• About Us
  • Advertise
  • Privacy & Policy
  • Contact Us
Wednesday, May 6, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಶಿವಮೊಗ್ಗ ಸಾಹಿತ್ಯ ಸಮ್ಮೇಳನ ಗೋಷ್ಟಿ, ಮಲೆನಾಡಿನ ಒಡಲ ಬೆಂಕಿಯಿಂದ ಜೀವ ಜಲ ಖಾಲಿ!, ಪ್ರಕೃತಿ ಉಳಿಸಲು ನಾವೇನು ಮಾಡಬೇಕು?

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
March 14, 2026
in ಶಿವಮೊಗ್ಗ
ಶಿವಮೊಗ್ಗ ಸಾಹಿತ್ಯ ಸಮ್ಮೇಳನ ಗೋಷ್ಟಿ, ಮಲೆನಾಡಿನ ಒಡಲ ಬೆಂಕಿಯಿಂದ ಜೀವ ಜಲ ಖಾಲಿ!, ಪ್ರಕೃತಿ ಉಳಿಸಲು ನಾವೇನು ಮಾಡಬೇಕು?
Share on FacebookShare on TwitterShare on WhatsApp
ಶಿವಮೊಗ್ಗ: ಮಲೆನಾಡಿನ ಒಡಲ ಬೆಂಕಿಯಿಂದ ಜೀವ ಜಲವು ಬರಿದಾಗುತ್ತಿದ್ದು, ಸಿಹಿ ನೀರಿನಲ್ಲಿದ್ದ ಸುಮಾರು 48 ಕ್ಕೂ ಹೆಚ್ಚು ಪ್ರಭೇದಗಳ ಸಂತತಿ ಕಡಿಮೆಯಾಗಿದೆ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಹೇಳಿದರು.
ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಪ್ರಕೃತಿ ಒಡಲ ಚಿಂತನೆ ಗೋಷ್ಟಿಯಲ್ಲಿ ಬರಿದಾಗುತ್ತಿರುವ ನದಿ ಒಡಲು ವಿಷಯ ಕುರಿತಾಗಿ ಮಾತನಾಡಿದರು.
ಪರಿಸರ ತನ್ನ ಸಮತೋಲನ ಕಳೆದುಕೊಂಡಿದೆ. ಕಂಪದ ಗದ್ದೆಯಲ್ಲಿ ಕಾಣುತ್ತಿದ್ದ ತೇವಾಂಶವೇ ಒಣಗಿ ಹೋಗಿದೆ.‌ ಪಶ್ಚಿಮಘಟ್ಟಕ್ಕೆ ನೀರಿನ ಗೋಪುರ ಎಂದು ಕರೆಯಲಾಗುತ್ತದೆ. ಅಂತಹ ಪ್ರಕೃತೆ ಎಲ್ಲಿದೆ ಈವಾಗ. ಬರಿದಾದ ನದಿಯ ಪಕ್ಕದಲ್ಲಿ ಬಾವಿ ತೋಡಿ ತೋಟ ನಿರ್ವಹಿಸುವ ಪರಿಸ್ಥಿತಿ ಬಂದಿದೆ.
ಇದನ್ನೂ ಓದಿ   ಶಿವಮೊಗ್ಗ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗದ ಮಣ್ಣು ಅದ್ಭುತ ಪ್ರತಿಭೆಗಳನ್ನು ಸೃಷ್ಟಿಮಾಡಿದೆ
ಪ್ರತಿ ವರ್ಷ ತುಂಗೆ ಹಾಗೂ ಭದ್ರಾ ನದಿಯಲ್ಲಿ 24.16% ರಷ್ಟು ಬತ್ತಿ ಹೋಗುತ್ತಿದೆ. 160 ಕಿಮಿ ಹರಿಯಬೇಕಿದ್ದ ಶರಾವತಿ ನದಿ, ಡ್ಯಾಂಗಳು ಎಂಬ ಅಭಿವೃದ್ಧಿಯ ಪ್ರಹಾರಕ್ಕೆ ಸಿಲುಕಿ ಕೇವಲ 8 ಕಿಮಿ ಮಾತ್ರ ಹರಿಯುತ್ತಿದೆ. ಕುಮದ್ವತಿ ನದಿ ಮಳೆಗಾಲದಲ್ಲಿ ಮಾತ್ರ ಹರಿಯುವ ನದಿಯಾಗಿದೆ. ಮಲೆನಾಡಿನಲ್ಲಿ ಸುಮಾರು 75 ಸಾವಿರ ಎಕರೆ ಕಾಡು, ಕೃಷಿ ಭೂಮಿಯಾಗಿ ಪರಿವರ್ತನೆಗೊಂಡಿದೆ. ಒಂದು ಮರ 15 ಸಾವಿರ ಲೀಟರ್ ಹಿಡಿದು ತನ್ನ ಅಂತರ್ಜಲದಲ್ಲಿ ಶೇಖರಣೆ ಮಾಡಿಕೊಳ್ಳುತ್ತದೆ.  ಕೃಷಿ ಭೂಮಿಯ ಪರಿವರ್ತನೆಯಿಂದಾಗಿ  20 ಲಕ್ಷ ಕೋಟಿ ನೀರಿನ ಅಂತರ್ಜಲ ಕಳೆದುಕೊಂಡಿದ್ದೇವೆ.
ಮಲೆನಾಡಿನಲ್ಲಿ 500 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಯುವ ಅನಿವಾರ್ಯತೆಯಿದೆ.‌ ಸರ್ಕಾರದ ಅಭಿವೃದ್ಧಿ ನೀತಿಗಳು ಬದಲಾಗಬೇಕಿದೆ. ಒಳ್ಳೆಯ ಪರಿಸರ ನೀಡುವುದು ಅಭಿವೃದ್ಧಿ ಎಂಬ ಪರಿಕಲ್ಪನೆಯೇ, ಆಳುವ ಜನಪ್ರತಿನಿಧಿಗಳಿಗಿಲ್ಲ. ಪರಿಸರ ಉಳಿಸುವ ಯಾವ ಯೋಜನೆಗಳು ರೂಪಗೊಂಡಿಲ್ಲ. ನಾಗರೀಕರಾಗಿ ನಾವು ಕೂಡ ಒಂದಿಷ್ಟು ಕಾಡು ಕೊಡಿ ಎಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ಅನಿವಾರ್ಯತೆ ಇದೆ. ಹೀಗೆ ಪರಿಸರದ ಮೇಲೆ ಅಭಿವೃದ್ಧಿಯ ಪ್ರಹಾರ ಮುಂದುವರೆದಲ್ಲಿ, ಭವಿಷ್ಯದಲ್ಲಿ ತುಂಗೆ, ಶರಾವತಿ ನದಿಗಳು ಸಂಪೂರ್ಣ ನಶಿಸಿ ಹೋಗಲಿದೆ ಎಂದು ಹೇಳಿದರು.
ಪ್ರಕೃತಿ ಉಳಿಸಲು ನಾವೇನು ಮಾಡಬೇಕು ಎಂಬ ವಿಚಾರದ ಬಗ್ಗೆ ಖ್ಯಾತ ಪ್ರಕೃತಿ ತಜ್ಞ ಡಾ.ವಿ.ಎಲ್.ಎಸ್.ಕುಮಾರ್ ಮಾತನಾಡಿ, ಶಿವಮೊಗ್ಗ ನಗರಕ್ಕೆ ಪ್ರವೇಶಿಸುವ ತುಂಗಾ ನದಿ, ಚರಂಡಿ ನೀರಿಗಿಂತ ಕಲುಷಿತವಾಗಿ ಹರಿಯುತ್ತಿದೆ. ಶಿವಮೊಗ್ಗ ನಗರದ ಗಾಳಿ ಅತ್ಯಂತ ಕೆಟ್ಟ ರೂಪದಲ್ಲಿ ವಾಯುಮಾಲಿನ್ಯಗೊಂಡಿದೆ. ದೆಹಲಿ‌, ಹರಿಯಾಣದಲ್ಲಿ ಹೆಚ್ಚು ಮಾಲಿನ್ಯ ಸೂಸುವ ನಿಷೇಧಗೊಂಡ ವಾಹನಗಳು, ಶಿವಮೊಗ್ಗ ನಗರದಲ್ಲಿ ಅನಾಯಾಸವಾಗಿ ಓಡಾಡುತ್ತಿದೆ.‌ ರಾಸಾಯನಿಕ ಪದಾರ್ಥಗಳ ಗೊಬ್ಬರದ ಬಳಕೆಯಿಂದ ಪರಿಸರ ಸಂಪೂರ್ಣ ಹಾಳಾಗಿದೆ. ತೋಟದ ಸುತ್ತಮುತ್ತ ಅಗಲವಾದ ಎಲೆಗಳ ಮರಗಳನ್ನು ನೆಡಲು ಪ್ರಯತ್ನಿಸಿ. ಅದು ಹೆಚ್ಚು ಆಮ್ಲಜನಕ ಉತ್ಪಾದಿಸುತ್ತದೆ. ಹುಟ್ಟು ಹಬ್ಬದ ದಿನ ಗಿಡಗಳನ್ನು ನೆಡಲು ಆಸಕ್ತರಾಗಿ ಎಂದು ಹೇಳಿದರು.
ಇದನ್ನೂ ಓದಿರಿಪ್ಪನ್‌ಪೇಟೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಪದ್ಮಾವತಿ ದೇವಿಯ ಮಹಾ ರಥೋತ್ಸವ ಸಂಪನ್ನ
ಹೊಸ ಕ್ಷೇತ್ರ-ಹೊಸ ಜಿಲ್ಲೆ-ಮಲೆನಾಡ ಒಡಲ ಚಿಂತೆ ಕುರಿತು ಸಾಗರದ ಹಿರಿಯ ನಾಯಕ‌ ಬಿ.ಆರ್.ಜಯಂತ್ ಮಾತನಾಡಿ, ಪರಿಸರ ಕಲುಷಿತಗೊಂಡಿದ್ದು ಕೇವಲ ಅರಣ್ಯ ನಾಶದಿಂದ ಮಾತ್ರವಲ್ಲ. ಆಧುನಿಕತೆಯ ಅನೇಕ ನಡವಳಿಕೆಗಳು ಕಾರಣ. ಸಮೂಹದಲ್ಲಿ ಸ್ವಚ್ಚತೆಯ ಸಂಸ್ಕೃತಿ ಇಲ್ಲದೆ ಇರುವ ನಡವಳಿಕೆಗಳು, ಪರಿಸರ ಮಾಲಿನ್ಯದ ಬಗ್ಗೆ ಹೆಚ್ಚು ಆತಂಕ ಪಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸ್ವಚ್ಚತೆಯೆ ದೈವತ್ವ ಎಂಬ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ತೀರ್ಥಹಳ್ಳಿ ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ನಿರೂಪಿಸಿದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com
Tags: kannada newskannada news livelatest newsshivamoggaShivamogga Sahitya Sammelana Goshtiwhat should we do to save nature?Wildfires in the mountains have drained away lifebloodಶಿವಮೊಗ್ಗ
Previous Post

ಶಿವಮೊಗ್ಗ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗದ ಮಣ್ಣು ಅದ್ಭುತ ಪ್ರತಿಭೆಗಳನ್ನು ಸೃಷ್ಟಿಮಾಡಿದೆ

Next Post

ಭದ್ರಾವತಿ ನಗರಸಭೆ, 1.46 ಕೋಟಿ ಉಳಿತಾಯ ಬಜೆಟ್ ಮಂಡನೆ, ಹೊಸ ಯೋಜನೆಗಳೇನು?

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಭದ್ರಾವತಿ ನಗರಸಭೆ, 1.46 ಕೋಟಿ ಉಳಿತಾಯ ಬಜೆಟ್ ಮಂಡನೆ, ಹೊಸ ಯೋಜನೆಗಳೇನು?

ಭದ್ರಾವತಿ ನಗರಸಭೆ, 1.46 ಕೋಟಿ ಉಳಿತಾಯ ಬಜೆಟ್ ಮಂಡನೆ, ಹೊಸ ಯೋಜನೆಗಳೇನು?

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

2
ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

2
ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

May 6, 2026
ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026
ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

May 6, 2026
ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

May 6, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

May 6, 2026
ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026

Copyright © 2026 Yuva Dhwani. Designed by KIPL