ಶಿವಮೊಗ್ಗ: ಅಡಿಕೆ ಲೋಡ್ ಮಾಡಿಕೊಂಡು ತೆರಳುತ್ತಿದ್ದ ಟ್ರಾಕ್ಟರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಟ್ರಾಲಿಯ ಮೇಲಿದ್ದ ಕೂಲಿ ಕಾರ್ಮಿಕನೊಬ್ಬ ಆಯತಪ್ಪಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಕೊಮ್ಮನಾಳು ಗ್ರಾಮದ ಸಮೀಪ ನಡೆದಿದೆ.
ವಾಟ್ಸಪ್ ಗ್ರೂಪ್ : ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಾಟ್ಸಪ್ ಗ್ರೂಪ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಭದ್ರಾವತಿ ತಾಲ್ಲೂಕಿನ ಸಿದ್ಲಿಪುರ ಗ್ರಾಮದ ರಘು ಗಾಯಗೊಂಡ ಕಾರ್ಮಿಕ. ಇವರು ಶಿಕಾರಿಪುರ ತಾಲ್ಲೂಕಿನ ಬಳೂರು ಗ್ರಾಮದಲ್ಲಿ ಹಸಿ ಅಡಿಕೆ ಖೇಣಿ ಕೆಲಸ ಮುಗಿಸಿ, ಅಡಿಕೆಯನ್ನು ಟ್ರಾಕ್ಟರ್‌ನಲ್ಲಿ ಲೋಡ್ ಮಾಡಿಕೊಂಡು ಸನ್ಯಾಸಿಕೊಡಮಗ್ಗಿ ಗ್ರಾಮದ ಕಡೆಗೆ ತೆರಳುತ್ತಿದ್ದರು.
ಈ ವೇಳೆ ರಘು ಹಾಗೂ ಹರೀಶ್ ಎಂಬ ಮತ್ತೊಬ್ಬ ಕಾರ್ಮಿಕ ಟ್ರಾಕ್ಟರ್ ಟ್ರಾಲಿಯಲ್ಲಿದ್ದ ಅಡಿಕೆ ಲೋಡ್ ಮೇಲೆ ಕುಳಿತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೊಮ್ಮನಾಳು ಗ್ರಾಮ ದಾಟಿ ಸೋಮಿನಕೊಪ್ಪ ರಸ್ತೆಯಲ್ಲಿ ಟ್ರಾಕ್ಟರ್ ಚಲಿಸುತ್ತಿದ್ದಾಗ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಪರಿಣಾಮ, ಟ್ರಾಲಿಯ ಮೇಲಿದ್ದ ರಘು ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ.
ಇದನ್ನೂ ಓದಿ > >ರಾಗಿಗಿಂತ ಕಲ್ಲು, ಮಣ್ಣೇ ಹೆಚ್ಚು! ಪಡಿತರ ಫಲಾನುಭವಿಗಳ ಆಕ್ರೋಶ!
ಘಟನೆಯಲ್ಲಿ ರಘು ಅವರ ಬಲಗಾಲಿನ ಮೂಳೆ ಮುರಿದಿದ್ದು, ತಲೆ ಹಾಗೂ ಕೈಗಳಿಗೂ ಗಾಯಗಳಾಗಿವೆ. ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ > >ಶಿರಾಳಕೊಪ್ಪ–ಆನವಟ್ಟಿ ರಸ್ತೆಯಲ್ಲಿ ಭೀಕರ ಅಪಘಾತ, 22 ವರ್ಷದ ಯುವಕ ಸಾವು!
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













