಳಲ್ಲ.

 ಇದಕ್ಕೆ ಕಾರಣ ಸ್ನಾಯು ದೌರ್ಬಲ್ಯವೇ ಹೊರತು ಬೇರೇನೂ ಅಲ್ಲ. ಪರಿಹಾರ ಅತ್ಯಂತ ಸರಳ ಹಾಗೂ ಸುಲಭವಾದದ್ದು ನಿಗದಿತವಾಗಿ ವ್ಯಾಯಾಮ ಮಾಡುವ ಮೂಲಕ ಸ್ನಾಯುಗಳಲ್ಲಿ ಬಲವನ್ನು ಹೆಚ್ಚಿಸಿಕೊಳ್ಳಬಹುದು. ಪ್ರತಿದಿನ ಇಂತಿಷ್ಟು ದೂರ ನಡೆಯಲೇಬೇಕು ಎಂಬ ಮಿತಿಯನ್ನು ಹಾಕಿಕೊಂಡು ಅದನ್ನು ಪಾಲಿಸುವ ಮೂಲಕ ಈ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು.

ವಯೋಸಹಜವಾಗಿ ದೇಹದಲ್ಲಿ ಚೋದಕಗಳು ಸರಿಯಾಗಿ ಬಿಡುಗಡೆ ಆಗದೆ ಹೋದಾಗ ದೇಹವು ಹಲವಾರು ಪೋಷಕ ಅಂಶಗಳ ಕೊರತೆಯಿಂದ ಬಳಲುತ್ತದೆ…. ಅದೂ ಅಲ್ಲದೆ ಈ ಹಿಂದಿನ ದೈಹಿಕ ಶ್ರಮದ ಬದುಕು ಇಲ್ಲದೆ ಹೋಗಿದ್ದು, ಆಹಾರ ಸಂಸ್ಕೃತಿಯು ಕೂಡ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಕಡಿಮೆಯಾದ ದೈಹಿಕ ಶ್ರಮ ಹಾಗೂ ಹೆಚ್ಚು ಎಣ್ಣೆ, ಬೆಣ್ಣೆ, ಸಿಹಿಯನ್ನು ಒಳಗೊಂಡ ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ಕೊಬ್ಬನ್ನು ಹೆಚ್ಚಿಸಿ ಅದರ ಪರಿಣಾಮವಾಗಿ ಬೊಜ್ಜು, ರಕ್ತದೊತ್ತಡ ಹಾಗೂ ಮಧುಮೇಹಗಳಿಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ದೈಹಿಕ ಅಶಕ್ತತೆ ಕಾಡಬಹುದು ಪರಿಹಾರ ನಮ್ಮ ಕೈಯಲ್ಲಿದ್ದು ವ್ಯಾಯಾಮ, ನಡಿಗೆ, ಯೋಗ, ಧ್ಯಾನಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. 

3. ನಿದ್ರಾ ಹೀನತೆ ಇಲ್ಲವೇ ನಿದ್ರಾ ರಹಿತತೆ…. ಎಲ್ಲಾ ನಿದ್ರಾ ರಹಿತತೆಗಳು ಇನ್ ಸೋಮ್ನಿಯಾ ಎಂಬ ನಿದ್ರಾಹೀನತೆಯ ತೊಂದರೆ ಅಲ್ಲ.

ವೃದ್ಧಾಪ್ಕದಲ್ಲಿ ಮೆದುಳಿನ ವಿಶ್ರಾಂತಿ ಪ್ರಕ್ರಿಯೆಯಲ್ಲಿ   ಬದಲಾವಣೆಯಾಗುತ್ತದೆ… ಪರಿಣಾಮವಾಗಿ ನಿದ್ರೆಯು ಕೂಡ. ಇದನ್ನು ವಯೋಸಹಜವಾಗಿ ಬದಲಾದ ನಿದ್ರಾ ಪ್ರಕ್ರಿಯೆ ಎಂದು ಹೇಳಬಹುದೇ ಹೊರತು ನಿದ್ರಾಹೀನತೆಯ ಕಾಯಿಲೆ ಅಲ್ಲವೇ ಅಲ್ಲ.

ಪ್ರತಿ ಬಾರಿಯೂ ನಿದ್ರೆ ಬಾರದೆ ಇರಲು ಹಾಸಿಗೆಯಲ್ಲಿ ಅತ್ತಿಂದಿತ್ತ ಹೊರಳಾಡುವುದು, ಮೊಬೈಲ್ ಕೈಯಲ್ಲಿ ಹಿಡಿದು ಕುಳಿತುಕೊಳ್ಳುವುದು, ತಡ ರಾತ್ರಿಯವರೆಗೆ ಟಿವಿ ನೋಡುವುದು ಖಂಡಿತವಾಗಿಯೂ ಪರಿಹಾರವನ್ನು ನೀಡುವುದಿಲ್ಲ…. ಇದು ಸಮಸ್ತೆಯನ್ನು ಹೆಚ್ಚಿಸುತ್ತದೆ. ಇನ್ನು ನಿದ್ರೆಯನ್ನು ಮಾಡಲು ಮಾತ್ರೆಗಳನ್ನು ಸೇವಿಸುವುದು ಇನ್ನೂ ಅಪಾಯಕಾರಿ. ಇದು ಬೀಳುವ ತೊಂದರೆಗೆ ಕಾರಣವಾಗುತ್ತದೆ.ನಿದ್ರೆ ಮಾತ್ರೆಗಳ ಸೇವನೆಯು ಮೆದುಳಿನ ಚಟುವಟಿಕೆಗಳಿಗೆ, ನೆನಪಿನ ಶಕ್ತಿಯು ಕುಂಠಿತವಾಗಲು  ಕಾರಣವಾಗುತ್ತದೆ.  

 ಇದಕ್ಕೆ ಅತ್ಯಂತ ಸುಲಭ ಹಾಗೂ ಸರಳವಾದ ಪರಿಹಾರವೆಂದರೆ ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಸೂರ್ಯನ ಬೆಳಕಿನಲ್ಲಿ ಕಾಲ ಕಳೆಯಬೇಕು ಮತ್ತು ಪ್ರತಿದಿನ ನಿಗದಿತವಾದ ದಿನಚರಿಯನ್ನು ಪಾಲಿಸಬೇಕು. ಅದುವೇ ನಿಜವಾದ ಔಷಧಿಯಾಗಿ ಪರಿಣಮಿಸುತ್ತದೆ. 

ರಾತ್ರಿಯ ಊಟವನ್ನು ಎಂಟು ಗಂಟೆಗೆ ಮೊದಲೇ ಮಾಡಿ ಮುಗಿಸಬೇಕು ಸಂಜೆ 6ರ ನಂತರ ಚಹಾ ಕಾಫಿ ಸೇವನೆಯನ್ನು ಮಾಡಲೇಬಾರದು.

* ದೇಹದ ವಿವಿಧ ಅಂಗಗಳಲ್ಲಿ ನೋವು ಎಂದರೆ  ಅರ್ಥರೈಟಿಸ್ ಇಲ್ಲವೇ ಆಸ್ಟಿಯೋಪೊರೋಸಿಸ್ ಎಂಬ ಮೂಳೆ ಸವೆತದ ಕಾಯಿಲೆಗಳಲ್ಲ. ಬಹಳಷ್ಟು ಬಾರಿ ವೃದ್ಧರು ತಮ್ಮ ಮೊಣಕಾಲುಗಳಲ್ಲಿ ಹಾಗೂ ಮಣಿಗಂಟುಗಳಲ್ಲಿ, ಕೀಲುಗಳಲ್ಲಿ ನೋವಿರುವುದನ್ನು ಹೇಳಿ ಇದು ಎಲುಬುಗಳ ಅಶಕ್ತತೆ ಅಲ್ಲವೇ ಎಂದು ಕೇಳುತ್ತಾರೆ.

ಆದರೆ ದೇಹದಲ್ಲಿರುವ ಮೂಳೆಗಳು ವಯಸ್ಸಾದಂತೆ ತೆಳುವಾಗುತ್ತವೆ. ಅವುಗಳಲ್ಲಿ ಕ್ಯಾಲ್ಸಿಯಂನ ಕೊರತೆ ಉಂಟಾಗುತ್ತದೆ. ಶೇಕಡ 99 ರಷ್ಟು ನೋವು ವಯಸ್ಸು ಹೆಚ್ಚಿದಂತೆ ನರಗಳಲ್ಲಿ, ನರವ್ಯೂಹದ ರಚನೆಯಲ್ಲಿ ಉಂಟಾಗುತ್ತದೆ ಇದನ್ನು  ಕೇಂದ್ರ ನರವ್ಯೂಹದಲ್ಲಿ ಉಂಟಾಗುವ ಸಂವೇದನೆ (ಸೆಂಟ್ರಲ್ ಸೆನ್ಸಿಟೈಸೇಷನ್) ಎಂದು ಕರೆಯುತ್ತಾರೆ.

 ಔಷಧಿ ಮತ್ತು ಮಾತ್ರೆಗಳಿಂದ ಈ ನೋವುಗಳು ಶಮನವಾಗುವುದಿಲ್ಲ, ಬದಲಾಗಿ ಲಘು ವ್ಯಾಯಾಮ ಮತ್ತು ಫಿಜಿಯೋಥೆರಪಿ ವ್ಯಾಯಾಮಗಳು ನೋವನ್ನು ನಿವಾರಿಸುವಲ್ಲಿ ಸಹಾಯಕವಾಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಪಾದಗಳನ್ನು ತುಸು ಬಿಸಿಯಾದ ನೀರಿನಲ್ಲಿ ಹತ್ತಿಪ್ಪತ್ತು ನಿಮಿಷಗಳ ಕಾಲ ಇಡುವ ಮೂಲಕ ಕೂಡ ನೋವನ್ನು ನಿವಾರಿಸಿಕೊಳ್ಳಬಹುದು. ಬಿಸಿನೀರು ಉಬ್ಬಿರುವ ನಾಳಗಳ ಊತವನ್ನು ಕಡಿಮೆಗೊಳಿಸುತ್ತದೆ. ಲಘುವಾಗಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವ ಮೂಲಕವೂ ಕೂಡ ನೋವನ್ನು ನಿರ್ಮೂಲಗೊಳಿಸಬಹುದು.

* ರೋಗ ಚಿಕಿತ್ಸಾ ವಿಧಾನದ ರಿಪೋರ್ಟ್ಗಳಲ್ಲಿ ಇರುವ ವ್ಯತ್ಯಾಸವೇ ಕಾಯಿಲೆಯಲ್ಲ. ನಮ್ಮ ದೇಹದ ಪ್ರತಿಯೊಂದು ವ್ಯವಸ್ಥೆಗೂ ತನ್ನದೇ ಆದ ಗರಿಷ್ಠ ದಿಂದ ಕನಿಷ್ಠ ಮಿತಿಗಳು ಇದ್ದು ಅವುಗಳ ನಡುವಿನ ಯಾವುದೇ ಮಿತಿ ಸರಿ ಎಂದು ಇರುತ್ತದೆ. 

ಈ ಹಿಂದಿನ ಪರೀಕ್ಷೆಗಳ ರಿಪೋರ್ಟುಗಳು ಹಳತಾಗಿದ್ದರೆ ಕೂಡ ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚು ವಯಸ್ಸಾದವರ ದೈಹಿಕ ನಿಮ್ನತೆಯು ಸೂಕ್ಷ್ಮವಾಗಿರಬೇಕು ಎಂದು ಹೇಳುತ್ತಾರೆ. ಉದಾಹರಣೆಗೆ ತುಸು ಹೆಚ್ಚು ಕೊಲೆಸ್ಟ್ರಾಲ್ ಇದ್ದರೂ ಅದು ಅಷ್ಟೊಂದು ಹಾನಿಕರವಲ್ಲ ಕಾರಣ ಮೆಂಬ್ರೇನುಗಳು ಮತ್ತು ಹಾರ್ಮೋನುಗಳಿಂದ ಮಾಡಲ್ಪಟ್ಟ ಕೊಲೆಸ್ಟ್ರಾಲ್ ಹೆಚ್ಚಿನ ಶಕ್ತಿಯನ್ನು ನೀಡುವ ಮೂಲಕ ದೀರ್ಘ ಕಾಲ ಆರೋಗ್ಯವನ್ನು ಕಾಯ್ದಿಟ್ಟುಕೊಳ್ಳಲು ಅನುಕೂಲವನ್ನು ಕಲ್ಪಿಸುತ್ತದೆ.  ಕೊಲೆಸ್ಟ್ರಾಲ್ ಕಡಿಮೆ ಇದ್ದರೆ ಅದು ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಕಡಿಮೆಗೊಳಿಸುತ್ತದೆ  

 ಅಮೆರಿಕದ ಆಸ್ಪತ್ರೆಗಳು ಅತಿ ಹೆಚ್ಚಿನ ರಕ್ತದ ಒತ್ತಡವನ್ನು ಅದರಲ್ಲೂ ವಯಸ್ಸಾದವರ ರಕ್ತದ ಮಟ್ಟ 150 / 90  Mm hg ಇದ್ದರೂ ಅದು ತೊಂದರೆ ನೀಡುವುದಿಲ್ಲ 120/ 80 Mm hg ಇರುವುದು ಕೇವಲ ಮಹಿಳೆಯರಲ್ಲಿ ಮತ್ತು ಚಿಕ್ಕ ಮಕ್ಕಳಲ್ಲಿ ಮಾತ್ರ.

 ಸ್ನೇಹಿತರೆ ವೃದ್ಧಾಪ್ಯ ಕಾಯಿಲೆ ಇಲ್ಲ…

ವಯೋ ಸಹಜವಾಗಿ ಉಂಟಾಗುವ ಬದಲಾವಣೆಗಳು ಕಳೆದುಕೊಳ್ಳುವಿಕೆ ಅಲ್ಲ…. ವೃದ್ದಾಪ್ಯ ಎನ್ನುವುದು ಬದುಕಿನ ಒಂದು ಹಂತ… ದೇಹಕ್ಕೆ ಉಂಟಾಗುವ ಎಲ್ಲಾ ಅನಾನುಕೂಲತೆಗಳನ್ನು ಕಾಯಿಲೆ ಎಂದು ಭಾವಿಸದಿರಿ.

ಸಮಯಕ್ಕೆ ಸರಿಯಾಗಿ ನಿಗದಿತ ತಪಾಸಣೆಗೆ ಒಳಗಾಗಿ.

ಯಾವುದೇ ತೊಂದರೆಗಳಿಗೆ ಗೂಗಲ್ ನ ಮೊರೆ ಹೋಗುವುದು ಬೇಡ. ವಿವಿಧ ಬಗೆಯ ಆರೋಗ್ಯದ ಸಮಸ್ಯೆಗಳಿಗೆ ಜಾಹೀರಾತುಗಳಲ್ಲಿ ತೋರುವ ಪರಿಹಾರಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಡಿ… ಎಂಬುದು ಹಿರಿಯರಿಗೆ ನನ್ನ ಕಳಕಳಿಯ ವಿನಂತಿ.

 ಇನ್ನು ಮನೆಯಲ್ಲಿ ವಯಸ್ಸಾದವರ ಕಾಳಜಿ ಮಾಡುವ ಮಕ್ಕಳು ನಿಮ್ಮ ಪಾಲಕರನ್ನು ಕೇವಲ ಆಸ್ಪತ್ರೆಗಳಿಗೆ ಮಾತ್ರ ಕರೆದೊಯ್ಯುವ ಬದಲಾಗಿ ಅವರೊಂದಿಗೆ ವಾಕಿಂಗ್ ಮಾಡಿ. ಸೂರ್ಯನ ಬಿಸಿಲಲ್ಲಿ ನಿಮ್ಮ ಪಾಲಕರೊಂದಿಗೆ ಕುಳಿತುಕೊಳ್ಳಿ ಮಾತನಾಡಿ ಆಹಾರವನ್ನು ಸೇವಿಸಿ ಅದುವೇ ನಿಜವಾದ ಔಷಧಿಯಾಗಿ ಪರಿಣಮಿಸುತ್ತದೆ. 

 ವೃದ್ಧಾಪ್ಯ ಅಥವಾ ಮುಪ್ಪಿನ ಅವಸ್ಥೆ ನಮಗೆ ಶತ್ರುವಲ್ಲ ತಪ್ಪು ತಿಳುವಳಿಕೆ ಮತ್ತು ಅರಿವಿನ ಕೊರತೆಗಳು ನಮ್ಮ ನಿಜವಾದ ಶತ್ರುಗಳು.

 ವೃದ್ಧಾಪ್ಯವನ್ನು ಸಹಜವಾಗಿ ಸ್ವೀಕರಿಸಿ 

  • ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್ 

 

Tags: Columnsnatural problemsOld age
Previous Post

ಶಾಲೆಗಳಿಗೆ ಸೌಲಭ್ಯ ಕಲ್ಪಿಸಿ: ಶಾಸಕ ಬಿ.ವೈ. ವಿಜಯೇಂದ್ರ ಒತ್ತಾಯ

Next Post

“ಸೂರ್ಯನ ಪಯಣದ ಪಥ — ರಥ ಸಪ್ತಮಿ ” | ಸೂರ್ಯ ನಮಸ್ಕಾರ ಯೋಗದ ಪ್ರಾಮುಖ್ಯತೆ ಏನು?

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
“ಸೂರ್ಯನ ಪಯಣದ ಪಥ — ರಥ ಸಪ್ತಮಿ ” | ಸೂರ್ಯ ನಮಸ್ಕಾರ ಯೋಗದ ಪ್ರಾಮುಖ್ಯತೆ ಏನು?

"ಸೂರ್ಯನ ಪಯಣದ ಪಥ -- ರಥ ಸಪ್ತಮಿ " | ಸೂರ್ಯ ನಮಸ್ಕಾರ ಯೋಗದ ಪ್ರಾಮುಖ್ಯತೆ ಏನು?

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

2
ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

2
ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

May 6, 2026
ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026
ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

May 6, 2026
ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

May 6, 2026

Recent News

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

May 6, 2026
ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026
ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

May 6, 2026
ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

May 6, 2026
Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

May 6, 2026
ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026

Copyright © 2026 Yuva Dhwani. Designed by KIPL

No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ

Copyright © 2026 Yuva Dhwani. Designed by KIPL