ಅಟೆಂಡೆಂಟ್ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅರ್ಜಿ
ಶಿವಮೊಗ್ಗ: ಭಾರತೀಯ ರಿಸರ್ವ್ ಬ್ಯಾಂಕ್, ಬೆಂಗಳೂರು ಶಾಖೆಯಿಂದ ಅಟೆಂಡೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿಯನ್ನು https//rbi.org.in/ ಎಂಬ ಬ್ಯಾಂಕಿನ ಜಾಲತಾಣದಲ್ಲಿ Recruitment for the post of office Attendant – PY 2025 ರ ಮೂಲಕ ಫೆ. 04 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ https//rbi.org.in/ ಎಂಬ ಬ್ಯಾಂಕಿನ ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ.

ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ
ಶಿವಮೊಗ್ಗ : ಅಂಚೆ ಇಲಾಖೆ ವತಿಯಿಂದ ಶಾಖಾ ಅಂಚೆಪಾಲಕ, ಸಹಾಯಕ ಅಂಚೆಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಅಂಚೆ ವಿಭಾಗದಲ್ಲಿ 57 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ವೆಬ್ ಸೈಟ್
https://indiapost.gov.in/gdsonlineengagement ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
ಅರ್ಜಿ ನೋಂದಣಿ ಮಾಡಲು ಫೆ.14 ಹಾಗೂ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕಪಾವತಿಸಲು ಫೆ.16 ಕಡೆಯ ದಿನವಾಗಿದೆ. ಎಲ್ಲ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಕಡ್ಡಾಯ. ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಹಾಗೂ ಗಣಿತ ಮತ್ತು ಇಂಗ್ಲೀಷ್ ನಲ್ಲಿ ಕನಿಷ್ಠ ತೇರ್ಗಡೆ ಅಂಕ ಹೊಂದಿರಬೇಕು. ವಯೋಮಿತಿ 18 ರಿಂದ 40 ವರ್ಷವಿದ್ದು ಮೀಸಲು ವರ್ಗಗಳಿಗೆ ವಯೋಮಿತಿ ಸಡಲಿಕೆ ಇರುತ್ತದೆ. ಅಂಕಗಳ ಆಧಾರದಲ್ಲಿ ಆನ್ ಲೈನ್ ಮೂಲಕವೇ ನೇಮಕಾತಿ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08182-222835 ನ್ನು ಸಂರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಗೃಹರಕ್ಷಕ ದಳಕ್ಕೆ ಸೇರಲು ಅರ್ಜಿ ಆಹ್ವಾನ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸ್ಥಳೀಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ “ನಿಷ್ಕಾಮ ಸೇವೆ ದ್ಯೇಯದ” ಅಡಿಯಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಗೃಹರಕ್ಷಕರಾಗಲು ಬೇಕಾದಆರ್ಹತೆ:-ಭಾರತೀಯ ಪ್ರಜೆಯಾಗಿರಬೇಕು. 19 ವರ್ಷದ ಮೇಲ್ಪಟ್ಟು 45 ವರ್ಷಕ್ಕಿಂತಕಡಿಮೆ ವಯಸ್ಸಿನವರಾಗಿದ್ದು, 10ನೇ ತರಗತಿ ಉತ್ತೀರ್ಣರಾಗಿರ ಬೇಕು. ವೈದ್ಯಕೀಯವಾಗಿ ಸಶಕ್ತರಾಗಿರ ಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು / ಆರೋಪ ಅಥವಾ ಅಪರಾಧಿ ಎಂದು ದಾಖಲಾಗಿರದಿದ್ದಲ್ಲಿ ಅಂತಹವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಸಕ್ತರು ನಿಗದಿತ ಅರ್ಜಿಯನ್ನು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಿವಮೊಗ್ಗ. 08182 – 295630 & 255630 ಅಥವ ಜಿಲ್ಲೆಯ ಎಲ್ಲಾ ಗೃಹರಕ್ಷಕ ದಳ ಘಟಕ/ ಉಪ ಘಟಕಗಳ ಕಛೇರಿಗಳಲ್ಲಿ ಪಡೆದು, ಭರ್ತಿಮಾಡಿದ ಅರ್ಜಿಗಳನ್ನು ಫೆ. 03 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಮಾದೇಷ್ಟರು ಡಾ. ಚೇತನ ಹೆಚ್.ಪಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಗೃಹರಕ್ಷಕ ದಳ ಘಟಕ ಉಪ ಘಟಕ ಮತ್ತು ಘಟಕಾಧಿಕಾರಿಗಳು ಮೊಬೈಲ್ ನಂಬರ್‌ನ್ನು ಸಂಪರ್ಕಿಸುವುದು.
ಶಿವಮೊಗ್ಗ, ಹೆಚ್.ಸಿ.ಶ್ರೀಧರ ಮೂರ್ತಿ-9964157471, ಕುಂಸಿ- ಎಂ.ಕುಮಾರ- 8197013844, ಹಾರನಹಳ್ಳಿ -ಜಿ.ರುದ್ರೇಶ್ -9972163398, ಭದ್ರಾವತಿ -ಜಗದೀಶ-9900283490, ಹೊಳೆಹೊನ್ನೂರು- ಅಕ್ರಾಉಲ್ಲಾ-9986104590, ತೀರ್ಥಹಳ್ಳಿ – ದಿಲೀಪ್ ಬಿ.ಎನ್. -7975957665, ಸಾಗರ – ಕೆ.ಎಸ್.ಮಂಜುನಾಥ – 8073831409, ಜೋಗ – ಡಿ.ಸಿದ್ದರಾಜು – 9449699459, ಶಿಕಾರಿಪುರ- ಕೆ.ವಿ.ಮಹೇಶ-9901325146, ಶಿರಾಳಕೊಪ್ಪ -ಎಂ.ವೀರಭದ್ರಸ್ವಾಮಿ-9741629961, ಹೊಸನಗರ- ಎಂ.ಅರ್.ಟೀಕಪ್ಪ-9901002423, ರಿಪ್ಪನ್‌ಪೇಟೆ -ಟಿ ಶಶಿಧರ್ ಆಚಾರ್ಯ್-9741477689, ಸೊರಬ- ಹೆಚ್.ಎಂ.ಪ್ರಶಾAತ್, 7976306266.













