ತೀರ್ಥಹಳ್ಳಿ: ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರೇಬೈಲಿನ ಪದ್ಮಾವತಿಯವರ ವಾಸದ ಮನೆ ರಾತ್ರಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿಗಾಹುತಿಯಾಗಿದೆ.
ಮನೆಯಲ್ಲಿದ್ದ 15,000 ನಗದು, ಒಡವೆ, ಅಂದಾಜು 50 ಕೆ.ಜಿ.ಯ 3 ಚೀಲ ಅಡಿಕೆ, 10 ಕ್ವಿಂಟಲ್ ಭತ್ತ, ಬೆಲೆಬಾಳುವ ವಸ್ತುಗಳು, ದಾಖಲೆ ಪತ್ರಗಳು ಸೇರಿ ಮನೆಯಲ್ಲಿದ್ದ ಎಲ್ಲವೂ ಸುಟ್ಟಿವೆ.
-
ಇದನ್ನೂ ಓದಿ > ವ್ಯಕ್ತಿಯ ಸಾವು ಆತ್ಮಹತ್ಯೆಯಲ್ಲ, ಕೊಲೆ!, ಇಬ್ಬರ ವಿರುದ್ಧ ಪ್ರಕರಣ
-
ಇದನ್ನೂ ಓದಿ > ಹೊಸನಗರ, ಕಡಸೂರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ, ಹೆಚ್ಚಾಯ್ತು ಆತಂಕ!
ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಬೆಂಕಿ ಆರಿಸಲು ಪ್ರಯತ್ನಿಸಿದರು. ಆದರೆ ಯಾವುದೇ ವಸ್ತುಗಳನ್ನು ಉಳಿಸಲು ಸಾಧ್ಯವಾಗಿಲ್ಲ. ಈ ವೇಳೆ ಪದ್ಮಾವತಿ ಅವರು ಪಕ್ಕದ ಮನೆಯಲ್ಲಿದ್ದರು ಎನ್ನಲಾಗಿದೆ.
ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














