ತೀರ್ಥಹಳ್ಳಿ: ಕುಡುಮಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿ 169ರ ಹುಗಳವಳ್ಳಿಯ ರಸ್ತೆ ಬದಿಯಲ್ಲಿದ್ದ ಬಸರಿ ಮರವೊಂದು ಮಂಗಳವಾರ ಬೆಂಕಿಗೆ ಆಹುತಿಯಾಗಿದೆ.
ದಾರಿಹೋಕರು ರಸ್ತೆಯಲ್ಲಿ ಓಡಾಡುವಾಗ ಬೀಡಿ, ಸಿಗರೇಟು ಸೇದಿ ಎಸೆದಿರಬಹುದು ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ > ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗ್ ವಾಪಾಸ್, ಜಯನಗರ ಠಾಣೆಯಿಂದ ಸನ್ಮಾನ
ಬೇಸಿಗೆಯ ಬಿಸಿಲಿಗೆ ಒಣಗಿರುವ ತರಗೆಲೆಗಳಿಗೆ ಬೆಂಕಿ ತಗುಲಿ, ಅದು ಮರಕ್ಕೆ ವಿಸ್ತರಿಸಿದೆ. ಮರಕ್ಕೆ ಬೆಂಕಿ ಬಿದ್ದ ಪರಿಣಾಮ ಕೆಲ ಸಮಯ ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.















