• About Us
  • Advertise
  • Privacy & Policy
  • Contact Us
Tuesday, October 27, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಹೊಳೆಹೊನ್ನೂರಿನಲ್ಲಿ 254 ನೇ ತಿಂಗಳ ಸಾಹಿತ್ಯ ಹುಣ್ಣಿಮೆ, ಯಾರೇಲ್ಲ ಭಾಗವಹಿಸಿದ್ದರು?

ಮಣ್ಣಿನೊಂದಿಗೆ ಬೆಸೆದ ರೈತ ಬದುಕು ಕನ್ನಡವನ್ನು ಶ್ರೀಮಂತಗೊಳಿಸಿದೆ | ಖ್ಯಾತ ವಿದ್ವಾಂಸರಾದ ಜಿ.ಎಸ್.ನಟೇಶ್

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
September 28, 2026
in ಶಿವಮೊಗ್ಗ
ಹೊಳೆಹೊನ್ನೂರಿನಲ್ಲಿ 254 ನೇ ತಿಂಗಳ ಸಾಹಿತ್ಯ ಹುಣ್ಣಿಮೆ, ಯಾರೇಲ್ಲ ಭಾಗವಹಿಸಿದ್ದರು?
Share on FacebookShare on TwitterShare on WhatsApp
ಶಿವಮೊಗ್ಗ: ಕನ್ನಡವನ್ನು ಬೆಳೆಸಿದ್ದು ಕೇವಲ ಪಂಡಿತರು, ವಿದ್ಯಾವಂತರಲ್ಲ; ಮಣ್ಣಿನೊಂದಿಗೆ ಬದುಕಿದ ರೈತರೂ ತಮ್ಮ ಬೆವರು, ಬದುಕು ಮತ್ತು ಜಾನಪದ ಸಂಸ್ಕೃತಿಯ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಖ್ಯಾತ ವಿದ್ವಾಂಸರಾದ ಜಿ.ಎಸ್.ನಟೇಶ್ ಹೇಳಿದರು.
ಹೊಳೆಹೊನ್ನೂರು ಶ್ರೀ ವೀರಭದ್ರಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಹೊಳೆಹೊನ್ನೂರು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಸಮಿತಿ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ 254ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ > > ಶಿವಮೊಗ್ಗ, ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನೆ
ಜಾನಪದದ ಮೂಲಕವೂ ಭಾಷೆಯನ್ನು ಶಿಷ್ಟವಾಗಿ ಬೆಳೆಸಿದ್ದಾರೆ. ಸಂಪತ್ತು ಎಲ್ಲರೊಂದಿಗೆ ಹಂಚಿಕೆಯಾಗಬೇಕು, ಜ್ಞಾನ ಎಲ್ಲರಿಗೂ ದೊರೆಯಬೇಕು ಹಾಗೂ ಜೀವನದಲ್ಲಿ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ರೈತರ ಹೊಲಗಳಿಗೆ ಯಂತ್ರಗಳು ಬಂದ ನಂತರ ಸಾಂಪ್ರದಾಯಿಕ ಕೃಷಿ ಪದ್ಧತಿ ನಶಿಸುತ್ತಿದೆ. ಟ್ರ್ಯಾಕ್ಟರ್‌ ಸಗಣಿ ಹಾಕುವುದಿಲ್ಲ. ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಮಾತ್ರವಲ್ಲ, ಮನುಷ್ಯರ ಆರೋಗ್ಯವೂ ಹದಗೆಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೀಪಕ್ಕೆ ಭಾಷೆಯಿಲ್ಲ, ಆದರೆ ಭಾವವಿದೆ. ಕನ್ನಡಕ್ಕಾಗಿ ಹಿಗ್ಗದೆ, ಕುಗ್ಗದೆ, ನಿಂದನೆ-ಸಂತೋಷ ಎಲ್ಲವನ್ನೂ ಸಹಿಸಿಕೊಂಡು ನಿರಂತರವಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ > > ಅಡ್ಡ ಬಂದ ಹಾವು, ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾದ ಕಾರು!
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಆಶಯ ನುಡಿಗಳನ್ನಾಡಿ, ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ಮಾತನಾಡಿಸುವ ಸೌಜನ್ಯವನ್ನು ಮರೆಯುತ್ತಿರುವ ಕಾಲದಲ್ಲಿ ಪರಸ್ಪರ ಗೌರವದಿಂದ ನಡೆದುಕೊಳ್ಳುವ ಸಂಸ್ಕಾರವನ್ನು ಬಿತ್ತುವ ಅಗತ್ಯವಿದೆ. ಮನಸ್ಸುಗಳನ್ನು ಕಟ್ಟುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯ ಎಂದು ಹೇಳಿದರು.
ನಮ್ಮ ನೆಲದಲ್ಲಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಸ್ವಾತಂತ್ರ್ಯ ಮತ್ತು ಸಂವಿಧಾನವು ಆಯಾ ಪ್ರಾಂತ್ಯಗಳ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನೀಡಿದ್ದರೂ, ಸರ್ಕಾರಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿವೆ. ಜನರು ಇಂಗ್ಲಿಷ್‌ ಭ್ರಮೆಯಲ್ಲಿ ಸಿಲುಕಿದ್ದಾರೆ. ನಿರ್ಲಕ್ಷ್ಯ ಮತ್ತು ಭ್ರಮೆಯ ನಡುವೆ ಮಕ್ಕಳು ಕಂಗಾಲಾಗಿದ್ದಾರೆ. ಇದು ಶಿಕ್ಷಕ ಸಮೂಹಕ್ಕೂ ನುಂಗಲಾರದ ತುತ್ತಾಗಿದೆ ಎಂದು ಅವರು ವಾಸ್ತವವನ್ನು ತೆರೆದಿಟ್ಟರು.
ಕಲಾವಿದರಾದ ಡಾ. ಕವಿತಾ ಸುದೀಂದ್ರ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕಸಾಪ ಹೋಬಳಿ ಅಧ್ಯಕ್ಷ ಸಂ.ಬ. ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಹೆಚ್.ಕೆ. ಶ್ರೀನಿವಾಸ, ರಮೇಶ್ ಈ., ನಾಗರಾಜ್ ಜಿ.ವಿ., ಹನುಮಂತಪ್ಪ ಸಿ., ರವಿ ಎನ್., ಬಸವರಾಜ್ ಯು., ಚನ್ನೇಶಪ್ಪ ಹೆಚ್.ಬಿ., ರುದ್ರೇಶನ್ ಹಾಗೂ ಕಸಾಪ ಭದ್ರಾವತಿ ತಾಲ್ಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಾಯಕರಾದ ಎಸ್. ನಾರಾಯಣ, ನಳಿನಾಕ್ಷಿ ಎಸ್., ಮಹಾದೇವಿ ಹಾಗೂ ಶೃತಿ ಪ್ರಭಾಕರ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕವಿಗಳಾದ ಡಿ. ಗಣೇಶ್, ಎಂ. ನವೀನ್ ಕುಮಾರ್, ಶ್ರೀನಿವಾಸ ನಗಲಾಪುರ ಹಾಗೂ ಬಾಲರಾಜ್ ಚುರ್ಚುಗುಂಡಿ ಕವನ ಮತ್ತು ಹನಿಗವನ ವಾಚಿಸಿದರು. ರೂಪಾಕಿರಣ್ ಗಾದೆಗಳನ್ನು ಪ್ರಸ್ತುತಪಡಿಸಿದರು.
ಇದನ್ನೂ ಓದಿ > >ನಾಳೆ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕರೆಂಟ್ ಕಟ್!, ಎಲ್ಲೆಲ್ಲಿ?
ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿ, ಕಸಾಪ ಹೋಬಳಿ ಕಾರ್ಯದರ್ಶಿ ಚಂದ್ರು ಸ್ವಾಗತಿಸಿ, ಕಜಾಪ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ, ಕಸಾಸಾಂ ವೇದಿಕೆ ಪ್ರಧಾನ ಕಾರ್ಯದರ್ಶಿ ಭೈರಾಪುರ ಶಿವಪ್ಪಮೇಷ್ಟ್ರು ಹಾಗೂ ಸೋಮಿನಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Tags: kannada newskannada news livemalnad newsRenowned scholar G.S. NateshshimogashivamoggaWho participated in the 254th 'Sahitya Hunnime' (Literary Full Moon) event at Holehonnur?ಶಿವಮೊಗ್ಗ
Previous Post

ಅಡ್ಡ ಬಂದ ಹಾವು, ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾದ ಕಾರು!

Next Post

ಶಿವಮೊಗ್ಗ, ವಿಟಿಯು ಫಲಿತಾಂಶದಲ್ಲಿ ಜೆ.ಎನ್.ಎನ್.ಸಿ.ಇ ವಿದ್ಯಾರ್ಥಿಗಳ ಮಿಂಚಿನ ಸಾಧನೆ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಿವಮೊಗ್ಗ, ವಿಟಿಯು ಫಲಿತಾಂಶದಲ್ಲಿ ಜೆ.ಎನ್.ಎನ್.ಸಿ.ಇ ವಿದ್ಯಾರ್ಥಿಗಳ ಮಿಂಚಿನ ಸಾಧನೆ

ಶಿವಮೊಗ್ಗ, ವಿಟಿಯು ಫಲಿತಾಂಶದಲ್ಲಿ ಜೆ.ಎನ್.ಎನ್.ಸಿ.ಇ ವಿದ್ಯಾರ್ಥಿಗಳ ಮಿಂಚಿನ ಸಾಧನೆ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ,  ಮೆರವಣಿಗೆ ಈಗ ಸ್ಥಗಿತ!

ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ, ಮೆರವಣಿಗೆ ಈಗ ಸ್ಥಗಿತ!

October 21, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026
ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

October 26, 2026
ಹೊಳೆಹೊನ್ನೂರು | ವಾಹನ ಡಿಕ್ಕಿ, ಅರಸೀಕೆರೆ ಮೂಲದ ವ್ಯಕ್ತಿ ಸಾವು!

ವಿಷ ಸೇವಿಸಿದ್ದ ಗೃಹಿಣಿ ಆಸ್ಪತ್ರೆಯಲ್ಲಿ ಸಾವು, ಕಾರಣವೇನು?

October 26, 2026
ಅ.30ರಿಂದ ಕೃಷಿ ಮೇಳ, 600ಕ್ಕೂ ಹೆಚ್ಚು ಮಳಿಗೆಗಳು, AI ತಂತ್ರಜ್ಞಾನ, ಹೊಸ ತಳಿಗಳ ಅನಾವರಣ!

ಅ.30ರಿಂದ ಕೃಷಿ ಮೇಳ, 600ಕ್ಕೂ ಹೆಚ್ಚು ಮಳಿಗೆಗಳು, AI ತಂತ್ರಜ್ಞಾನ, ಹೊಸ ತಳಿಗಳ ಅನಾವರಣ!

October 26, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026
ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

October 26, 2026

Copyright © 2026 Yuva Dhwani. Designed by KIPL