ಶಿವಮೊಗ್ಗ: ಇಲ್ಲಿನ ದುರ್ಗಿಗುಡಿಯ ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿಯಲ್ಲಿ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗ್ ಹಿಂತಿರುಗಿಸಿ ಮಾಲೀಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ತರೀಕೆರೆಯ ನಿವಾಸಿ ಗಾಯತ್ರಿ ಎಂಬುವರು ಇಲ್ಲಿನ ಇತಿಹಾಸ್ ಕಲೆಕ್ಷನ್ನಲ್ಲಿ ಬಟ್ಟೆ ಖರೀದಿಸಿದ್ದರು.
ಈ ವೇಳೆ ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗನ್ನು ಮರೆತು ಅಲ್ಲಿಯೇ ಬಿಟ್ಟು ಹೋಗಿದ್ದರು.
ಇದನ್ನೂ ಓದಿ > ಆಯನೂರು ಬಳಿ ಕಾರ್ಗಳ ಡಿಕ್ಕಿ, ಒಮ್ನಿ ಚಾಲಕನ ಕಾಲು ತುಂಡು!
ಸಂಜೆ ಅಂಗಡಿ ಸ್ವಚ್ಛಗೊಳಿಸುವಾಗ ಬ್ಯಾಗ್ ಗಮನಿಸಿದ ಕೆಲಸಗಾರರಾದ ಸ್ವಾತಿ ಹಾಗೂ ಸಂಗೀತ ಅದನ್ನು ಮಾಲೀಕರಿಗೆ ಒಪ್ಪಿಸಿದ್ದರು.ಇತ್ತ ಗಾಯತ್ರಿ ಅವರು ಗಾಂಧಿಬಜಾರ್ ಸೇರಿದಂತೆ ಅಂದು ತಾವು ಓಡಾಡಿದ್ದ ಸ್ಥಳಗಳಲ್ಲಿ ಹುಡುಕಿ ಕೊನೆಗೆ ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿಗೆ ಬಂದು ವಿಚಾರಿಸಿದ್ದಾರೆ.
ವ್ಯಾನಿಟಿ ಬ್ಯಾಗ್ನಲ್ಲಿ ಏನಿದೆ. ಗಾಯತ್ರಿ ಅವರೇ ಅದರ ಮಾಲೀಕರು ಎಂಬುದನ್ನು ಖಚಿತಪಡಿಸಿಕೊಳ್ಳಲು ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಪರಿಶೀಲಿಸಿ, ಖಚಿತಪಡಿಸಿಕೊಂಡು ಬ್ಯಾಗನ್ನು ಕಳೆದುಕೊಂಡವರಿಗೆ ಹಸ್ತಾಂತರಿಸಲಾಯಿತು’ ಎಂದು ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿ ಮಾಲೀಕ ಮಾರ್ತಾಂಡ್ ತಿಳಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ಮಾಲಿಕ ಮಾರ್ತಾಂಡ ಹಾಗೂ ಅಂಗಡಿ ಕೆಲಸಗಾರರಾದ ಸ್ವಾತಿ, ಸಂಗೀತ ಅವರನ್ನು ಜಯನಗರ ಠಾಣೆ ಪೊಲೀಸರು ಸನ್ಮಾನಿಸಿ ಅಭಿನಂದಿಸಿದರು.















