1. ಪರಿಸರ ದಸರಾ
ಬೆಳಗ್ಗೆ 8 ಗಂಟೆಗೆ ಹಳೆ ಜೈಲು ಮುಖ್ಯ ದ್ವಾರದ ಪಕ್ಕದ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದು್ ಕಾರ್ಯಕ್ರಮವನ್ನು ಈಶ್ವರವನ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ನವ್ಯಶ್ರೀ್ನಾಗೇಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಕೆ.ಟಿ. ಉದ್ಘಾಟಿಸಲಿದ್ದಾರೆ.
2. ರೈತ ದಸರಾ ಜಾಥ ಕಾರ್ಯಕ್ರಮ:
ಬೆಳಗ್ಗೆ 9 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೈನ್ಸ್ ಮೈದಾನ, ಬಿ.ಹೆಚ್.ರಸ್ತೆ, ಶಿವಮೊಗ್ಗ. ಪ್ರಗತಿಪರ ರೈತರಾದ ಆಶಾರಾಣಿ ಸಿ.ಎಸ್. ಉದ್ಘಾಟಿಸಲಿದ್ದಾರೆ. ಹಾಗೂ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಕೃಷಿ ಬಗ್ಗೆ ಉಪನ್ಯಾಸ.
3. ಯುವ ದಸರಾ ಟ್ರಿಷರ್ ಹಂಟ್ :
ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ನಗರ ಪಾಲಿಕೆಯ ಆವರಣದಲ್ಲಿ ಯುವ ದಸರಾ ಟ್ರಿಷರ್ ಹಂಟ್ ಕಾರ್ಯಕ್ರಮ ನಡೆಯಲಿದೆ.
4. ಸಸಿ ನೆಡುವ ಕಾರ್ಯಕ್ರಮ :
ಬೆಳಗ್ಗೆ 8 ರಿಂದ ಹಳೆ ಜೈಲು ಮುಖ್ಯದ್ವಾರದ ಪಕ್ಕದ ಪಾರ್ಕ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಲಾಗಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಶಾಲಾ ಮಕ್ಕಳಿಂದ ಈಶ್ವರ ವನ ಭೇಟಿ, ಶಾಲಾ ಮಕ್ಕಳಿಂದ ಸಸ್ಯ ಪ್ರಭೇದಗಳ ಗುರುತಿಸುವ ಸ್ಫರ್ಧೇ ಹಾಗೂ ಚಿತ್ರಕಲಾ ಸ್ಪರ್ಧೆ, ಪರಿಸರ ಜಾಗೃತಿ ಶೀರ್ಷಿಕೆಯಡಿಯಲ್ಲಿ ನೃತ್ಯ ರೂಪಕ ಪ್ರದರ್ಶನ. ಸಂಜೆ 5 ಗಂಟೆಗೆ ಮಕ್ಕಳ ದಸರಾದ ಸಮಾರೋಪ ಸಮಾರಂಭ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ನಡೆಯಲಿದೆ.
5.ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ :
ನಗರದ ವಿವಿಧ ಶಾಲಾ ಮಕ್ಕಳಿಂದ ಸಂಜೆ 5 ಗಂಟೆಗೆ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
6. ಆಹಾರ ಮೇಳ :
ಸಂಜೆ 6 ಗಂಟೆಗೆ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಮಲೆನಾಡ ಸಾಂಪ್ರದಾಯಕ ವಿಶಿಷ್ಟ ಅಡುಗೆಗಳ ಪ್ರದರ್ಶನ ಹಾಗೂ ಮಾರಾಟವನ್ನು ಏರ್ಪಡಿಸಲಾಗಿದೆ.
7. ಕಲಾ ದಸರಾ, ಹಾಸ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ 6 ಗಂಟೆಗೆ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಕಲಾ ದಸರಾ, ಹಾಸ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಿಮಿಕ್ರಿ ಗೋಪಿ, ಪ್ರಹ್ಲಾದ್ ಆಚಾರ್ಯ, ಉಮೇಶ್ ಗೌಡ, ಮುರುಳಿಮಾಧವ ಕಲಾ ತಂಡ ಭಾಗವಹಿಸಲಿದೆ.
8. ಯಕ್ಷ ಸಂಭ್ರಮ :
ಸಂಜೆ 5.30ರಿಂದ ಕುವೆಂಪು ರಂಗಮಂದಿರದಲ್ಲಿ ಯಕ್ಷ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ > > ಕ್ಯಾನ್ಸರ್ ರೋಗಿಗಳಿಗೆ ಹೊಸ ಭರವಸೆ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ₹25 ಕೋಟಿ ಯಂತ್ರ!, ಏನಿದರ ವಿಶೇಷತೆ?
ಇದನ್ನೂ ಓದಿ > > ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚೆಕ್‌ಪೋಸ್ಟ್, ವಾಹನಗಳ ತಪಾಸಣೆ, ಕಾರಣವೇನು?
















