• About Us
  • Advertise
  • Privacy & Policy
  • Contact Us
Wednesday, October 28, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ರೈತರಿಗೆ ಗುಡ್ ನ್ಯೂಸ್, ಸಾಲ ಮರುಪಾವತಿ ಅವಧಿ 3 ರಿಂದ 5 ವರ್ಷ ವಿಸ್ತರಣೆ!

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
October 28, 2026
in ಶಿವಮೊಗ್ಗ
ರೈತರಿಗೆ ಗುಡ್ ನ್ಯೂಸ್, ಸಾಲ ಮರುಪಾವತಿ ಅವಧಿ 3 ರಿಂದ 5 ವರ್ಷ ವಿಸ್ತರಣೆ!
Share on FacebookShare on TwitterShare on WhatsApp
ಶಿವಮೊಗ್ಗ :  ಮುಂಗಾರು ವೈಫಲ್ಯದಿಂದಾಗಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರವು ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರ ಹಿತಕಾಯುವ ನಿಟ್ಟಿನಲ್ಲಿ ಅವರ ಬದುಕಿಗೆ ಆಸರೆಯಾಗಿ ರೈತರು ಪಡೆದ ಬೆಳೆಸಾಲದ ಮರುಪಾವತಿಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಅವರು ಹೇಳಿದರು.
ಶಿವಮೊಗ್ಗದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಾಟ್ಸಪ್‌ ಗ್ರೂಪ್‌ಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿ 
ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವತಿಯಿಂದ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಜಿಲ್ಲಾ ಸಮಾಲೋಚನಾ ಸಭೆಯ ಅ‍ಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬ್ಯಾಂಕುಗಳ ವ್ಯವಸ್ಥಾಪಕರು ಸಾಲ ವಸೂಲಾತಿ ವಿಚಾರದಲ್ಲಿ ರೈತರ ಮೇಲೆ ಯಾವುದೇ ಒತ್ತಡ ಹೇರದಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ರೈತರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಸಾಲ ಮರುಪಾವತಿ ಅವಧಿ ವಿಸ್ತರಣೆ ಸೇರಿದಂತೆ ಸರ್ಕಾರದ ಸೌಲಭ್ಯಗಳು ರೈತರಿಗೆ ತಲುಪುವಂತೆ ಬ್ಯಾಂಕ್‌ಗಳು ಸಹಕರಿಸಬೇಕು ಅಲ್ಲದೆ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಕ್ಕೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ಖರೀದಿಸಲು ಅವರ ಅಗತ್ಯಗಳಿಗೆ ಯಾವುದೇ ನಿರ್ಬಂಧಗಳಿಲ್ಲದೆ ಹೊಸ ಸಾಲ ನೀಡುವಂತೆಯೂ ಅವರು ಸೂಚಿಸಿದರು.
 ಇದನ್ನೂ ಓದಿ > > ರಾಜ್ಯದಲ್ಲಿ ಚಳಿ ಹೆಚ್ಚಳ, ಹಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆ, ಏನಿದು ಕಾರಣ?

ಜಿಲ್ಲೆಯಲ್ಲಿ ಶೇ.38ರಷ್ಟು ಮಳೆ ಕೊರತೆ

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಶೇ.38ರಷ್ಟು ಮಳೆ ಕೊರತೆ ಇರುವುದನ್ನು ಗುರುತಿಸಲಾಗಿದೆ. ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಹೊಸನಗರ, ಸಾಗರ, ಶಿಕಾರಿಪುರ, ಸೊರಬ ಮತ್ತು ತೀರ್ಥಹಳ್ಳಿ ತಾಲೂಕುಗಳನ್ನು ಭಾಗಶಃ ಬರಪೀಡಿತ ತಾಲೂಕುಗಳೆಂದು ವರ್ಗೀಕರಿಸಿ ಸರ್ಕಾರ ಆದೇಶಿಸಿರುವುದಾಗಿ ತಿಳಿಸಿದರು.
ಸರ್ಕಾರದ ಮಾರ್ಪಡಿಸಿದ ಮಾರ್ಗಸೂಚಿಗಳ ಪ್ರಕಾರ, ಭಾಗಶಃ ಬರಪೀಡಿತ ತಾಲೂಕುಗಳಲ್ಲಿ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಗೆ ಹಾಗೂ ತೀವ್ರ ಬರಪೀಡಿತ ತಾಲೂಕುಗಳಲ್ಲಿ 60 ತಿಂಗಳಿಗೆ ವಿಸ್ತರಿಸಲಾಗಿದೆ. ಸಾಲ ಮರುಪಾವತಿ ಅವಧಿ ವಿಸ್ತರಣೆಯ ಸೌಲಭ್ಯವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ. ಪ್ರಸಕ್ತ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ತೊಂದರೆಯಾಗದಂತೆ ಬ್ಯಾಂಕ್ ಅಧಿಕಾರಿಗಳು ಮಾನವೀಯವಾಗಿ ನಡೆದುಕೊಳ್ಳಬೇಕು ಎಂದ ಅವರು, ರೈತರ ಸಾಲ ಮರುಪಾವತಿ ವಿಚಾರದಲ್ಲಿ ಬ್ಯಾಂಕ್‌ಗಳಿಂದ ಒತ್ತಡ ಅಥವಾ ಬಲವಂತದ ಕುರಿತು ದೂರುಗಳು ಬಂದರೆ ಸಂಬಂಧಪಟ್ಟ ಬ್ಯಾಂಕ್ ಅಥವಾ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿಯಮಗಳ ಉಲ್ಲಂಘನೆಯಾದರೆ ಶಿಸ್ತು ಕ್ರಮದ ಜೊತೆಗೆ ಕಾನೂನು ಪರಿಣಾಮಗಳೂ ಎದುರಿಸಬೇಕಾಗಬಹುದು ಎಂದವರು ನುಡಿದರು.
 ಇದನ್ನೂ ಓದಿ > >ಶಿವಮೊಗ್ಗ, ಫುಟ್‌ಪಾತ್‌ ಕಾರ್ಯಾಚರಣೆಯಲ್ಲಿ JCB ಘರ್ಜನೆ!
ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಕ್ಕೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ಖರೀದಿಸಲು ರೈತರಿಗೆ ಹಣದ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ರೈತರಿಗೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಾಲ ಸೌಲಭ್ಯ ಒದಗಿಸಬೇಕು. ಹೊಸ ಸಾಲ ನೀಡುವ ವಿಚಾರದಲ್ಲಿ ಅನಗತ್ಯ ನಿರ್ಬಂಧಗಳನ್ನು ವಿಧಿಸದೇ ರೈತಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಕೇಂದ್ರ ಹಣಕಾಸು ಸಚಿವಾಲಯದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಅಕ್ಟೋಬರ್ 28 ರಿಂದ ಡಿಸೆಂಬರ್ 31 ರವರೆಗೆ ಹಣಕಾಸು ಸೇರ್ಪಡೆ ಸ್ಯಾಚುರೇಶನ್ ಶಿಬಿರಗಳನ್ನು ಆಯೋಜಿಸಲಾಗಿದೆ. ಪ್ರತಿ ಗ್ರಾ.ಪಂ.ಗೆ ಒಂದು ಬ್ಯಾಂಕ್ ಶಾಖೆಯನ್ನು ನೋಡಲ್ ಆಗಿ ನೇಮಿಸಲಾಗಿದೆ. ಪ್ರಧಾನ ಮಂತ್ರಿ ಜನ್ ಧನ್, ಜೀವನ್ ಜ್ಯೋತಿ, ಸುರಕ್ಷಾ ವಿಮಾ, ಅಟಲ್ ಪಿಂಚಣಿ ಸೇರಿದಂತೆ ಎಲ್ಲಾ ಯೋಜನೆಗಳ ವ್ಯಾಪ್ತಿಯನ್ನು ಶತಭಾಗದಷ್ಟು ಖಚಿತಪಡಿಸುವುದು ಅಭಿಯಾನದ ಉದ್ದೇಶವಾಗಿದೆ. ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರು ಜಿಲ್ಲಾ ನೋಡಲ್ ಅಧಿಕಾರಿಯಾಗಿದ್ದು, ಬ್ಯಾಂಕುಗಳು PDO, SHG ಒಕ್ಕೂಟಗಳೊಂದಿಗೆ ಸಮನ್ವಯ ಸಾಧಿಸಿ ಶಿಬಿರಗಳನ್ನು ನಡೆಸಬೇಕು ಎಂದರು.
ಸಭೆಯಲ್ಲಿ ಸಂಜೀವ್‌ ಕುಮಾರ್‌, ಶರತ್‌ ಗೌಡ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಹನುಮಂತಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವಿಭಾಗೀಯ ವ್ಯವಸ್ಥಾಪಕರು, ಸಂಬಂಧಿತ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Tags: Good news for farmers: loan repayment period extended from 3 to 5 years.kannada newskannada news livelatest newsmalnad newsshimogashivamoggaಶಿವಮೊಗ್ಗ
Previous Post

ಶಿವಮೊಗ್ಗ, ಫುಟ್‌ಪಾತ್‌ ಕಾರ್ಯಾಚರಣೆಯಲ್ಲಿ JCB ಘರ್ಜನೆ!

Next Post

ಅಪಘಾತದಲ್ಲಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಾವು!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಅಪಘಾತದಲ್ಲಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಾವು!

ಅಪಘಾತದಲ್ಲಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಾವು!

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ,  ಮೆರವಣಿಗೆ ಈಗ ಸ್ಥಗಿತ!

ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ, ಮೆರವಣಿಗೆ ಈಗ ಸ್ಥಗಿತ!

October 21, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ನವೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ? ಈ ವಿಚಾರಗಳನ್ನು ತಿಳಿದುಕೊಳ್ಳಿ!

ನವೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ? ಈ ವಿಚಾರಗಳನ್ನು ತಿಳಿದುಕೊಳ್ಳಿ!

October 28, 2026
ಕ್ಯಾಂಟರ್‌ನಲ್ಲಿ ಏಕಾಏಕಿ ಬೆಂಕಿ, ನಂದಿಸಲು ಬಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಗಾಯ!

ಕ್ಯಾಂಟರ್‌ನಲ್ಲಿ ಏಕಾಏಕಿ ಬೆಂಕಿ, ನಂದಿಸಲು ಬಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಗಾಯ!

October 28, 2026
ಅಪಘಾತದಲ್ಲಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಾವು!

ಅಪಘಾತದಲ್ಲಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಾವು!

October 28, 2026
ರೈತರಿಗೆ ಗುಡ್ ನ್ಯೂಸ್, ಸಾಲ ಮರುಪಾವತಿ ಅವಧಿ 3 ರಿಂದ 5 ವರ್ಷ ವಿಸ್ತರಣೆ!

ರೈತರಿಗೆ ಗುಡ್ ನ್ಯೂಸ್, ಸಾಲ ಮರುಪಾವತಿ ಅವಧಿ 3 ರಿಂದ 5 ವರ್ಷ ವಿಸ್ತರಣೆ!

October 28, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ನವೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ? ಈ ವಿಚಾರಗಳನ್ನು ತಿಳಿದುಕೊಳ್ಳಿ!

ನವೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ? ಈ ವಿಚಾರಗಳನ್ನು ತಿಳಿದುಕೊಳ್ಳಿ!

October 28, 2026
ಕ್ಯಾಂಟರ್‌ನಲ್ಲಿ ಏಕಾಏಕಿ ಬೆಂಕಿ, ನಂದಿಸಲು ಬಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಗಾಯ!

ಕ್ಯಾಂಟರ್‌ನಲ್ಲಿ ಏಕಾಏಕಿ ಬೆಂಕಿ, ನಂದಿಸಲು ಬಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಗಾಯ!

October 28, 2026

Copyright © 2026 Yuva Dhwani. Designed by KIPL