ಸಾಗರ: ನಿಧಿಯ ರೂಪದಲ್ಲಿ ಸಿಕ್ಕಿರುವ ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ, ಮೈಸೂರು ಮೂಲದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 10 ಲಕ್ಷ ರೂಪಾಯಿ ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ದೋಚಿ ವಂಚಿಸಿರುವ ಘಟನೆ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರಿನ ಕೆ.ಆರ್. ಪುರದ ನಿವಾಸಿ ಜಗದೀಶ್ ಜೆ. ಎಂಬುವರು ವಂಚನೆಗೊಳಗಾದ ವ್ಯಕ್ತಿ. ಈ ಸಂಬಂಧ ಅವರು ನೀಡಿದ ದೂರಿನನ್ವಯ ಆನಂದಪುರ ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ >ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕೃತಿಕ ಸಾಧಕರಿಗೆ ಬಹುಮಾನ
ನಮ್ಮ ಬಳಿ ಒಂದು ಕೆ.ಜಿ. ಬಂಗಾರದ ನಾಣ್ಯಗಳಿದ್ದು 10 ಲಕ್ಷಕ್ಕೆ ಅರ್ಧ ಕೆ.ಜಿ. ಬಂಗಾರದ ನಾಣ್ಯ ನೀಡುವುದಾಗಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮೈಸೂರಿನ ಕೆ.ಆರ್.ಪುರಂನ ಜಗದೀಶ್ ಎಂಬುವವರನ್ನು ನಂಬಿಸಿದ್ದಾರೆ.
ಬಂಗಾರ ಪಡೆಯುವ ಸಂಬಂಧ ಜಗದೀಶ್ ಜೋಗಿನಗದ್ದೆ ಗ್ರಾಮಕ್ಕೆ ಬಂದು ತಮಗೆ ಪರಿಚಿತವಾಗಿದ್ದ ಇಬ್ಬರಿಗೆ 10 ಲಕ್ಷ ನೀಡಿದ್ದಾರೆ. ಅದೇ ವೇಳೆಗೆ ಎರಡು ಬೈಕ್‌ನಲ್ಲಿ ಬಂದ ನಾಲ್ವರು ಅಲ್ಲಿದ್ದವರನ್ನು ಹೆದರಿಸಿದಂತೆ ಮಾಡಿ ಹಣ ಹಾಗೂ ಜಗದೀಶ್ ಅವರಿಗೆ ಸೇರಿದ ಎರಡು ಮೊಬೈಲ್ ಪೋನ್‌ಗಳೊಂದಿಗೆ ಪರಾರಿಯಾಗಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ | ಗುಡಿಸಲಿಗೆ, ಕಟ್ಟಡಗಳಿಗೆ ಬೆಂಕಿ, ತುರ್ತು ಸೇವೆಗಳ ಆಗಮನ, ಏನಾಯ್ತು?
ಆನಂತರ ಸ್ಥಳದಲ್ಲಿದ್ದ ಮತ್ತಿಬ್ಬರು ವ್ಯಕ್ತಿಗಳು ಕೂಡ ಪರಾರಿಯಾಗಿದ್ದಾರೆ.
ಇದನ್ನೂ ಓದಿ >ಶಿವಮೊಗ್ಗ, 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ














