ಶಿವಮೊಗ್ಗ: ಶಿಕಾರಿಪುರ ಪಟ್ಟಣದ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ > > ಶಿವಮೊಗ್ಗ, ಕೇಂದ್ರ ಕಾರಾಗೃಹದಲ್ಲಿ ಪೊಲೀಸರ ದಿಢೀರ್ ಪರಿಶೀಲನೆ
ಮೃತಳನ್ನು ಶಿಕಾರಿಪುರದ ನಮಿತಾ (21) ಎಂದು ಗುರುತಿಸಲಾಗಿದೆ.
ಕಾಲೇಜು ಸಮವಸ್ತ್ರದಲ್ಲಿಯೇ ನಮಿತಾ ಕೆರೆಗೆ ಬಿದ್ದಿದ್ದಾರೆ. ಬಿಸಿಎ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿತ್ತು. ಒಂದು ಸೆಮಿಸ್ಟರ್ನಲ್ಲಿ ನಮಿತಾ ಅನುತ್ತೀರ್ಣರಾಗಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಕೆರೆಗೆ ಹಾರಿರುವ ಶಂಕೆ ಇದೆ.
ಇದನ್ನೂ ಓದಿ > > ಶಿವಮೊಗ್ಗ, ಕೇಂದ್ರ ಕಾರಾಗೃಹದಲ್ಲಿ ಪೊಲೀಸರ ದಿಢೀರ್ ಪರಿಶೀಲನೆ
ಘಟನೆ ಸಂಬಂಧ ಶಿಕಾರಿಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














