ಶಿವಮೊಗ್ಗ: ಇಲ್ಲಿನ ಆಟೋ ಕಾಂಪ್ಲೆಕ್ಸ್ ರಸ್ತೆಯಲ್ಲಿ ನಿನ್ನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪತ್ರಕರ್ತ, ಬಿಟಿವಿ ವರದಿಗಾರ ಅನಿಲ್(44) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಶುಭ ಮಂಗಳ ಬಳಿಯ ಆಟೋ ಕಾಂಪ್ಲೆಕ್ಸ್ ಭಾನುವಾರ ರಾತ್ರಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಅನಿಲ್ ತೀವ್ರವಾಗಿ ಗಾಯಗೊಂಡಿದ್ದರು.
ತಕ್ಷಣವೇ ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಮೃತರ ಪತ್ನಿ, ಮೂವರು ಮಕ್ಕಳು, ಬಂಧು ಬಳಗ ಹಾಗೂ ಅಪಾರ ಮಿತ್ರರನ್ನು ಅಗಲಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














