ಶಿವಮೊಗ್ಗ: ನಗರದ ಅಣ್ಣಾನಗರ ಚಾನಲ್ ಏರಿಯಾ ದಲ್ಲಿ ಇಂದು ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ > ಶಿಕಾರಿಪುರದಲ್ಲಿ ಬಸ್ ಪಲ್ಟಿ, 27 ಜನರಿಗೆ ಗಾಯ, ಹೇಗಾಯ್ತು ಘಟನೆ?
ಪಿಐ ಮತ್ತು ಪಿಎಸ್‌ಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು ದಾಳಿ ನಡೆಸಿ, ಆರೋಪಿ ಮಹಮ್ಮದ್ ಅಂಬ್ರೋಸ್, (50) , ಚಿಕ್ಕಲ್, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿದ್ದಾರೆ., ಆರೋಪಿಯಿಂದ ಅಂದಾಜು ಮೌಲ್ಯ 85,000/- ರೂ ಮೌಲ್ಯದ 1ಕೆಜಿ 720 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡು, ನಂತರ ಆರೋಪಿ ವಿರುದ್ಧ ಠಾಣಾ ಗುನ್ನೆ ಸಂಖ್ಯೆ 133/2026 ಕಲಂ 20(b) (ii) B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.














