ಶಿವಮೊಗ್ಗ: ಗಾಜನೂರು ಜಲಾಶಯದ ಬಳಿ ಭಾನುವಾರ ಮಧ್ಯಾಹ್ನ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಜೆ.ಪಿ. ನಗರದ ನದೀಮ್ (28) ಮತ್ತು ಅಯಾನ್ (18) ಮೃತರು. ಇವರು ಸ್ನೇಹಿತರೊಂದಿಗೆ ಪವರ್ಹೌಸ್ ಪಕ್ಕದ ನದಿಗೆ ತೆರಳಿದ್ದರು. ಈ ವೇಳೆ ನೀರಿನ ಆಳದ ಅರಿವಿಲ್ಲದೆ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ > >ಈ ಬದ್ಧತೆ ಎಂದೂ ಭದ್ರ, “ಸಮಾಜದ ಕಟ್ಟ ಕಡೆಯವರಿಗೆ ಮೊಟ್ಟ ಮೊದಲ ಸ್ಥಾನ”
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ತುಂಗಾನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಯಿತು.
ಇದನ್ನೂ ಓದಿ > >ಕಾರು, ಕ್ಯಾಂಟರ್ ಮುಖಾಮುಖಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು!
ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.














