ಶಿವಮೊಗ್ಗ: ನಗರದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಕಂಡ ಆಕರ್ಷಕ ಜಾಹೀರಾತು ನಂಬಿ ಚಿನ್ನದ ಮೇಲೆ ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಹೆಸರಿನಲ್ಲಿ 16 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್‌ಬುಕ್‌ನಲ್ಲಿ ಪ್ರಕಟವಾದ LF Work’ ಕಂಪನಿಯ ಜಾಹೀರಾತಿನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಜಾಹೀರಾತಿನ ಲಿಂಕ್ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಸಿಕೊಂಡ ಸಂತ್ರಸ್ತರನ್ನು ನಂತರ ವಾಟ್ಸ್‌ಆಯಪ್ ಗುಂಪಿಗೆ ಸೇರಿಸಿ ಹಣ ಹೂಡಿಕೆ ಮಾಡಿಸಲಾಗಿದೆ.
ಯುಪಿಐ ಐಡಿ ಡಿಲೀಟ್: ಹಂತ ಹಂತವಾಗಿ ವಿವಿಧ ಯುಪಿಐ ಐಡಿಗಳಿಗೆ ಹಣ ವರ್ಗಾಯಿಸುವಂತೆ ಹೇಳಲಾಗಿದ್ದು, ಹಣ ಪಾವತಿಸಿದ ತಕ್ಷಣವೇ ಆ ಯುಪಿಐ ಐಡಿಗಳನ್ನು ಡಿಲೀಟ್ ಮಾಡಲಾಗಿದೆ. ಈ ರೀತಿ ಒಟ್ಟು 61,00,000 ಮೊತ್ತವನ್ನು ವಂಚಕರು ಪಡೆದುಕೊಂಡಿದ್ದಾರೆ.
ಲಾಭಾಂಶ ಸಿಗದೆ, ಮೂಲ ಹಣವೂ ವಾಪಸ್ ಬರದಾದಾಗ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ವ್ಯಕ್ತಿ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













