• About Us
  • Advertise
  • Privacy & Policy
  • Contact Us
Tuesday, October 27, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಕೇರಳ, ಮಹಾರಾಷ್ಟ್ರ, ಗೋವಾ ಮುಂದಿದ್ದರೆ ಕರ್ನಾಟಕ ಯಾಕೆ ಹಿಂದೆ?, ಡಾ. ಧನಂಜಯ ಸರ್ಜಿ

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
September 22, 2026
in ಶಿವಮೊಗ್ಗ
ಕೇರಳ, ಮಹಾರಾಷ್ಟ್ರ, ಗೋವಾ ಮುಂದಿದ್ದರೆ ಕರ್ನಾಟಕ ಯಾಕೆ ಹಿಂದೆ?, ಡಾ. ಧನಂಜಯ ಸರ್ಜಿ
Share on FacebookShare on TwitterShare on WhatsApp

ಬೆಂಗಳೂರು: ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಜನರ ಬದುಕು ಮತ್ತು ಭಾವನೆಗಳೊಂದಿಗೆ ರಾಜಕೀಯ ಮಾಡದೆ, ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆ ಹಾಗೂ ಮಲೆನಾಡಿನ ರೈತರ ಹಿತ ಎರಡನ್ನೂ ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಒತ್ತಾಯಿಸಿದರು.

ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಕಸ್ತೂರಿರಂಗನ್ ವರದಿಯಡಿ 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ ಇದರಲ್ಲಿ ಸುಮಾರು 16,114 ಚದರ ಕಿಲೋಮೀಟರ್ ಪ್ರದೇಶ ಈಗಾಗಲೇ ವಿವಿಧ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ವರ್ಗಗಳಡಿ ರಕ್ಷಿತವಾಗಿದೆ. ಹೀಗಾಗಿ ಉಳಿಯುವ ಸುಮಾರು 4,500 ಚದರ ಕಿಲೋಮೀಟರ್ ಪ್ರದೇಶದಲ್ಲಿ ಯಾವುದು ನೈಸರ್ಗಿಕ ಅರಣ್ಯ, ಯಾವುದು ಕೃಷಿಭೂಮಿ, ತೋಟ ಮತ್ತು ಜನವಸತಿ ಎಂಬುದನ್ನು ಸರ್ವೆ ನಂಬರ್ ಮಟ್ಟದಲ್ಲಿ ಭೌತಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ > > ಹಾರನಹಳ್ಳಿ  ರೈಲ್ವೆ ಪ್ಲಾಟ್‌ಫಾರ್ಮ್ ಅಭಿವೃದ್ಧಿಗೆ ಗುದ್ದಲಿ ಪೂಜೆ, ಸಂಸದ ರಾಘವೇಂದ್ರ ಹೇಳಿದ್ದೇನು?

ಪರಿಸರದ ಹೆಸರಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತೊಂದು ರೀತಿಯ ಪರಿಸರ ಹಾನಿಗೆ ಕಾರಣವಾಗಬಾರದು ಎಂದ ಅವರು, ಶಿವಮೊಗ್ಗದಲ್ಲಿ ಸ್ಥಳೀಯ ಕಲ್ಲು ಲಭ್ಯತೆಯ ಸಮಸ್ಯೆಯಿಂದ ದಿನಕ್ಕೆ ಸುಮಾರು 100 ಲಾರಿಗಳಲ್ಲಿ ದೂರದ ಜಿಲ್ಲೆಗಳಿಂದ ಕಲ್ಲು ಸಾಗಿಸಲಾಗುತ್ತಿದೆ. 200–250 ಕಿ.ಮೀ. ಸಂಚಾರದಿಂದ ವರ್ಷಕ್ಕೆ ಲಕ್ಷಾಂತರ ಲೀಟರ್ ಡೀಸೆಲ್ ಬಳಕೆಯಾಗುತ್ತದೆ. ಪರಿಸರ ಸಂರಕ್ಷಣೆಯ ನಿರ್ಧಾರವೇ ಇಂಧನ ಬಳಕೆ ಮತ್ತು ಮಾಲಿನ್ಯ ಹೆಚ್ಚಿಸುವಂತಾಗಬಾರದು ಎಂದು ಉದಾಹರಿಸಿದರು.

ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರನ್ನು ಎತ್ತುವ ವ್ಯವಸ್ಥೆಯ ಅನುಷ್ಠಾನ ವಿಳಂಬವಾಗಿರುವುದನ್ನೂ ಡಾ. ಸರ್ಜಿ ಪ್ರಸ್ತಾಪಿಸಿದರು. ಯೋಜನೆಯ ಮೊದಲ ಹಂತದಲ್ಲಿ ತುಂಗಾದಿಂದ 17.40 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಎತ್ತುವ ವ್ಯವಸ್ಥೆ ಇದೆ. ಇದನ್ನು ಸಕಾಲದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರೆ ಭದ್ರಾ ಜಲಾಶಯಕ್ಕೆ ಹೆಚ್ಚುವರಿ ನೀರು ಲಭ್ಯವಾಗಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವು ಭಾಗಗಳ ನೀರಿನ ಸಮಸ್ಯೆಗೆ ನೆರವಾಗಬಹುದಿತ್ತು ಎಂದು ಹೇಳಿದರು. ತುಂಗಾದಲ್ಲಿ ಲಭ್ಯವಾಗುವ ಹೆಚ್ಚುವರಿ ನೀರು ಕೆಳಹರಿವಿಗೆ ಹರಿದುಹೋಗುತ್ತಿರುವ ಸಂದರ್ಭದಲ್ಲಿ, ಅದನ್ನು ವೈಜ್ಞಾನಿಕವಾಗಿ ಭದ್ರಾಕ್ಕೆ ಎತ್ತುವ ವ್ಯವಸ್ಥೆ ಶೀಘ್ರ ಪೂರ್ಣಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಈ ಯೋಜನೆಗೆ ಸಂಬಂಧಿಸಿದ 220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಅರಣ್ಯ ಭೂಮಿಯ ಅನುಮತಿ ಪ್ರಕ್ರಿಯೆ 2019ರಿಂದ ಮುಂದುವರಿದು, 2026ರ ಜುಲೈ 10ರಂದು ಮೊದಲ ಹಂತದ ಅನುಮೋದನೆ ದೊರೆತಿರುವುದು ಕೂಡ ವಿಳಂಬದ ಗಂಭೀರತೆಯನ್ನು ತೋರಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಇದನ್ನೂ ಓದಿ > > ಶಿವಮೊಗ್ಗಕ್ಕೆ ಸ್ಪಾರ್ಕ್ ಚಿತ್ರತಂಡ, ವಿಶೇಷ ಪ್ರದರ್ಶನ, ವಿಭಿನ್ನ ಕಥೆಯ ಹೊಸ ಪ್ರಯತ್ನ!

ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಆರು ರಾಜ್ಯಗಳ ಪ್ರಸ್ತುತ ಸ್ಥಿತಿಯನ್ನೂ ಕರ್ನಾಟಕ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಡಾ. ಸರ್ಜಿ ಹೇಳಿದರು. ಕೇರಳವು ತನ್ನ ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶವನ್ನು 13,108 ಚ.ಕಿ.ಮೀ.ಯಿಂದ 9,993.7 ಚ.ಕಿ.ಮೀ.ಗೆ ಪರಿಷ್ಕರಿಸಿ, ನಂತರ ಇನ್ನಷ್ಟು ಪರಿಷ್ಕರಣೆಯ ಪ್ರಸ್ತಾವನೆ ನೀಡಿದೆ. 2026ರ ಜುಲೈ ವೇಳೆಗೆ ಗೋವಾ ಮತ್ತು ಗುಜರಾತ್ ಪ್ರದೇಶ ನಿಗದಿಯ ವಿಷಯದಲ್ಲಿ ಬಹುತೇಕ ಒಪ್ಪಂದ ಹಂತ ತಲುಪಿದ್ದು, ಮಹಾರಾಷ್ಟ್ರದ ಪರಿಷ್ಕೃತ ಪ್ರಸ್ತಾವನೆ ಕೇಂದ್ರದ ತಜ್ಞ ಸಮಿತಿಯ ಪರಿಶೀಲನೆಯಲ್ಲಿದೆ. ಕರ್ನಾಟಕದ ವಿಷಯದಲ್ಲಿ ಮಾತ್ರ ಕೇಂದ್ರ–ರಾಜ್ಯಗಳ ಅಂತಿಮ ಒಮ್ಮತ ಇನ್ನೂ ಮೂಡಿಲ್ಲ. ಈ ಹಿನ್ನಲೆಯಲ್ಲಿ “ಇತರ ರಾಜ್ಯಗಳು ತಮ್ಮ ಆಕ್ಷೇಪಣೆ, ಪರ್ಯಾಯ ನಕ್ಷೆ ಮತ್ತು ಭೌತಿಕ ಪರಿಶೀಲನೆಯೊಂದಿಗೆ ಪ್ರಕ್ರಿಯೆಯನ್ನು ಮುಂದುವರಿಸಿದರೆ, ಕರ್ನಾಟಕದಲ್ಲಿ ಅಂತಿಮ ವೈಜ್ಞಾನಿಕ ಪ್ರಸ್ತಾವನೆ ಇನ್ನೂ ಏಕೆ ನಿರ್ಧಾರವಾಗಿಲ್ಲ?” ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು

ಕೇಂದ್ರ ಸರ್ಕಾರವು ಮಾಜಿ ಅರಣ್ಯ ಮಹಾನಿರ್ದೇಶಕ ಸಂಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಪಶ್ಚಿಮಘಟ್ಟದ ಆರು ರಾಜ್ಯಗಳ ಆಕ್ಷೇಪಣೆ ಮತ್ತು ಪರ್ಯಾಯ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕವೂ ಕೇರಳದ ಮಾದರಿಯಲ್ಲಿ ನೆಲಮಟ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಿ ಸ್ಪಷ್ಟವಾದ ಅಂತಿಮ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಡಾ. ಸರ್ಜಿ ಒತ್ತಾಯಿಸಿದರು.

ಇದನ್ನೂ ಓದಿ > >ಸೌತ್‌ ಇಂಡಿಯಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಮೀನಾಕ್ಷಿಗೆ ಬೆಳ್ಳಿ ಪದಕ

“ನಾವು ಪರಿಸರ ಸಂರಕ್ಷಣೆಯ ವಿರೋಧಿಗಳಲ್ಲ. ಪಶ್ಚಿಮಘಟ್ಟ ಉಳಿಯಬೇಕು, ಕಾಡು ಬೆಳೆಯಬೇಕು, ನದಿಗಳು ಉಳಿಯಬೇಕು, ವನ್ಯಜೀವಿಗಳು ರಕ್ಷಿಸಲ್ಪಡಬೇಕು. ಆದರೆ ಕಾಡನ್ನು ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ ರೈತರ ಬದುಕನ್ನೂ ಉಳಿಸಬೇಕು. ಜನರ ಬದುಕು ಮತ್ತು ಭಾವನೆಗಳ ಜೊತೆ ರಾಜಕೀಯ ಮಾಡದೆ, ಕಾಡನ್ನೂ ಉಳಿಸೋಣ–ರೈತರನ್ನೂ ಉಳಿಸೋಣ” ಎಂದು ಡಾ. ಧನಂಜಯ ಸರ್ಜಿ ಹೇಳಿದರು.

Tags: and Goa are ahead? – MLA Dr. Dhananjaya Sarjikannada newskannada news livelatest newsMaharashtramalnad newsMLA Dr. Dhananjaya SarjishimogashivamoggaWhy is Karnataka lagging behind when Keralaಶಿವಮೊಗ್ಗ
Previous Post

ಸೌತ್‌ ಇಂಡಿಯಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಮೀನಾಕ್ಷಿಗೆ ಬೆಳ್ಳಿ ಪದಕ

Next Post

ಎರಡು ಬೈಕ್‌ಗಳ ಭಾರೀ ಡಿಕ್ಕಿ, ಗಂಭೀರ ಗಾಯಗೊಂಡಿದ್ದ ಉಳ್ಳೂರಿನ ವ್ಯಕ್ತಿ ಸಾವು

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಎರಡು ಬೈಕ್‌ಗಳ ಭಾರೀ ಡಿಕ್ಕಿ, ಗಂಭೀರ ಗಾಯಗೊಂಡಿದ್ದ ಉಳ್ಳೂರಿನ ವ್ಯಕ್ತಿ ಸಾವು

ಎರಡು ಬೈಕ್‌ಗಳ ಭಾರೀ ಡಿಕ್ಕಿ, ಗಂಭೀರ ಗಾಯಗೊಂಡಿದ್ದ ಉಳ್ಳೂರಿನ ವ್ಯಕ್ತಿ ಸಾವು

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ,  ಮೆರವಣಿಗೆ ಈಗ ಸ್ಥಗಿತ!

ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ, ಮೆರವಣಿಗೆ ಈಗ ಸ್ಥಗಿತ!

October 21, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026
ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

October 26, 2026
ಹೊಳೆಹೊನ್ನೂರು | ವಾಹನ ಡಿಕ್ಕಿ, ಅರಸೀಕೆರೆ ಮೂಲದ ವ್ಯಕ್ತಿ ಸಾವು!

ವಿಷ ಸೇವಿಸಿದ್ದ ಗೃಹಿಣಿ ಆಸ್ಪತ್ರೆಯಲ್ಲಿ ಸಾವು, ಕಾರಣವೇನು?

October 26, 2026
ಅ.30ರಿಂದ ಕೃಷಿ ಮೇಳ, 600ಕ್ಕೂ ಹೆಚ್ಚು ಮಳಿಗೆಗಳು, AI ತಂತ್ರಜ್ಞಾನ, ಹೊಸ ತಳಿಗಳ ಅನಾವರಣ!

ಅ.30ರಿಂದ ಕೃಷಿ ಮೇಳ, 600ಕ್ಕೂ ಹೆಚ್ಚು ಮಳಿಗೆಗಳು, AI ತಂತ್ರಜ್ಞಾನ, ಹೊಸ ತಳಿಗಳ ಅನಾವರಣ!

October 26, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026
ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

October 26, 2026

Copyright © 2026 Yuva Dhwani. Designed by KIPL