ಶಿವಮೊಗ್ಗ; ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಇಂದು ವಿಪುಲವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ವಿಮಾನಯಾನ, ಟ್ರಾವೆಲ್ ಏಜೆನ್ಸಿ, ಕ್ರೂಸ್‌ಶಿಪ್‌ಗಳು ಮೊದಲಾದ ಕಡೆ ಹೇರಳ ಅವಕಾಶಗಳಿವೆ. ಇವುಗಳಿಗೆ ಸಂಬಂಧಿಸಿದಂತೆ ನಿಮ್ಮ ಕೌಶಲ್ಯಗಳನ್ನು ರೂಢಿಸಿಕೊಂಡರೆ ಉತ್ತಮ ಉದ್ಯೋಗಾವಕಾಶ ಪಡೆಯಲು ಅವಕಾಶವಿದೆ ಎಂದು ಬ್ಲೂಬೆಲ್ ಹಾಲಿಡೇಸ್‌ನ ಮಾಲೀಕರಾದ ಕವಿತಾ ಎನ್ ತೋಟದ್ ಹೇಳಿದರು.
ಅವರು ನಗರದ ಪಿಇಎಸ್ ಐಎಎಮ್‌ಎಸ್ ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗವು ’ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ’ ಎಂಬ ವಿಷಯದ ಕುರಿತು ಬಿಬಿಎ ಟಿ&ಟಿ ಮತ್ತು ಬಿಬಿಎ ಹೆಚ್‌ಇಎಂ ವಿದ್ಯಾರ್ಥಿಗಳಿಗಾಗಿ ವಿಶೇಷ ಅತಿಥಿ ಉಪನ್ಯಾಸ ನೀಡಿದರು.
ಇಂದು ಚಾಲ್ತಿಯಲ್ಲಿರುವ ಟೂರ್ ಪ್ಯಾಕೇಜ್‌ಗಳು, ವೀಸಾ ಹಾಗೂ ಪಾಸ್‌ಪೋರ್ಟ್ ಇತ್ಯಾದಿಗಳನ್ನು ಪಡೆಯುವ ವಿಧಾನ ಮತ್ತು ಅವುಗಳ ಅಗತ್ಯತೆ ಮೊದಲಾದ ವಿಷಯಗಳ ಕುರಿತು ಅಮೂಲ್ಯ ಮಾಹಿತಿಯನ್ನು ನೀಡಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸುದರ್ಶನ್ ಜಿ.ಎಂ, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್ ಡಿ, ಯುವ ಫೋರಂನ ಸಂಚಾಲಕಿ ರಶ್ಮಿ ಹೆಚ್ ಡಿ, ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಉತ್ಕರ್ಷ್‌ಸಿಂಗ್, ವಿಷ್ಣು ಭಾಗ್ವೆ ಹಾಗೂ ಶ್ರೀನಿವಾಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













