ಶಿವಮೊಗ್ಗ : ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಲಾಯಿತು. ಮೇಲಾಧಿಕಾರಿಗಳ ಆದೇಶದ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ರೈಲು ನಿಲ್ದಾಣದ ಪ್ರತಿಯೊಂದು ಭಾಗವನ್ನು ಪರಿಶೀಲಿಸಲಾಯಿತು.
ಶಿವಮೊಗ್ಗ ಜಿಲ್ಲಾ ಶ್ವಾನ ದಳ ಮತ್ತು ಎಎಸ್‌ಸಿ ಆಂಟಿ ಸ್ಕ್ವಾಡ್ ಕರಪ್ಷನ್ ತಂಡದ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದರು. ನಿಲ್ದಾಣದ ಎಲ್ಲಾ ಪ್ಲಾಟ್‌ಫಾರ್ಮ್‌ಗಳು, ಟಿಕೆಟ್ ಬುಕಿಂಗ್ ಕಚೇರಿ, ಪ್ರಯಾಣಿಕರ ವಿಶ್ರಾಂತಿ ಗೃಹ ಹಾಗೂ ಪಾರ್ಸಲ್ ವಿಭಾಗದ ಏರಿಯಾಗಳಲ್ಲಿ ಶ್ವಾನ ದಳದ ಸಹಾಯದೊಂದಿಗೆ ತಪಾಸಣೆ ನಡೆಸಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ವಹಿಸಲಾಯಿತು.













