ತೀರ್ಥಹಳ್ಳಿ: ದುಷ್ಕರ್ಮಿಗಳು ದಬ್ಬಣಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಒಡೆದು ಕಳವಿಗೆ ಯತ್ನಿಸಿದ್ದಾರೆ.
ಇದು ಏಕೋಪಾಧ್ಯಾಯ ಶಾಲೆಯಾಗಿದ್ದು, ಶಿಕ್ಷಕ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಕೆಲ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಾಟ್ಸಪ್ ಗ್ರೂಪ್ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳನ್ನು ಸಮೀಪದ ಮತ್ತೊಂದು ಶಾಲೆಗೆ ಕರೆದೊಯ್ದು ತರಗತಿ ನಡೆಸಲಾಗುತ್ತಿದೆ. ಇದನ್ನು ತಿಳಿದ ದುಷ್ಕರ್ಮಿಗಳು ತಡರಾತ್ರಿ ಶಾಲೆಯ ಕಂಪ್ಯೂಟರ್, ಡಿಜಿಟಲ್ ಉಪಕರಣಗಳನ್ನು ಹೊತ್ತೊಯ್ಯುವ ಯತ್ನ ನಡೆಸಿದ್ದು, ಶಾಲಾ ದಾಖಲೆಗಳನ್ನು ಪರಿಶೀಲಿಸಿರುವ ಆರೋಪಗಳೂ ಕೇಳಿ ಬಂದಿವೆ.
ಇದನ್ನೂ ಓದಿ > > ಶಿವಮೊಗ್ಗ, ವಿ.ಎಸ್. ಉಗ್ರಪ್ಪ ಕಾರಿಗೆ ಮುತ್ತಿಗೆ, ಭೋವಿ ಸಮುದಾಯದಿಂದ ಆಕ್ರೋಶ!, ಉಗ್ರಪ್ಪ ಹೇಳಿದ್ದೇನು?
ಮಾಳೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.














